Site icon Vistara News

IND vs WI : ಭಾರತ ವಿರುದ್ಧದ ಟೆಸ್ಟ್ ಸರಣಿಗೆ ವಿಂಡೀಸ್​ನ ಪ್ರಮುಖ ಆಟಗಾರರು ಔಟ್​?

West indies cricket team

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಇನ್ನು ಎರಡು ವಾರಗಳು ಮಾತ್ರ ಬಾಕಿಯಿದೆ ಹೀಗಾಗಿ.ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಸರಣಿಗೆ ತನ್ನ ತಯಾರಿ ಶಿಬಿರವನ್ನು ಪ್ರಕಟಿಸಿದೆ. ಕ್ರೇಗ್ ಬ್ರಾಥ್​ವೇಟ್​ ತಂಡವನ್ನು ಮುನ್ನಡೆಸಲಿದ್ದಾರೆ, ಆದರೆ, ಈ ತಂಡದಲ್ಲಿ ವಿಂಡೀಸ್ ತಂಡದ ಪ್ರಮುಖ ಆಟಗಾರರಾದ ಜೇಸನ್​ ಹೋಲ್ಡರ್ ಹಾಗೂ ನಿಕೋಲಸ್ ಪೂರನ್​ ಇಲ್ಲ. ಈ ಮೂಲಕ ಅವರು ಟೆಸ್ಟ್ ತಂಡದಲ್ಲಿ ಇರುವರೇ ಎಂಬ ಅನುಮಾನ ಮೂಡಿದೆ. ಆಧರೆ, ಮೂಲಗಳ ಪ್ರಕಾರ ವಿಶ್ವಕಪ್ ಅರ್ಹತಾ ಪಂದ್ಯಗಳಿಂದಾಗಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಡೊಮಿನಿಕಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮೂರು ದಿನಗಳ ಮೊದಲು ಜುಲೈ 9 ರವರೆಗೆ ಇವರಿಬ್ಬರು ಜಿಂಬಾಬ್ವೆಯಲ್ಲಿ ಇರುತ್ತಾರೆ. ಹೀಗಾಗಿ ಅವರು ಅಭ್ಯಾಸ ಪಂದ್ಯಕ್ಕೆ ಲಭ್ಯರಿಲ್ಲ ಎಂದು ಹೇಳಲಾಗುತ್ತಿದೆ.

ಈ ತಂಡವು ಪೂರ್ವಸಿದ್ಧತಾ ತಂಡ ಎಂಬುದನ್ನು ಗಮನಿಸುವುದು ಮುಖ್ಯ. ವೆಸ್ಟ್ ಇಂಡೀಸ್​​ ತಂಡದ ಹಲವಾರು ಆಟಗಾರರು ಪ್ರಸ್ತುತ ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ರಾಸ್ಟನ್​ ಚೇಸ್, ಕೈಲ್ ಮೇಯರ್ಸ್ ಮತ್ತು ಅಲ್ಜಾರಿ ಜೋಸೆಫ್ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಸಮಯಕ್ಕೆ ಬಂದು ಆಡುವ ನಿರೀಕ್ಷೆಯಿದೆ. ಜುಲೈ 7ರಂದು ವೆಸ್ಟ್ ಇಂಡೀಸ್ ತನ್ನ ಕೊನೆಯ ಸೂಪರ್ ಸಿಕ್ಸ್ ಪಂದ್ಯವನ್ನು ಆಡಲಿದೆ. ಜುಲೈ 9 ರಂದು ಫೈನಲ್ ನಡೆಯಲಿದೆ.

ಹರಾರೆಯಿಂದ ಡೊಮಿನಿಕಾಗೆ ಸೀಮಿತ ವಿಮಾನ ಯಾನ ಸಂಪರ್ಕವಿದೆ. ಹೀಗಾಗಿ ಆಟಗಾರರ ಭಾಗವಹಿಸುವಿಕೆಯನ್ನು ಸಂದೇಹಕ್ಕೆ ಸಿಲುಕಿಸಿದೆ. ಒಂದು ವೇಳೆ ವೆಸ್ಟ್ ಇಂಡೀಸ್ ವಿಶ್ವ ಕಪ್​ ಅರ್ಹತಾ ಸುತ್ತಿನ ಫೈನಲ್ ಪ್ರವೇಶಿಸಿದರೆ, ಅವರು ಎರಡನೇ ದರ್ಜೆಯ ತಂಡವನ್ನು ಕಣಕ್ಕಿಳಿಸಬಹುದು. ಫೈನಲ್ ತಲುಪುವ ಮೂಲಕ ತಂಡದ ವಿಶ್ವಕಪ್ ಸ್ಥಾನವನ್ನು ಖಾತರಿಯಾಗುತ್ತದೆ. ಪಂದ್ಯಾವಳಿಯನ್ನು ಗೆಲ್ಲುವುದರಿಂದ ಯಾವುದೇ ಹೆಚ್ಚುವರಿ ಲಾಭಗಳಿಲ್ಲ.

ಟೆಸ್ಟ್ ಸ್ಪೆಷಲಿಸ್ಟ್​​ ಆಟಗಾರಾದ ಕ್ರಗ್​ ಬ್ರಾಥ್ವೈಟ್ ಮತ್ತು ನರೈನ್ ಚಂದ್ರಪಾಲ್, ಜೋಶ್ ಡಾ ಸಿಲ್ವಾ ಮತ್ತು ಕೆಮರ್ ರೋಚ್ 18 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಾನನ್ ಗೇಬ್ರಿಯಲ್, ಆಂಡರ್ಸನ್ ಫಿಲಿಪ್, ರಖೀಮ್ ಕಾರ್ನ್ವಾಲ್, ಜೇಡನ್ ಸೀಲ್ಸ್ ಮತ್ತು ಎನ್ಕ್ರುಮಾ ಬೊನ್ನರ್ ಕೂಡ ಶಿಬಿರದ ಭಾಗವಾಗಿದ್ದಾರೆ. ಕವೆಮ್ ಹಾಡ್ಜ್, ಅಲಿಕ್ ಅಥಾನಾಜೆ ಮತ್ತು ಜೈರ್ ಮೆಕ್ ಅಲಿಸ್ಟರ್ ಅಭ್ಯಾಸ ಬಳಗ ಸೇರಿರುವ ಹೊಸ ಮುಖಗಳು.

ಇದನ್ನೂ ಓದಿ : Sourav Ganguly: 18 ತಿಂಗಳು ತಂಡದಿಂದ ದೂರ ಉಳಿದ ಆಟಗಾರನಿಗೆ ಉಪನಾಯಕನ ಸ್ಥಾನ ನೀಡಿದ್ದು ಸರಿಯಲ್ಲ; ಗಂಗೂಲಿ

ತರಬೇತಿ ಶಿಬಿರವು ಜೂನ್ 30 ರ ಶುಕ್ರವಾರ ಆಂಟಿಗುವಾದ ಸಿಸಿಜಿಯಲ್ಲಿ ಪ್ರಾರಂಭವಾಗುತ್ತದೆ. ತಂಡವು ಜುಲೈ 9 ರ ಭಾನುವಾರ ಡೊಮಿನಿಕಾಗೆ ಪ್ರಯಾಣಿಸಲಿದೆ. ಹೋಲ್ಡರ್ ಮತ್ತು ಬಳಗ ಅಂಡ್ ಕೋ ನೇರವಾಗಿ ಡೊಮಿನಿಕಾದಲ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ. ಪಂದ್ಯಕ್ಕಾಗಿ ಪ್ರಯಾಣಿಸುವ ಮೊದಲು ಭಾರತವು ಬಾರ್ಬಡೋಸ್​ನಲ್ಲ ತರಬೇಇ ಶಿಬಿರ ನಡೆಸಲಿದೆ.

Exit mobile version