Site icon Vistara News

ICC World Cup 2023: ಭಾರತ ಬಿಟ್ಟು ವಿಶ್ವಕಪ್​ ಗೆಲ್ಲುವ ತಂಡ ಹೆಸರಿಸಿದ ಗಂಭೀರ್​

Member of the Lok Sabha

ಮುಂಬಯಿ: ಏಕದಿನ ವಿಶ್ವಕಪ್​ನಲ್ಲಿ(ICC World Cup 2023) ಯಾವ ತಂಡ ಗೆಲ್ಲಬಹುದೆಂದು ಈಗಾಗಲೇ ಹಲವು ಕ್ರಿಕೆಟ್​ ಪಂಡಿತರು ಭವಿಷ್ಯ ನುಡಿದ್ದಾರೆ. ಹೆಚ್ಚಾಗಿ ಎಲ್ಲರು ಭಾರತವೇ ಈ ಬಾರಿ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಆದರೆ ಬಹುಪಾಲು ಭಾರತೀಯ ಮಾಜಿ ಆಟಗಾರರು ಭಾರತ ತಂಡ ವಿಶ್ವಕಪ್​ ಗೆಲ್ಲುವುದು ಅಸಾಧ್ಯವೆಂದು ಹೇಳಿದ್ದಾರೆ. ಈ ಸಾಲಿಗೆ ಈಗ ಮತ್ತೊಂದು ಸರ್ಪಡೆಯಾಗಿ ಗೌತಮ್​ ಗಂಭೀರ್(Gautam Gambhir)​ ಕೂಡಿಕೊಂಡಿದ್ದಾರೆ.

ಈ ಹಿಂದೆ ಯುವರಾಜ್​ ಸಿಂಗ್​, ಇರ್ಫಾನ್​ ಪಠಾಣ್​, ಮೊಹಮ್ಮದ್​ ಕೈಫ್​ ಸೇರಿ ಅನೇಕ ಮಾಜಿ ಆಟಗಾರರು ಭಾರತ ವಿಶ್ವಕಪ್ ಗೆಲ್ಲಬೇಕು ಎಂಬುದು ನಮ್ಮ ಆಶಯ ಆದರೆ ತಂಡವನ್ನು ನೋಡುವಾಗ ಸೆಮಿಫೈನಲ್​ ಪ್ರವೇಶಿಸುವುದೇ ಕಷ್ಟಕರ ಎಂದು ಹೇಳಿದ್ದರು. ಇದೀಗ 2011ರ ವಿಶ್ವಕಪ್​ನಲ್ಲಿ ಆಡಿದ್ದ ಮಾಜಿ ಆಟಗಾರನಾಗಿರುವ ಗೌತಮ್​ ಗಂಭೀರ್​ ಕೂಡ ಇದೇ ಮಾತನ್ನು ಹೇಳಿದ್ದಾರೆ.

ಆಸ್ಟ್ರೇಲಿಯಾಗೆ ವಿಶ್ವಕಪ್​

ಈ ಬಾರಿ​ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್​ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್​ರೌಂಡರ್​, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಕೂಡ ಕಪ್​ ಗೆಲ್ಲುವುದು ಕಷ್ಟ ಆದರೆ ಫೈನಲ್​ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್​ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್​ ಕಟ್ಟಬಲ್ಲ ಆಟಗಾರರು ವಿಶ್ವಕಪ್​ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್​ ಗೆಲ್ಲುವುದು ಅಸಾಧ್ಯ ಎಂದು ಗಂಭಿರ್​ ಹೇಳಿದ್ದಾರೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ತನ್ನ ವಿಶ್ವ ಕಪ್​ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8 ರಂದು ಚೆನ್ನೈಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್​ 22ಕ್ಕೆ ನಡೆಯಲಿದೆ.

ಯುವಿ ಹೇಳಿದ ಭವಿಷ್ಯವೇನು

ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಕೂಡ ಭಾರತ ಈ ಬಾರಿ ವಿಶ್ವಕಪ್​ ಗೆಲ್ಲುವುದು ಅನುಮಾನ ಎಂದು ಹೇಳಿದ್ದರು. ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ ಯುವರಾಜ್​ ಸಿಂಗ್​, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್​ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್​ ಗೆಲ್ಲುವುದು ಕಷ್ಟ” ಎಂದು ಹೇಳಿದ್ದರು.

ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ

“ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಸಮಸ್ಯೆ ಎದ್ದು ಕಾಣುತ್ತಿದೆ. 4 ಮತ್ತು 5 ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ತಂಡದ ಗೆಲುವನನ್ನು ನಿರ್ಧರಿಸಿತ್ತದೆ. ಆದರೆ ಸದ್ಯ ಭಾರತ ತಂಡದಲ್ಲಿ ಈ ಸ್ಥಾನಕ್ಕೆ ಸೂಕ್ತ ಆಟಗಾರ ಇಲ್ಲ. ಕಳೆದ ಕೆಲ ವರ್ಷಗಳಿಂದಲೂ ತಂಡಕ್ಕೆ ಇದುವೇ ಹಿನ್ನಡೆಯಾಗಿದೆ. 2011 ವಿಶ್ವ ಕಪ್​ನಲ್ಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿತ್ತು. ಹೀಗಾಗಿ ತಂಡ ಕಪ್​ ಗೆಲ್ಲುವಲ್ಲಿ ಸಹಕಾರಿಯಾಯಿತು. ಇನ್ನು ಗಾಯದ ಸಮಸ್ಯೆಯೂ ಭಾರತಕ್ಕೆ ಹಿನ್ನಡೆಯಾಗಿದೆ” ಹೀಗಾಗಿ ಭಾರತ ಕಪ್​ ಗೆಲ್ಲುವುದು ಅನುಮಾನ ಎಂದು ಯುವರಾಜ್​ ಹೇಳಿದ್ದರು.

Exit mobile version