ಮೆಲ್ಬೊರ್ನ್: ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ (Novak Djokovic) ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಟಾರ್ ಕ್ರಿಕೆಟಿಗ ಸ್ಟೀವನ್ ಸ್ಮಿತ್ (Steve Smith) ಜತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಸ್ಮಿತ್ ಆಟಕ್ಕೆ ಜೋಕೊ ಶಿರಬಾಗಿ ನಮಿಸಿದ್ದಾರೆ. ಬಳಿಕ ಜೋಕೊ ಅವರು ಸ್ಮಿತ್ ಜತೆ ಕ್ರಿಕೆಟ್ ಆಡಿ ಸಿಕ್ಸರ್ ಬಾರಿಸಿದ್ದಾರೆ. ಈ ವಿಡಿಯೊವನ್ನು ಆಸ್ಟ್ರೇಲಿಯಾ ಓಪನ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Game respects game!
— #AusOpen (@AustralianOpen) January 11, 2024
(And Novak is just like the rest of us when it comes to Smudge…)@stevesmith49 • @DjokerNole • #AusOpen • #AO2024 pic.twitter.com/ioL8hjVSrF
ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಸ್ಟೀವನ್ ಸ್ಮಿತ್ ಮತ್ತು ಜೋಕೊ ಟೆನಿಸ್ ಅಂಗಳದಲ್ಲಿ ಟೆನಿಸ್ ಜತೆಗೆ ಕ್ರಿಕೆಟ್ ಕೂಡ ಆಡುವ ಮೂಲಕ ಗಮನಸೆಳೆದರು. ‘ಎ ನೈಟ್ ವಿತ್ ನೊವಾಕ್ ಆ್ಯಂಡ್ ಫ್ರೆಂಡ್ಸ್’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಜೋಕೊ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಜತೆಗೆ ಟೆನಿಸ್ ಆಡುವ ಗಮನ ಸೆಳೆದರು. ಬ್ಯಾಟ್ನಿಂದ ಚೆಂಡನ್ನು ಬಾರಿಸಲು ಸಾಧ್ಯವಾಗದಿದ್ದಾಗ ಟೆನಿಸ್ ರಾಕೆಟ್ನಿಂದ ಸಿಕ್ಸರ್ ಬಾರಿಸಿದರು. ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ನಲ್ಲಿ ಗೆದ್ದು ದಾಖಲೆಯ 25ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಸಜ್ಜಾಗಿದ್ದಾರೆ.
ಇದನ್ನೂ ಓದಿ Viral Video: ಟೋಲ್ ಗೇಟ್ನಲ್ಲಿ ಕೆಲಸ ಆರಂಭಿಸಿದರೇ ಮೊಹಮ್ಮದ್ ಶಮಿ?; ವಿಡಿಯೊ ವೈರಲ್
Is it too late to add him to the test squad?! From the sounds of it the selectors are open to trying things out…@DjokerNole • #AusOpen • #AO2024 pic.twitter.com/VAJq2KFShr
— #AusOpen (@AustralianOpen) January 11, 2024
ಆರಂಭಿಕನಾಗಿ ಭಡ್ತಿ ಪಡೆದ ಸ್ಮಿತ್
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಿಂದ ಡೇವಿಡ್ ವಾರ್ನರ್ ನಿವೃತ್ತಿಯಾದ ಕಾರಣ ಅವರ ಆರಂಭಿಕ ಸ್ಥಾನದಲ್ಲಿ ಸ್ಟೀವನ್ ಸ್ಮಿತ್ ಆಡಲಿದ್ದಾರೆ. ಟಿ20ಯಲ್ಲಿ ಕೆಲ ಪಂದ್ಯಗಳಲ್ಲಿ ಸ್ಮಿತ್ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಇದೀಗ ಆರಂಭಿಕನಾಗಿ ಭಡ್ತಿ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಮತ್ತು ಏಕದಿನ ಸರಣಿಗೆ ಆಸ್ಟ್ರೇಲಿಯಾ ತಮ್ಮ ತಂಡವನ್ನು ಬುಧವಾರ ಪ್ರಕಟಿಸಿತ್ತು. ಖಾಯಂ ನಾಯಕ ಪ್ಯಾಟ್ ಕಮಿನ್ಸ್ ವಿಶ್ರಾಂತಿ ಪಡೆದ ಕಾರಣ ಸ್ಟೀವನ್ ಸ್ಮಿತ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ಏಕದಿನ ಪಂದ್ಯ
ಸ್ಟೀವನ್ ಸ್ಮಿತ್ (ನಾಯಕ), ಸೀನ್ ಅಬಾಟ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್ (ಉ.ನಾ), ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಲ್ಯಾನ್ಸ್ ಮೋರಿಸ್, ಜೇ ರಿಚರ್ಡ್ಸನ್, ಮ್ಯಾಟ್ ಶಾರ್ಟ್, ಆ್ಯಡಂ ಝಂಪಾ.