Site icon Vistara News

Harmanpreet Kaur : ನಾನು ಶಾಲೆಗೆ ಹೋಗುವ ಹುಡುಗಿಯಲ್ಲ, ಹರ್ಮನ್​ಪ್ರೀತ್​ ತಿರುಗೇಟು ಕೊಟ್ಟಿದ್ದು ಯಾರಿಗೆ?

Not a schoolgirl mistake...': Harmanpreet hits back at Hussain for taunting her run-out in World Cup semifinal vs AUS

#image_title

ಕೇಪ್​ಟೌನ್​: ಭಾರತ ಮಹಿಳೆಯರ ತಂಡ ವಿಶ್ವ ಕಪ್​ನಲ್ಲಿ ನಿರಾಸೆ ಎದುರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ 5 ರನ್​ಗಳ ವಿರೋಚಿತ ಸೋಲು ಅನುಭವಿಸಿದೆ. ಭಾರತ ತಂಡದ ಸೋಲು ಕಾಣಲು ನಾಯಕಿ ಹರ್ಮನ್​ಪ್ರಿತ್​ ಕೌರ್ (Harmanpreet Kaur) ರನ್​ಔಟ್ ಆಗಿದ್ದೇ ಕಾರಣ ಎನ್ನಲಾಗುತ್ತಿದೆ. ಭಾರತ ತಂಡದ ಪಾಲಿಗೆ ಹರ್ಮನ್​ ರನ್​ಔಟ್​ ದುರದೃಷ್ಟವೇ ಸರಿ. ಆದರೆ, ಸಾಕಷ್ಟು ಮಂದಿ ಅಷ್ಟೊಂದು ಸುಲಭವಾಗಿ ರನ್​ಔಟ್ ಆಗಿರುವ ಬಗ್ಗೆ ಟೀಕೆಗಳು ವ್ಯಕ್ತಗೊಂಡಿವೆ. ಹಿರಿಯ ಆಟಗಾರರು ಅನೇಕರು ಅವರ ಫಿಟ್ನೆಸ್​ ಹಾಗೂ ಚಾತುರ್ಯವನ್ನು ಪ್ರಶ್ನಿಸಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್​ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್​ ವಿಶ್ಲೇಷಕ ನಾಸಿರ್​ ಹುಸೇನ್​, ಶಾಲಾ ಮಕ್ಕಳು ಮಾಡುವ ತಪ್ಪು ಎಂದು ಟೀಕೆ ಮಾಡಿದ್ದಾರೆ. ಇದಕ್ಕೆ ಭಾರತ ತಂಡದ ನಾಯಕ ಖಾರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹರ್ಮನ್​ಪ್ರೀತ್​ ಕೌರ್​ 34 ಎಸೆತಗಳಲ್ಲಿ 52 ರನ್​ ಬಾರಿಸಿದ್ದರು. ಅವರು ಕ್ರೀಸ್​ನಲ್ಲಿ ಇರುವ ತನಕ ಭಾರತ ತಂಡ ಗೆಲುವು ಸಾಧಿಸುತ್ತದೆ ಎಂದು ಅಂದುಕೊಳ್ಳಲಾಗಿತ್ತು. ಆ ವೇಳೆ ಭಾರತ ತಂಡಕ್ಕೆ 33 ಎಸೆತಗಳಲ್ಲಿ 41 ರನ್​ ಮಾತ್ರ ಬೇಕಾಗಿತ್ತು. ಬ್ಯಾಟ್​ ನೆಲದಲ್ಲಿ ಸರಿಯಾಗಿ ಜಾರದ ಕಾರಣ ಹರ್ಮನ್​ಪ್ರೀತ್​ ಕೌರ್​ ಅನಗತ್ಯ ರನ್​ಔಟ್​ಗೆ ಬಲಿಯಾಗಿದ್ದರು. ಈ ವೇಳೆ ಲೈವ್​ ಕಾಮೆಂಟರಿ ಮಾಡುತ್ತಿದ್ದ ನಾಸಿರ್ ಹುಸೇನ್​ ಶಾಲಾ ಮಕ್ಕಳು ಮಾಡುವ ತಪ್ಪು ಎಂದು ಹೇಳಿದ್ದರು.

ಪಂದ್ಯ ಮುಗಿದ ಬಳಿಕ ಹರ್ಮನ್​ಪ್ರೀತ್​ ಕೌರ್​ಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಶಾಲಾ ಮಕ್ಕಳು ಮಾಡುವ ತಪ್ಪು ಎಂದೆಲ್ಲ ನಾಸಿರ್​ ಹುಸೇನ್​ ಹೇಳಿರುವುದು ನಿಮ್ಮ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆಯೇ ಎಂದು ಕೇಳಲಾಗಿತ್ತು.

ಇದನ್ನೂ ಓದಿ : Women’s T20 World Cup: ನಾನು ಅಳುವುದನ್ನು ನನ್ನ ದೇಶ ನೋಡಲು ಬಯಸುವುದಿಲ್ಲ; ಹರ್ಮನ್​ಪ್ರೀತ್​ ಕೌರ್

ಅವರು ಹಾಗೆ ಹೇಳಿದರಾ? ಹೌದಾ? ನಾನು ಅದನ್ನು ಒಪ್ಪುವುದಿಲ್ಲ. ಸಾಕಷ್ಟು ಬ್ಯಾಟರ್​ಗಳು ಸಿಂಗಲ್​ ರನ್ ಕದಿಯುವ ವೇಳೆ ಎಡವುದನ್ನು ನಾನು ನೋಡಿದ್ದೇನೆ. ಅಂತೆಯೇ ನಾನು ಈ ವಿಚಾರದಲ್ಲಿ ದುರದೃಷ್ಟವೇ ಸರಿ. ಆದರೆ ಶಾಲಾ ಮಕ್ಕಳ ತಪ್ಪು ಎಂಬುದನ್ನು ನಾನು ಒಪ್ಪಲಾರೆ ಎಂಬುದಾಗಿ ಹರ್ಮನ್​ಪ್ರೀತ್ ಕೌರ್​ ತಿರುಗೇಟು ಕೊಟ್ಟಿದ್ದಾರೆ.

Exit mobile version