Site icon Vistara News

Team India : ರೋಹಿತ್​ಗೆ ಇಲ್ಲ ರೆಸ್ಟ್​, ಪೂಜಾರಗೂ ಉಂಟು ಚಾನ್ಸ್​!

Rohit Sharma

#image_title

ನವ ದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಲಭ್ಯರಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಹಿಂದೆ ಟೆಸ್ಟ್ ಸರಣಿಯಿಂದ (Team India) ರೋಹಿತ್​ಗೆ ವಿಶ್ರಾಂತಿ ನೀಡಬಹುದು ಮತ್ತು ಬೇರೊಬ್ಬರು ತಾತ್ಕಾಲಿಕವಾಗಿ ನಾಯಕತ್ವ ವಹಿಸಬಹುದು ಎಂದು ವರದಿಗಳಾಗಿದ್ದವು. ಆದರೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ರೋಹಿತ್​ ಪ್ರವಾಸ ಹೋಗುತ್ತಾರೆ ಹಾಗೂ ಅವರೇ ತಂಡದ ನೇತೃತ್ವ ವಹಿಸುತ್ತಾರೆ ಎಂಬುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಜಸ್​ಪ್ರಿತ್​ ಬುಮ್ರಾ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ ಎಂಬುದಾಗಿಯೂ ಮಾಹಿತಿ ನೀಡಿದ್ದಾರೆ. ಟೆಸ್ಟ್​ ತಂಡದಲ್ಲಿ ಚೇತೇಶ್ವರ ಪೂಜಾರ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಪೂಜಾರ ಉಪಸ್ಥಿತಿಯ ಹೊರತಾಗಿಯೂ, ಆಯ್ಕೆದಾರರು ಎರಡು ಟೆಸ್ಟ್​ ಪಂದ್ಯಗಳ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಸೇರಿಸಲು ಉತ್ಸುಕರಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿರುವ ಸರ್ಫರಾಜ್ ಟೀಮ್​ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಹೀಗಾಗಿ ಅವರು ಅವಕಾಶ ಸಿಗಬಹುದು ಎನ್ನಲಾಗಿದೆ.

“ರೋಹಿತ್ ಫಿಟ್ ಆಗಿದ್ದು, ತಂಡದ ಆಯ್ಕೆಗೆ ಲಭ್ಯರಿದ್ದಾರೆ. ಅವರಿಗೆ ಇದೀಗ ಸಾಕಷ್ಟು ವಿರಾಮ ಸಿಗುತ್ತಿದೆ. ಆದ್ದರಿಂದ, ಕೆಲಸದ ಹೊರೆ ನಿರ್ವಹಣಾ ಕಾಳಜಿಯೂ ಇಲ್ಲ. ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​ ಒಂದಕ್ಕೆ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ನಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳಿವೆ. ಅವರ ಕಳಪೆ ಫಾರ್ಮ್ ಈ ಕಳವಳಕ್ಕಿರುವ ಹಿನ್ನೆಲೆಯಾಗಿದೆ. ಆದರೆ ವಿಶ್ವಕಪ್ 2023ಕ್ಕೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ವಿಂಡೀಸ್ ಸರಣಿಯು ಅವರಿಗೆ ಫಾರ್ಮ್​ಗೆ ಮರಳಲು ವೇದಿಕೆಯಾಗಬಹುದು. ಈ ಅವಕಾಶವನ್ನು ನಷ್ಟ ಮಾಡಿಕೊಳ್ಳುವುದಕ್ಕೆ ಅವರು ಸಿದ್ಧರಿಲ್ಲ.

ಐಪಿಎಲ್ ಮತ್ತು ಡಬ್ಲ್ಯುಟಿಸಿ ಫೈನಲ್​ನಲ್ಲಿ ಸಂಪೂರ್ಣ ವಿಫಲವಾಗಿದ್ದರೂ, ರೋಹಿತ್ ಅವರ ಬ್ಯಾಟಿಂಗ್​ ಅಂಕಿಅಂಶಗಳು ಉತ್ತಮವಾಗಿವೆ. ಕಳೆದ 12 ತಿಂಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ 49.27ರ ಸರಾಸರಿ ಹೊಂದಿದ್ದಾರೆ. ಅವರು 13 ಇನ್ನಿಂಗ್ಸ್ ಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದು, 111.52 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟೆಸ್ಟ್​​ನಲ್ಲಿ ಅವರು ಆಡಿದ ಕೇವಲ 5 ಪಂದ್ಯಗಳಲ್ಲಿ 37.5 ಸರಾಸರಿ ಹೊಂದಿದ್ದಾರೆ. ಹೀಗಾಗಿ ಅವರು ಕಳಪೆ ಫಾರ್ಮ್​ನಲ್ಲಿದ್ದಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Asia Cup 2023 : ಏಷ್ಯಾವನ್ನೇ ಗೆಲ್ಲಲಿದೆ ರೋಹಿತ್​ ಪಡೆ, ಸ್ಟಾರ್​ ಸ್ಪೋರ್ಟ್ಸ್​ ಟ್ರೈಲರ್​ ಬಿಡುಗಡೆ

“ಹೌದು, ಅವರು ಐಪಿಎಲ್ ಮತ್ತು ಡಬ್ಲ್ಯುಟಿಟಿ ಫೈನಲ್​ನಲ್ಲಿ ಹೆಚ್ಚು ರನ್ ಗಳಿಸಿಲ್ಲ. ಆದರೆ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಉತ್ತಮವಾಗಿ ಆಡಿದ್ದಾರೆ . ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಶತಕ ಗಳಿಸಿದ್ದಾರೆ. ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಫಾರ್ಮ್ ಆಧಾರದ ಮೇಲೆ ಅವರನ್ನು ಟೀಕಿಸುವುದು ಕಠಿಣ” ಎಂದು ಅಧಿಕಾರಿ ಹೇಳಿದ್ದಾರೆ.

ಭಾರತ ವಿರುದ್ಧ ವಿಂಡೀಸ್ ತಂಡ ಶೀಘ್ರ ಆಯ್ಕೆ

ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ಮುಂದಿನ ವಾರ ವೆಸ್ಟ್ ಇಂಡೀಸ್ ಪ್ರವಾಸದ ತಂಡದ ಆಯ್ಕೆಗಾಗಿ ಸಭೆ ಸೇರಲಿದ್ದಾರೆ. ಜುಲೈ ಮೊದಲ ವಾರದಲ್ಲಿ ಟೀಂ ಇಂಡಿಯಾ ವಿಂಡೀಸ್​​ ಪ್ರವಾಸ ಕೈಗೊಳ್ಳಲಿದೆ. ಲಂಡನ್ ಪ್ರವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲ್ಲಿಂದ ನೇರವಾಗಿ ಹೋಗಲಿದ್ದಾರೆ.

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ರೋಹಿತ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಮತ್ತು ವಿರಾಟ್ ಟಿ20 ಮಾದರಿಯಲ್ಲಿ ಆಡುವುದು ಡೌಟ್​. ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದ ಸಾಧ್ಯತೆಗಳೇನು?

Exit mobile version