ನವ ದೆಹಲಿ: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ (INDvsAUS) ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಎರಡೂವರೆ ದಿನಕ್ಕೆ ಮುಕ್ತಾಯ ಕಂಡಿತು. ಅಷ್ಟರೊಳಗೆ ಭಾರತ ತಂಡ 6 ವಿಕೆಟ್ಗಳ ವಿಜಯ ಸಾಧಿಸಿ 2-0 ಮುನ್ನಡೆ ಸಾಧಿಸಿತು. ಮುಂದಿನ ಪಂದ್ಯ ಆರಂಭವಾಗುವುದು ಮಾರ್ಚ್ 1ರಂದು. ಅಲ್ಲಿಯ ತನಕ ಟೀಮ್ ಇಂಡಿಯಾ ಆಟಗಾರಿಗೆ ಸ್ವಲ್ಪ ಬಿಡುವು ಸಿಗುತ್ತದೆ. ಮುಂದಿನ ಪಂದ್ಯಕ್ಕಾಗಿ ಮಧ್ಯಪ್ರದೇಶದ ಇಂದೋರ್ಗೆ ಹೋಗಬೇಕಿದ್ದು ಅಲ್ಲಿಯ ತನಕ ನವ ದೆಹಲಿಯಲ್ಲೇ ಉಳಿಯಲ್ಲಿದ್ದಾರೆ. ಹೀಗಾಗಿ ಭಾರತ ತಂಡದ ಆಟಗಾರರೆಲ್ಲರೂ ಭಾನುವಾರ ಮಧ್ಯಾಹ್ನದ ಮೇಲೆ (ಫೆಬ್ರವರಿ 19ರಂದು) ನವ ದೆಹಲಿಯಲ್ಲಿರುವ ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಭಾರತ ತಂಡದ ಆಟಗಾರರು ಮ್ಯೂಸಿಯಮ್ಗೆ ಹೋಗಿರುವ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ತಿಳಿಸಲಾಗಿದೆ. ಸ್ವಾತಂತ್ರ್ಯ ಬಳಿಕದ ಭಾರತವನ್ನು ನಿರ್ಮಿಸಿದ ಪ್ರಧಾನ ಮಂತ್ರಿಗಳ ಕುರಿತ ಮಾಹಿತಿಯನ್ನು ನೀಡುವ ಪ್ರಧಾನಮಂತ್ರಿ ಸಂಗ್ರಹಾಲಯದ ಕಾರಿಡಾರ್ನಲ್ಲಿ ಕ್ರಿಕೆಟಿಗರು ಓಡಾಡಿದರು. ಇದು ಭಾರತದ ಯಾನವನ್ನು ದರ್ಶಿಸಿತು ಎಂಬುದಾಗಿ ಬರೆದುಕೊಂಡಿದೆ.
ಬಿಸಿಸಿಐ ಹಂಚಿಕೊಂಡ ಟ್ವೀಟ್ ಇಲ್ಲಿದೆ
ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತಿತರರು ವಸ್ತು ಸಂಗ್ರಹಾಲಯದ ವಸ್ತುಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ ; ಕIND VS AUS: ಕೆ.ಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯಕ್ಕೆ ಕಾಂತಾರ ಕ್ಲೈಮ್ಯಾಕ್ಸ್ ಮೂಲಕ ಟ್ರೋಲ್ ಮಾಡಿದ ನೆಟ್ಟಿಗರು
2022ರ ಏಪ್ರಿಲ್ನಿಂದ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಇದುವರೆಗಿನ ಪ್ರಧಾನ ಮಂತ್ರಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.