Site icon Vistara News

Asian Games : ಪಾಕಿಸ್ತಾನ ತಂಡವನ್ನು ಹೊರಗಟ್ಟಿದ ಅಫಘಾನಿಸ್ತಾನ; ನೆಟ್ಟಿಗರಿಂದ ಫುಲ್ ಟ್ರೋಲ್​!

Afghanistan cricket team

ಬೆಂಗಳೂರು: ಅಫ್ಘಾನಿಸ್ತಾನ ತಂಡವು ಪಾಕಿಸ್ತಾನ ತಂಡವನ್ನು ಏಷ್ಯನ್ ಗೇಮ್ಸ್​ನ ಕ್ರಿಕೆಟ್​ ಸೆಮಿಫೈನಲ್​ನಲ್ಲಿ ಸೋಲಿಸಿದೆ. ಆ ತಂಡದ ಪಾಲಿಗೆ ಇದು ಹೊಸ ಇತಿಹಾದ. ಹೀಗಾಗಿ ಟೂರ್ನಿಯ ಫೈನಲ್​ನಲ್ಲಿ ಭಾರತ ಮತ್ತು ಪಾಕ್ ನಡುವೆ ಪಂದ್ಯ ನಡೆಯುವುದಿಲ್ಲ. ಗುಲ್ಬಾದಿನ್ ನಬಿ ಮತ್ತು ಬಳಗವು ಮೈದಾನದಲ್ಲಿ ಶಿಸ್ತುಬದ್ಧವಾಗಿ ಆಡಿ ತಮ್ಮ ನೆರೆಯ ದೇಶದ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿತು. ಕೊನೆಯಲ್ಲಿ ನಾಯಕ 26 ರನ್ ಗಳ ನಿರ್ಣಾಯಕ ಆಟವನ್ನು ಆಡಿರುವುದು ಗೆಲುವಿಗೆ ಕಾರಣವಾಯಿತು. 2010 ಮತ್ತು 2014ರ ಏಷ್ಯನ್ ಗೇಮ್ಸ್​​ ಕ್ರಿಕೆಟ್ ಸ್ಪರ್ಧೆಯಲ್ಲಿ ಅಫ್ಘಾನಿಸ್ತಾನ ತಂಡ ಬೆಳ್ಳಿ ಪದಕ ಗೆದ್ದಿತ್ತು. ಈಗ ತಮ್ಮ ಮೂರನೇ ಭಾರಿ ಫೈನಲ್​ಗೇರಿದ್ದು ಭಾರತವನ್ನು ಎದುರಿಸಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಪಾಕಿಸ್ತಾನವನ್ನು 18 ಓವರ್​ಗಳಲ್ಲಿ ಕೇವಲ 115 ರನ್​ಗಳಿಗೆ ಸೀಮಿತಗೊಂಡಿತು. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ 15ಕ್ಕೆ 3 ವಿಕೆಟ್​ , ಸ್ಪಿನ್ನರ್​ಗಳಾದ ಕೈಸ್ ಅಹ್ಮದ್ (11ಕ್ಕೆ 2) ಹಾಗೂ ಜಹೀರ್ ಖಾನ್ 20ಕ್ಕೆ 2 ವಿಕೆಟ್ ಪಡೆದರು. ವೇಗಿಗಳಾದ ಕರೀಮ್ ಜನತ್ (12ಕ್ಕೆ 1) ಮತ್ತು ಗುಲ್ಬಾದಿನ್ ನೈಬ್ (29ಕ್ಕೆ 1) ಕೂಡ ವಿಕೆಟ್ ಕಬಳಿಸಿ ಪಾಕಿಸ್ತಾನವನ್ನು ಕಟ್ಟಿಹಾಕಿದರು.

ಉತ್ತರವಾಗಿ, ಅಫ್ಘಾನ್ ತಂಡ ಮೊದಲ 5 ಓವರ್ಗಳಲ್ಲಿ 35 ರನ್​ಗಳಿಗೆ ತಮ್ಮ ಆರಂಭಿಕರನ್ನು ಕಳೆದುಕೊಂಡಿದ್ದರಿಂದ ಅಗತ್ಯವಾದಷ್ಟು ಉತ್ತಮ ಆರಂಭ ಪಡೆಯಲಿಲ್ಲ. ಬಳಿಕ ನೂರ್ ಅಲಿ ಝದ್ರನ್ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳೊಂದಿಗೆ 39 ರನ್ ಗಳಿಸಿದರು. ಆದರೆ ಮೂರನೇ ಸಿಕ್ಸರ್ ಹುಡುಕುವ ಪ್ರಯತ್ನದಲ್ಲಿ ಔಟಾದರು.

ಇದನ್ನೂ ಓದಿ : Tilak Varma : ಅಮ್ಮಾ ಈ ಸಾಧನೆ ನಿನಗರ್ಪಣೆ, ಅರ್ಧಶತಕ ಬಾರಿಸಿ ತಾಯಿಯನ್ನು ಸ್ಮರಿಸಿದ ತಿಲಕ್​ ವರ್ಮಾ

ಎರಡನೇ ಇನ್ನಿಂಗ್ಸ್​ನಲ್ಲಿ ಪಾಕ್​ ಸ್ಪಿನ್ನರ್​ಗಳಾದ ಅರಾಫತ್ ಮಿನ್ಹಾಸ್ (2/11) ಮತ್ತು ಉಸ್ಮಾನ್ ಖಾದಿರ್ (2/20) ಅವರಿಗೆ ಸುಫಿಯಾನ್ ಮುಖೀಮ್ (1/18) ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ 15 ನೇ ಓವರ್​ನಲ್ಲಿ 84 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತು ಆಫ್ಘನ್​ ತಂಡ. ಬಳಿಕ ನೈಬ್ ನಂತರ ಮೂರು ಸಿಕ್ಸರ್​ಗಳನ್ನು ಬಾರಿಸಿ ಪಂದ್ಯದ ಗತಿ ಬದಲಿಸಿದರು. 4 ವಿಕೆಟ್​​ಗಳು ಮತ್ತು 13 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಭಾರತ ವಿರುದ್ಧ ಫೈನಲ್​ಗೆ ವೇದಿಕೆ ನಿರ್ಮಿಸಿಕೊಂಡಿತು.

Exit mobile version