Site icon Vistara News

Ind vs wi : ಟೆಸ್ಟ್​ ಸರಣಿಯಲ್ಲಿ ಮ್ಯಾನ್​ ಆಫ್​ ದಿ ಸೀರಿಸ್ ಪ್ರಶಸ್ತಿಯೇ ಕೊಟ್ಟಿಲ್ಲ!

mohammed siraj

ಪೋರ್ಟ್​​ಆಫ್​ ಸ್ಪೇನ್​ (ವೆಸ್ಟ್ ಇಂಡೀಸ್​​) : ವೆಸ್ಟ್ ಇಂಡೀಸ್ ಮತ್ತು ಭಾರತ (Ind vs wi) ನಡುವಿನ ಬಹು-ಸ್ವರೂಪದ ಸರಣಿಯು ಎರಡು ಟೆಸ್ಟ್ ಪಂದ್ಯಗಳೊಂದಿಗೆ ಪ್ರಾರಂಭವಾಗಿದೆ. ಟೆಸ್ಟ್​​ ಸರಣಿಯು ಭಾರತದ ಪಾಲಾಗಿದ್ದು ಮೊದಲ ಪಂದ್ಯದಲ್ಲಿ ಗೆದ್ದ ಭಾರತ 1-0 ಅಂತರದೊಂದಿಗೆ ಟ್ರೋಫಿ ಗೆದ್ದಿದೆ. ಎರಡನೇ ಪಂದ್ಯ ಮಳೆಯಿಂದ ಕೊಚ್ಚಿ ಹೋದ ಕಾರಣ ಡ್ರಾ ಗೊಂಡಿದೆ. ಭಾರತ ತಂಡಕ್ಕೆ ಈ ಪಂದ್ಯದಲ್ಲಿಯೂ ಗೆಲುವಿನ ಸಾಧ್ಯತೆಗಳಿದ್ದವು. ನಿರೀಕ್ಷೆಯಂತೆ, ರೋಹಿತ್ ಶರ್ಮಾ ನೇತೃತ್ವದ ಭಾರತವು ಎರಡಊ ಟೆಸ್ಟ್ ಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿತು. ಆದರೆ ಇವೆಲ್ಲದೆ ನಡುವೆ ಸರಣಿ ಮುಗಿದ ಬಳಿಕ ಸರಣಿ ಶ್ರೇಷ್ಠ ಪ್ರಶಸ್ತಿ ನೀಡದಿರುವುದು ಅಚ್ಚರಿ ಎನಿಸಿದೆ.

ಭಾರತ ತಂಡ ಮೊದಲ ಟೆಸ್ಟ್​​ನಲ್ಲಿ ವೆಸ್ಟ್ ಇಂಡೀಸ್ ಮೇಲೆ ಪ್ರಾಬಲ್ಯ ಸಾಧಿಸಿತು. ಪಂದ್ಯವನ್ನು ಇನ್ನಿಂಗ್ಸ್ ಮತ್ತು 141 ರನ್​​ಗಳಿಂದ ತಮ್ಮದಾಗಿಸಿಕೊಂಡಿತು. ಎರಡನೇ ಟೆಸ್ಟ್​​ನಲ್ಲಿ ಇದೇ ರೀತಿಯ ಪ್ರದರ್ಶನ ನೀಡಿತು ನಾಲ್ಕು ದಿನಗಳ ಆಟದುದ್ದಕ್ಕೂ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿತ್ತು. ಆದಾಗ್ಯೂ, ಪಂದ್ಯವನ್ನು ಐದನೇ ಮತ್ತು ಅಂತಿಮ ದಿನದಲ್ಲಿ ನಿರಂತರವಾಗಿ ಸುರಿದ ಮಳೆ ಆಟವನ್ನು ಡ್ರಾದತ್ತ ಕೊಂಡೊಯ್ದಿತು. ಇದು ಭಾರತಕ್ಕೆ 1-0 ಅಂತರದಿಂದ ಸರಣಿ ಜಯವನ್ನು ನೀಡಿತು.

ಎರಡು ಪಂದ್ಯಗಳಾದ್ಯಂತ ಭಾರತ ತಂಡದ ಆಟಾರರ ಹಲವು ಪ್ರದರ್ಶನಗಳು ಅಭಿಮಾನಿಗಳನ್ನು ವಿಸ್ಮಯಗೊಳಿಸಿತ್ತು. ಚೊಚ್ಚಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕವಾಗಿರಬಹುದು, ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಶತಕದ ಕೊರತೆಯನ್ನು ನೀಗಿಸಿದ್ದಾಗಿರಬಹುದು ಅಥವಾ ಎರಡನೇ ಟೆಸ್ಟ್​​ನಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರ ಪ್ರತಿಭೆಯಾಗಿರಬಹುದು ಎಲ್ಲವೂ ಭಾರತ ತಂಡಕ್ಕೆ ವಿಶ್ವಾಸ ಮೂಡಿಸಿದ ಸಂಗತಿ.

ಯಾಕಿಲ್ಲ ಸರಣಿ ಶ್ರೇಷ್ಠ?

ಸರಣಿಯ ಆಟಗಾರ ಪ್ರಶಸ್ತಿಯನ್ನು ಗೆಲ್ಲಬಹುದಾದ ಅನೇಕ ಸ್ಪರ್ಧಿಗಳು ಇದ್ದರು. ಆದಾಗ್ಯೂ, ಯಾವುದೇ ಆಟಗಾರನಿಗೆ ಪ್ರಶಸ್ತಿ ನೀಡಿಲ್ಲ. ಅದರ ಬಗ್ಗೆ ಯಾವುದೇ ಪ್ರಕಟಣೆಗಳಿಲ್ಲ ಮತ್ತು ಕಾರಣವನ್ನೂ ಹೇಳಿಲ್ಲ. . ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಮತ್ತು ಸರಣಿ ಶ್ರೇಷ್ಠ ಆಟಗಾರನನ್ನು ಘೋಷಿಸಲಾಗುತ್ತದೆಯೇ ಕಾದು ನೋಡಬೇಕಾಗಿದೆ.

27ರಿಂದ ಏಕ ದಿನ ಸರಣಿ

ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ, ವೆಸ್ಟ್ ಇಂಡೀಸ್ ಮತ್ತು ಭಾರತ ಎರಡೂ ಜುಲೈ 27 ರ ಗುರುವಾರ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಮತ್ತೆ ಮುಖಾಮುಖಿಯಾಗಲಿವೆ. ಟೆಸ್ಟ್ ಸರಣಿಯನ್ನು ಕಳೆದುಕೊಂಡ ನಂತರ, ಶಾಯ್ ಹೋಪ್ ನೇತೃತ್ವದ ವಿಂಡೀಸ್ ತಂಡ 50 ಓವರ್​ಗಳ ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನ ನೀಡಲು ಉತ್ಸುಕವಾಗಿದೆ.

ಇದನ್ನೂ ಓದಿ : MS Dhoni : ಧೋನಿ ಮತ್ತು ಜಡೇಜಾ ನಡುವೆ ಮನಸ್ತಾಪ ಇದೆಯೇ? ಅಂಬಾಟಿ ರಾಯುಡು ಏನು ಹೇಳ್ತಾರೆ ಕೇಳಿ

ಕ್ರಿಕೆಟ್ ವೆಸ್ಟ್ ಇಂಡೀಸ್ ಕೂಡ ಮುಂಬರುವ ಏಕದಿನ ಸರಣಿಗೆ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶಾಯ್ ಹೋಪ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಲಾಗಿದ್ದು, ಶಿಮ್ರಾನ್ ಹೆಟ್ಮೆಯರ್ ಮತ್ತು ಒಶೇನ್ ಥಾಮಸ್ ಅವರಂತಹ ಸ್ಟಾರ್ ಆಟಗಾರರು ಏಕದಿನ ತಂಡಕ್ಕೆ ಮರಳಿದ್ದಾರೆ.

Exit mobile version