Site icon Vistara News

PAK vs NZ: ವೇಗದ ಶತಕ ಬಾರಿಸಿ ದಾಖಲೆ ಬರೆದ ಪಾಕ್​ ಡ್ಯಾಶಿಂಗ್​ ಓಪನರ್​ ಫಕಾರ್​

Fakhar Zaman

ಬೆಂಗಳೂರು: ಪಾಕಿಸ್ತಾನದ(PAK vs NZ) ಎಡಗೈ ಆರಂಭಕಾರ ಫ‌ಕಾರ್‌ ಜಮಾನ್‌(Fakhar Zaman) ಅವರು ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆಯೊಂದನ್ನು ಬರೆದಿದ್ದಾರೆ. ಪಾಕಿಸ್ತಾನ ಪರ ವಿಶ್ವಕಪ್​ನಲ್ಲಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ನ್ಯೂಜಿಲ್ಯಾಂಡ್​ ನೀಡಿದ ಬೃಹತ್​ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಪಾಕಿಸ್ತಾನಕ್ಕೆ ಫ‌ಕಾರ್‌ ಜಮಾನ್‌ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ಆಸರೆಯಾದರು. ಅವರ ಈ ಅಜೇಯ ಬ್ಯಾಟಿಂಗ್​ ಸಾಹಸದಿಂದ ಪಾಕಿಸ್ತಾನ ಸದ್ಯ 21.3 ಓವರ್​ಗಳಲ್ಲಿ ಒಂದು ವಿಕೆಟ್​ಗೆ 160 ರನ್​ ಪೇರಿಸಿದೆ. ಗೆಲುವಿಗೆ ಇನ್ನೂ 242 ರನ್​ ಬೇಕಿದೆ. ಸದ್ಯ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಒಂದೊಮ್ಮೆ ಡಕ್​ವರ್ತ್​ ಲೂಯಿಸ್​ ನಿಯಮ ಜಾರಿಗೆ ತಂದರೆ ಪಾಕಿಸ್ತಾನ ತಂಡ 10 ರನ್​ಗಳ ಗೆಲುವು ಸಾಧಿಸಲಿದೆ. ಡಕ್​ ವರ್ತ್​ ನಿಯಮದ ಪ್ರಕಾರ 21 ಓವರ್​ಗಳಲ್ಲಿ 150 ರನ್​ ಆಗಿರಬೇಕಿತ್ತು. ಆದರೆ ಪಾಕ್​ ಇದಕ್ಕಿಂದ 10 ರನ್​ ಮುಂದಿದೆ. ಹೀಗಾಗಿ ಈ ಅದೃಷ್ಟ ಪಾಕ್​ಗೆ ಒಲಿಯಲಿದೆ.

ಇಮ್ರಾನ್ ನಜೀರ್ ದಾಖಲೆ ಪತನ

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಚಚ್ಚಿದ ಫ‌ಕಾರ್‌ ಜಮಾನ್‌ ಕೇವಲ 63 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದರು. ಈ ವೇಳೆ ಪಾಕಿಸ್ತಾನ ಪರ ವಿಶ್ವಕಪ್​ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಮ್ರಾನ್ ನಜೀರ್(Imran Nazir) ಹೆಸರಿನಲ್ಲಿತ್ತು. ನಜೀರ್ 2007ರ ವಿಶ್ವಕಪ್​ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ 95 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈಗ ಈ ದಾಖಲೆ ಪತನಗೊಂಡಿದೆ. ನಜೀರ್​ ಅಂದು ಜಿಂಬಾಬ್ವೆ ವಿರುದ್ಧ ಒಟ್ಟು 121 ಎಸೆತ ಎದುರಿಸಿ 8 ಸಿಕ್ಸರ್​ ನೆರವಿನಿಂದ 160 ರನ್​ ಬಾರಿಸಿದ್ದರು. ಸದ್ಯ ಬಾಟಿಂಗ್​ ಕಾಯ್ದುಕೊಂಡಿರು ಫಕಾರ್​ 9 ಸಿಕ್ಸರ್​ ಮತ್ತು 7 ಸಿಕ್ಸರ್​ ನೆರವಿನಿಂದ ಅಜೇಯ 106ರನ್​ ಬಾರಿಸಿದ್ದಾರೆ.

ಚೇಸಿಂಗ್​ ದಾಖಲೆ

ಏಕದಿನ ಕ್ರಿಕೆಟ್​ನಲ್ಲಿ ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಫ‌ಕಾರ್‌ ಜಮಾನ್‌ ಹರಸರಿನಲ್ಲಿದೆ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಫಕಾರ್​ 193 ರನ್‌ ಬಾರಿಸಿ ಶೇನ್‌ ವಾಟ್ಸನ್‌ ದಾಖಲೆ ಮುರಿದ್ದರು. ಶೇನ್‌ ವಾಟ್ಸನ್‌ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್‌ ಬಾರಿಸಿದ್ದು ಚೇಸಿಂಗ್‌ ವೇಳೆ ದಾಖಲಾದ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು. ಎಂ.ಎಸ್‌. ಧೋನಿ (ಅಜೇಯ 183), ಕೊಹ್ಲಿ (183) ಉಳಿದಿಬ್ಬರು ಸಾಧಕರು.

ಇದನ್ನೂ ಓದಿ PAK vs NZ: ರಚಿನ್​ ಶತಕ; ಸಚಿನ್​ ಸೇರಿ ಹಲವು ದಿಗ್ಗಜರ ದಾಖಲೆ ಧೂಳೀಪಟ

ವಿಶ್ವಕಪ್​ ವಿಶ್ವದಾಖಲೆ ಮ್ಯಾಕ್ಸಿ ಹೆಸರಿನಲ್ಲಿದೆ

ವಿಶ್ವಕಪ್​ ಟೂರ್ನಿಯಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​ ಹೆಸರಿನಲ್ಲಿದೆ. ಅವರು ಇದೇ ಆವೃತ್ತಿಯ ವಿಶ್ವಕಪ್​ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಎಸೆತಗಳಿಂದ(Fastest 100s in World Cups) ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದರು. 

Exit mobile version