ಆಕ್ಲೆಂಡ್: ಪ್ರವಾಸಿ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್(NZ VS SL) ವಿರುದ್ಧದ ಏಕದಿನ ಪಂದ್ಯದಲ್ಲಿ ಲಂಕಾ ಆಟಗಾರ ರನೌಟ್ ಆದ ತೀರ್ಪಿನ ಘಟನೆಯೊಂದು ಇದೀಗ ಕ್ರಿಕೆಟ್ ಕೇತ್ರದಲ್ಲಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ.
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ನ್ಯೂಜಿಲ್ಯಾಂಡ್ ತಂಡ 49.3 ಓವರ್ಗಳಲ್ಲಿ 274 ರನ್ಗೆ ಆಲೌಟ್ ಆಯಿತು. ಜವಾಬಿತ್ತ ಶ್ರೀಲಂಕಾ ತಂಡ ಹೆನ್ರಿ ಶಿಪ್ಲಿ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿ 19.5 ಓವರ್ಗಳಲ್ಲಿ ಕೇವಲ 76 ರನ್ಗೆ ಸರ್ವಪತನ ಕಂಡಿತು. ಕಿವೀಸ್ 198 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ನ್ಯೂಜಿಲ್ಯಾಂಡ್ ತಂಡ ಈ ಪಂದ್ಯದಲ್ಲಿ ದೊಡ್ಡ ಮೊತ್ತದಿಂದ ಗೆಲುವು ಸಾಧಿಸಿದರೂ ಗೆಲುವಿಗಿಂತ ದೊಡ್ಡ ಸುದ್ದಿಯಾದದ್ದು ಈ ಪಂದ್ಯದಲ್ಲಿ ನಡೆದ ಒಂದು ರನೌಟ್. ಶ್ರೀಲಂಕಾದ ಬ್ಯಾಟಿಂಗ್ ಇನಿಂಗ್ಸ್ನ 18ನೇ ಓವರ್‌ನಲ್ಲಿ ಟಿಕ್ನರ್(Blair Tickner) ಎಸೆತಕ್ಕೆ ಬ್ಯಾಟ್ ಬೀಸಿದ ಕರುಣಾರತ್ನೆ(Karunaratne) ಮಿಡ್-ವಿಕೆಟ್ ಕಡೆಗೆ ಬಾರಿಸಿ ರನ್ ಕದಿಯಲು ಓಡಿದರು. ಆದರೆ ಚುರುಕಿ ಫೀಲ್ಡಿಂಗ್ ನಡೆಸಿದ ಕಿವೀಸ್ ಆಟಗಾರ ಚೆಂಡನ್ನು ಹಿಡಿದು ಟಿಕ್ನರ್ ಕಡೆಗೆ ಎಸೆದರು. ತಕ್ಷಣ ಚೆಂಡನ್ನು ಹಿಡಿದ ಟಿಕ್ನರ್ ರನೌಟ್ ಮಾಡಿದರು.
ರನೌಟ್ ನಿರ್ಧಾರವನ್ನು ಪರಿಶೀಲನೆ ನಡೆಸಲು ಪೀಲ್ಡ್ ಅಂಪೈರ್ ಮೂರನೇ ಅಂಪೈರ್ ಮೊರೆ ಹೋದರು. ಈ ವೇಳೆ ಕರುಣಾರತ್ನೆ ಕ್ರೀಸ್ನಿಂದ ದೂರವಿರುವುದು ಸ್ಪಷ್ಟವಾಗಿ ಗೋಚರಿತು. ಇದೇ ವೇಳೆ ಲಂಕಾ ಬ್ಯಾಟರ್ ಕರುಣಾರತ್ನೆ ಕೂಡ ಪೆವಿಲಿಯನ್ ಕಡೆಗೆ ತೆರಳಲಾರಂಭಿಸಿದರು. ಆದರೆ ಮೂರನೇ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದರು. ಆ ತೀರ್ಪು ನೋಡಿ ನ್ಯೂಜಿಲ್ಯಾಂಡ್ ಆಟಗಾರರು ಮತ್ತು ಕರುಣಾರತ್ನೆ ಆಶ್ಚರ್ಯಚಕಿತರಾದರು. ರನೌಟ್ ಆದರೂ ಔಟ್ ಏಕೆ ನೀಡಿಲ್ಲ ಎಂದು ಒಂದು ಕ್ಷಣ ಮೈದಾನಲ್ಲಿ ಆಟಗಾರರ ಮಧ್ಯೆ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇದನ್ನೂ ಓದಿ NZvsSL : ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲ್ಯಾಂಡ್
ಕೂಡಲೇ ಕಿವೀಸ್ ಆಟಗಾರರು ಫೀಲ್ಡ್ ಅಂಪೈರ್ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಅಂಪೈರ್ ಟಿಕ್ನರ್ ಚೆಂಡನ್ನು ವಿಕೆಟ್ ತಾಗಿಸಿದಾಗ ಬೆಲ್ಸ್ನಲ್ಲಿ ತಕ್ಷಣವೇ ಲೈಟ್ಸ್ ಹೊತ್ತಿಕೊಂಡಿಲ್ಲ. ಟಿಕ್ನರ್ ಚೆಂಡನ್ನು ಬೆಲ್ಸ್ಗೆ ತಾಗಿಸಿದಾಗ ಬೆಲ್ಸ್ನಲ್ಲಿ ಲೈಟ್ಸ್ ಆನ್ ಆಗಿರಲಿಲ್ಲ. ಹೀಗಾಗಿ ಮೂರನೇ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದ್ದಾರೆ ಎಂದು ತಿಳಿಸಿದರು.
ಸದ್ಯ ಈ ರನೌಟ್ ಬಗ್ಗೆ ಹಲವು ಅಭಿಪ್ರಾಯಗಳು ಬರಲಾರಂಭಿಸಿದೆ. ತಾಂತ್ರಿಕ ದೋಷದಿಂದಾಗಿ ಕ್ರಿಕೆಟ್ನಲ್ಲಿ ಪದೇಪದೆ ಈ ರೀತಿಯ ಪ್ರಮಾದಗಳು ನಡೆಯುತ್ತಲೇ ಇದೆ. ಹೀಗಾಗಿ ಇದಕ್ಕೆ ಸರಿಯಾದ ಒಂದು ನಿಮಯವನ್ನು ಜಾರಿಗೆ ತರಬೇಕು ಇಲ್ಲವಾದಲ್ಲಿ ಈ ರೀತಿಯ ತಪ್ಪಿನಿಂದ ತಂಡವೊಂದರ ಪ್ರಾಮಾಣಿಕ ಪ್ರಯತ್ನಕ್ಕೆ ಹಿನ್ನಡೆಯಾತ್ತದೆ ಎಂದು ಹಲವು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.