ನವ ದೆಹಲಿ : ಮಾಜಿ ವಿಶ್ವ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಯುಎಸ್ ಓಪನ್ (US Open Tennis) ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದಿರುವ ಅವರಿಗೆ ಅಮೆರಿಕ ಪ್ರವಾಸ ಹೋಗುವುದು ಸಾಧ್ಯವಿಲ್ಲದ ಕಾರಣ ಪ್ರತಿಷ್ಠಿತ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದಾರೆ. ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲೂ ಇದೇ ಕಾರಣಕ್ಕೆ ಜೊಕೊವಿಕ್‌ಗೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಸದ್ಯದ ನಿಯಮ ಪ್ರಕಾರ ಅಮೆರಿಕ ಪ್ರವಾಸ ಮಾಡಬೇಕಾದವರ ಪೂರ್ಣ ಪ್ರಮಾಣದ ವ್ಯಾಕ್ಸಿನ್ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಬೇಕಾಗುತ್ತದೆ. ಆದರೆ ತಾವು ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿರುವ ಜೊಕೊವಿಕ್, ಅಮೆರಿಕ ಪ್ರವಾಸವನ್ನೇ ಮೊಟಕುಗೊಳಿಸಿದ್ದಾರೆ.
“ದುರದೃಷ್ಟವೆಂದರೆ ನಾನು ಈ ಬಾರಿ ನ್ಯೂಯಾರ್ಕ್‌ಗೆ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಎಲ್ಲ ಸಹ ಆಟಗಾರರಿಗೆ ಅಭಿನಂದನೆಗಳು,” ಎಂದು ಜೊಕೊವಿಕ್ ಟ್ವೀಟ್ ಮಾಡಿದ್ದಾರೆ.
“ಸರ್ಬಿಯಾದ ಆಟಗಾರ ಈ ಹಿಂದೆಯೇ ಕೊರೊನಾ ವ್ಯಾಕ್ಸಿನ್ ಪ್ರಮಾಣಪತ್ರ ಇಲ್ಲದಿರುವುದಕ್ಕೆ ಯುಎಸ್ ಓಪನ್ ನಷ್ಟ ಮಾಡಿಕೊಳ್ಳಲು ಸಿದ್ಧನಿದ್ದೇನೆ,” ಎಂದು ಹೇಳಿದ್ದರು.
ಇದನ್ನೂ ಓದಿ | Asia Cup | ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ಕೊರೊನಾ ಸೋಂಕು