Site icon Vistara News

ICC World Cup 2023: ವಿಶ್ವಕಪ್‌ ಟಿಕೆಟ್‌ ಕೇಳಬೇಡಿ; ಕೊಹ್ಲಿಯ ಕ್ಯೂಟ್‌ ರಿಕ್ವೆಸ್ಟ್‌

virat kohli

ಮುಂಬಯಿ: ಏಕದಿನ ವಿಶ್ವಕಪ್​ ಟೂರ್ನಿ(icc world cup 2023) ಆರಂಭಕ್ಕೆ ಇನ್ನು ಕೇವಲ 1 ದಿನಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ(virat kohli) ಪಂದ್ಯಗಳ ‘ಟಿಕೆಟ್‌ಗಾಗಿ ನನಗೆ ಸಂದೇಶ ಕಳುಹಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಇದನ್ನು ದಯವಿಟ್ಟು ಮಾಡಬೇಡಿ’ ಎಂದು ಆಪ್ತರಿಗೆ ಸಂದೇಶವೊಂದನ್ನು ನೀಡಿದ್ದಾರೆ.

“ವಿಶ್ವಕಪ್‌ಗೆ ಸಮೀಪಿಸುತ್ತಿರುವಾಗ, ಪಂದ್ಯಾವಳಿಯ ಟಿಕೆಟ್‌ಗಾಗಿ ನನಗೆ ವಿನಂತಿಸಬೇಡಿ ಎಂದು ನನ್ನ ಎಲ್ಲ ಪ್ರೀತಿಯ ಸ್ನೇಹಿತರ ಬಳಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಪಂದ್ಯಗಳನ್ನು ಮನೆಯಲ್ಲೇ ಕುಳಿತು ಆನಂದಿಸಿ”ಎಂದು ಕೊಹ್ಲಿ ಬುಧವಾರ ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.


ವಿಶ್ವಕಪ್‌ನಲ್ಲಿದೆ ಕೊಹ್ಲಿಯ ವಿಶ್ವ ದಾಖಲೆ

48 ವರ್ಷಗಳ ಇತಿಹಾಸ ಇರುವ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಅವರದ್ದೊಂದು ವಿಶ್ವ ದಾಖಲೆ ಇದೆ. 2019ರ ಏಕದಿನ ವಿಶ್ವಕಪ್​​ ಟೂನಿಯಲ್ಲಿ ಕೊಹ್ಲಿ ಸತತ 5 ಅರ್ಧಶತಕ ಸಿಡಿಸಿ ಈ ದಾಖಲೆ ಬರೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಬಾರಿಯ ಟೂನಿಯಲ್ಲೂ ಅವರು ಹಲವು ದಾಖಲೆಯನ್ನು ಬರೆಯುವ ವಿಶ್ವಾಸದಲ್ಲಿದ್ದಾರೆ.

ಮೊದಲು ಮನವಿ ಮಾಡಿದ್ದು ಕೆ.ಎಲ್‌ ರಾಹುಲ್‌

ಇದಕ್ಕೂ ಮುನ್ನ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರು ತಮ್ಮ ಸ್ನೇಹಿತರಲ್ಲಿ ಟಿಕೆಟ್‌ ವಿನಂತಿಸಬೇಡಿ ಎಂದು ಹೇಳಿದ್ದರು. “ಪಂದ್ಯದ ಟಿಕೆಟ್‌ಗಾಗಿ ನನ್ನ ಆಪ್ತ ಮೂಲದ ಯಾರಾದರೂ ನನಗೆ ಸಂದೇಶ ಕಳುಹಿಸಿದರೆ, ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಇದನ್ನು ನೀವು ಸೊಕ್ಕು ಅಥವಾ ಅಸಭ್ಯ ವರ್ತನೆ ಎಂದು ತಿಳಿಯಬೇಡಿ, ನಾನು ಈ ಪ್ರಕ್ರಿಯೆಯಿಂದ ದೂರವಿದ್ದು ಆಟದ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ” ಎಂದು ರಾಹುಲ್ ನಗುತ್ತಲೇ ತಮ್ಮ ಆಪ್ತರಿಗೆ ಟಿಕೆಟ್​ ವಿಚಾರದಲ್ಲಿ ತಮ್ಮ ನಿಲುವನ್ನು ತಿಳಿಸಿದ್ದರು.

ಇದನ್ನೂ ಓದಿ Virat Kohli : ಅಭ್ಯಾಸವೇ ಇಲ್ಲದೆ ವಿಶ್ವ ಕಪ್​ ಪಂದ್ಯ ಆಡಲಿದ್ದಾರೆ ವಿರಾಟ್​ ಕೊಹ್ಲಿ!

ಟೂನಿ ಆರಂಭಕ್ಕೆ ಕ್ಷಣಗಣನೆ

ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್​ (ICC World Cup 2023) ಟೂರ್ನಿ ಗುರುವಾರ ಆರಂಭಗೊಳ್ಳಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್​ 5ರಿಂದ ನವೆಂಬರ್​ 19ರ ತನಕ ಸಾಗಲಿದೆ. 10 ತಂಡಗಳು ಪೈಪೋಟಿ ನಡೆಸಲಿವೆ. ಕೂಟದ ಉದ್ಘಾಟನಾ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡೂ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ(ahmedabad stadium) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ ಒಟ್ಟು 5 ಪಂದ್ಯಗಳ ಆತಿಥ್ಯ ವಹಿಸಿಕೊಂಡಿದೆ. 

ಭಾರತ ಪಂದ್ಯದ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್​ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version