Site icon Vistara News

Neeraj Chopra | ನೀರಜ್ ಚೋಪ್ರಾ ಅಭ್ಯಾಸದ ವಿಡಿಯೊ ಶೇರ್​ ಮಾಡಿದ ಆನಂದ್ ಮಹೀಂದ್ರಾ

Anand Mahindra

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರು ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದನ್ನು ಆನಂದ್ ಮಹೀಂದ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಗೆಲುವು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ ಎಂದು ಹೇಳಿದ್ದಾರೆ.

ನೀರಜ್ ಚೋಪ್ರಾ ಅವರು 32 ಸೆಕೆಂಡುಗಳ ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಗೆಲುವು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ. ನಿಮ್ಮ ದೈನಂದಿನ ವ್ಯಾಯಾಮವನ್ನು ನೋಡುವಾಗ ಏನಾದರೂ ಸಾಧಿಸಬೇಕೆಂಬ ಛಲ ಎಲ್ಲರಲ್ಲಿಯೂ ಮೂಡುತ್ತದೆ ಎಂದು ವಿವರಿಸಿದ್ದಾರೆ.

ಸದ್ಯ ನೀರಜ್ ಚೋಪ್ರಾ ಅವರು ಮುಂದಿನ ಏಷ್ಯನ್​ ಗೇಮ್ಸ್​ಗೆ ಭರ್ಜರಿ ಅಭ್ಯಾಸದಲ್ಲಿ ತೊಡಿದ್ದಾರೆ. ಜತೆಗೆ 90 ಮೀ. ದೂರ ಜಾವೆಲಿನ್​ ಎಸೆಯುವ ಗುರಿ ಹೊಂದಿದ್ದಾರೆ. ಆನಂದ್​ ಮಹೀಂದ್ರಾ ಅವರು ಟ್ವೀಟ್​ ಮಾಡಿರುವ ನೀರಜ್​ ಚೋಪ್ರಾ ಅವರ ಅಭ್ಯಾಸದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Exit mobile version