Site icon Vistara News

NZ VS ENG: ಬ್ರೆಂಡನ್‌ ಮೆಕಲಮ್‌ ದಾಖಲೆ ಮುರಿದ ಬೆನ್​ ಸ್ಟೋಕ್ಸ್​

NZ VS ENG

#image_title

ಮೌಂಟ್‌ ಮೌಂಗನುಯಿ:​ ಇಂಗ್ಲೆಂಡ್(NZ VS ENG)​ ಟೆಸ್ಟ್​ ತಂಡದ ನಾಯಕ ಬೆನ್​ ಸ್ಟೋಕ್ಸ್(ben stokes)​ ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ​ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಬೆನ್ ಸ್ಟೋಕ್ಸ್‌ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಿವೀಸ್​ನ ಸ್ಕಾಟ್‌ ಕುಗ್ಗಲಯನ್‌ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ಬ್ರೆಂಡನ್ ಮೆಕಲಮ್‌ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸ್ಟೋಕ್ಸ್​ ಮುರಿದರು.

ಇದನ್ನೂ ಓದಿ IND VS AUS: ವಿವಾದಾತ್ಮಕ ತೀರ್ಪಿಗೆ ಔಟಾದ ವಿರಾಟ್​ ಕೊಹ್ಲಿ

ಬೆನ್‌ ಸ್ಟೋಕ್ಸ್‌ ಒಟ್ಟು 90 ಟೆಸ್ಟ್‌ ಪಂದ್ಯಗಳನ್ನಾಡಿ 12 ಶತಕ ಹಾಗೂ 28 ಅರ್ಧಶತಕ ಸಹಿತ 36ರ ಸರಾಸರಿಯಲ್ಲಿ 5,652 ರನ್‌ ಬಾರಿಸಿದ್ದಾರೆ. ಇದರ ಜತೆಗೆ 109 ಸಿಕ್ಸರ್ ಸಿಡಿಸಿದ್ದಾರೆ. ಬ್ರೆಂಡನ್‌ ಮೆಕಲಮ್‌ 101 ಟೆಸ್ಟ್‌ ಪಂದ್ಯಗಳನ್ನಾಡಿ 12 ಶತಕ ಹಾಗೂ 31 ಅರ್ಧಶತಕ ಸಹಿತ 38.64ರ ಬ್ಯಾಟಿಂಗ್ ಸರಾಸರಿಯಲ್ಲಿ 6,453 ರನ್‌ ಬಾರಿಸಿದ್ದಾರೆ. ಬ್ರೆಂಡನ್‌ ಮೆಕಲಮ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 107 ಸಿಕ್ಸರ್ ಸಿಡಿಸಿದ್ದರು.

Exit mobile version