Site icon Vistara News

Team India | ಕೊಹ್ಲಿಗಿಂತ ಮೊದಲು ಸೂರ್ಯಕುಮಾರ್‌ ಬ್ಯಾಟ್‌ ಮಾಡಲಿ ಎಂದ ಮಾಜಿ ಕ್ರಿಕೆಟಿಗ

Gambhir

ನವ ದೆಹಲಿ : ಟೀಮ್ ಇಂಡಿಯಾದ (Team India) ಬ್ಯಾಟಿಂಗ್‌ ಕ್ರಮಾಂಕವನ್ನು ಬದಲಿಸಬೇಕು ಹಾಗೂ ಸೂರ್ಯಕುಮಾರ್‌ ಯಾದವ್‌ ಅವರನ್ನು ವಿರಾಟ್‌ ಕೊಹ್ಲಿಗಿಂತ ಮೊದಲು ಕಳುಹಿಸಬೇಕು ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅವರು ಹಾಂಕಾಂಗ್‌ ವಿರುದ್ಧ ಆಡಿರುವ ವೈಖರಿಯನ್ನು ಉದ್ದೇಶವಾಗಿಟ್ಟುಕೊಂಡು ಅವರು ಈ ಮಾತನ್ನು ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ೨೬ ಎಸೆತಗಳಲ್ಲಿ ಅಜೇಯ ೬೮ ರನ್ ಬಾರಿಸಿದ್ದರು. ಕೊನೆ ಓವರ್‌ನಲ್ಲಂತೂ ಸಿಡಿದೆಡ್ಡು ನಾಲ್ಕು ಸಿಕ್ಸರ್‌ಗಳ ಸಮೇತ ೨೬ ರನ್‌ ಬಾರಿಸಿದ್ದರು. ಅದನ್ನು ಉಲ್ಲೇಖಿಸಿ ಮಾತನಾಡಿದ ಗಂಭೀರ್‌ ಅವರು ಸೂರ್ಯಕುಮಾರ್‌ ಯಾದವ್‌ ಅದ್ಭುತ ಪಾರ್ಮ್‌ನಲ್ಲಿದ್ದು ಭಾರತ ದೊಡ್ಡ ಮೊತ್ತ ಪೇರಿಸಬೇಕಾದರೆ ಅವರನ್ನು ಕೊಹ್ಲಿಗಿಂತ ಮೊದಲೇ ಇಳಿಸುವುದು ಉತ್ತಮ ಎಂದು ಹೇಳಿದ್ದಾರೆ.

“ಸೂರ್ಯಕುಮಾರ್‌ ಯಾದವ್‌ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ಆಟವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧವೂ ಉತ್ತಮವಾಗಿ ಬ್ಯಾಟ್‌ ಬೀಸಿದ್ದಾರೆ. ಹೀಗಾಗಿ ಅವರಿಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ನೀಡಬೇಕು,” ಎಂದು ಗೌತಮ್‌ ಗಂಭೀರ್‌ ಸ್ಟಾರ್‌ ಸ್ಪೋರ್ಟ್ಸ್‌ ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌ಗೆ ಸದ್ಯ ೩೦ ವರ್ಷ. ಅವರು ೨೧, ೨೨ ವರ್ಷದ ಆಟಗಾರನಲ್ಲ. ಹೀಗಾಗಿ ಜವಾಬ್ದಾರಿಯುತವಾಗಿರುವ ಅಗ್ರ ಸ್ಥಾನದಲ್ಲಿ ಇರಬೇಕಾಗುತ್ತದೆ,” ಎಂದು ಗಂಭೀರ್‌ ಹೇಳಿದ್ದಾರೆ.

“ವಿರಾಟ್ ಕೊಹ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬಂದು ಪರಿಸ್ಥಿತಿಗೆ ತಕ್ಕ ಹಾಗೆ ಆಡಬಲ್ಲರು. ಹೀಗಾಗಿ ಸೂರ್ಯಕುಮಾರ್‌ಗೆ ಮೂರನೇ ಕ್ರಮಾಂಕದಲ್ಲಿ ಅವಕಾಶ ಮಾಡಿಕೊಟ್ಟು ಉತ್ತಮ ಪ್ರದರ್ಶನ ನೀಡಲು ಬಿಡಬೇಕು,” ಎಂದು ಹೇಳಿದರು.

“ನನ್ನ ಅಭಿಪ್ರಾಯದ ಪ್ರಕಾರ ಸೂರ್ಯಕುಮಾರ್‌ ಅವರು ಟಿ೨೦ ವಿಶ್ವ ಕಪ್‌ವರೆಗೆ ೩ನೇ ಕ್ರಮಾಂಕದಲ್ಲಿ ಆಡಿಸಬೇಕು. ಅದರೊಳಗೆ ವಾಸ್ತವ ಗೊತ್ತಾಗುತ್ತದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Team India | ಸೂರ್ಯನನ್ನು ಅಂದು ದಿಟ್ಟಿಸಿ ನೋಡಿದ್ದ ವಿರಾಟ್‌ ಕೊಹ್ಲಿ ಈಗ ಶಿರ ಬಾಗಿ ನಮಿಸಿದರು

Exit mobile version