Site icon Vistara News

World Cup : ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಬಳಿಕ ಅಫಘಾನಿಸ್ತಾನ ವಿರುದ್ಧ ಏಕ ದಿನ ಸರಣಿ

ODI series against Afghanistan after World Test Ship

#image_title

ಮುಂಬಯಿ: ಜೂನ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯ ನಡೆಯಲಿದೆ. ಅದಾದ ಬಳಿಕ ಭಾರತ ತಂಡ ಅಪಘಾನಿಸ್ತಾನ ವಿರುದ್ಧ ತವರಿನಲ್ಲಿ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಸೋಮವಾರ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಮುಂಬರುವ ಏಕ ದಿನ ವಿಶ್ವ ಕಪ್ ಹಿನ್ನೆಲೆಯಲ್ಲಿ ಈ ಸರಣಿಯ ಭಾರತ ತಂಡಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸಿಕ್ಕಿರುವ ಅವಕಾಶ ಎನ್ನಲಾಗಿದೆ.

ಅಪಘಾನಿಸ್ತಾನ ವಿರುದ್ಧದ ಸರಣಿಯ ಫ್ಯೂಚರ್​ ಟೂರ್​ ಪ್ರೋಗ್ರಾಮ್​ (ಎಫ್​ಟಿಪಿ) ಭಾಗವಾಗಿರಲಿಲ್ಲ. ಇದು ಹೆಚ್ಚುವರಿ ಸರಣಿಯಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್​ ಅವರಿಗೆ ವಿಶ್ವ ಕಪ್​ ಸಿದ್ಧತೆಗೆ ದೊರಕಿದ ಅವಕಾಶ ಎನಿಸಿಕೊಂಡಿದೆ.

ಈ ಸರಣಿಯು ಜೂನ್​ 16ರಿಂದ ಆರಂಭವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮುಕ್ತಾಯಗೊಂಡ ಐದು ದಿನಗಳ ಬಳಿಕ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಬಿಸಿಸಿಐ ಮಧ್ಯಂತರ ನೇರ ಪ್ರಸಾರದ ಹಕ್ಕನ್ನೂ ವಿತರಣೆ ಮಾಡಲಿದೆ.

ಹೋಮ್​ ಅವೇ ಮಾದರಿಯಲ್ಲಿ ಮುಂದಿನ ಮಹಿಳೆಯರ ಐಪಿಎಲ್​

ಇದೇ ವೇಳೆ ಜಯ್​ ಶಾ ಅವರು ಮುಂದಿನ ಆವೃತ್ತಿಯ ಮಹಿಳೆಯ ಐಪಿಎಲ್​ ಕುರಿತು ಮಾಹಿತಿ ಪ್ರಕಟಿಸಿದರು. ಮುಂದಿನ ಮಹಿಳೆಯರ ಐಪಿಎಲ್ ಟೂರ್ನಿ ಹೊಮ್​ ಮತ್ತು ಅವೇ ಮಾದರಿಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಕಳೆದ ಮಾರ್ಚ್​ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಮಹಿಳೆಯರ ಐಪಿಎಲ್​ ದೊಡ್ಡ ಪ್ರಮಾಣದಲ್ಲಿ ಯಶಸ್ವಿ ಸಾಧಿಸಿದೆ. ಹೀಗಾಗಿ ಮುಂದಿನ ಆವೃತ್ತಿಯನ್ನು ಇನ್ನಷ್ಟು ಸುಂದರವಾಗಿ ಮಾಡುವ ನಿಟ್ಟಿನಲ್ಲಿ ಹೋಮ್ ಮತ್ತು ಅವೇ ಮಾದರಿಯಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ : World Cup : ವಿಶ್ವ ಕಪ್​ ಹಿನ್ನೆಲೆಯಲ್ಲಿ ಐದು ಸ್ಟೇಡಿಯಮ್​ಗಳ ಉನ್ನತೀಕರಣಕ್ಕೆ ಬಿಸಿಸಿಐ ಸಿದ್ಧತೆ

ಮಹಿಳೆಯರ ಐಪಿಎಲ್​ಗೆ ದೊಡ್ಡ ಪ್ರಮಾಣದ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದರ ಸಂಖ್ಯೆಯನ್ನು ಇನ್ನಷ್ಟು ಬೆಳೆಸುವ ಉದ್ದೇಶದಿಂದ ಹೋಮ್ ಮತ್ತು ಅವೇ ಮಾದರಿಯ್ಲಲಿ ಟೂರ್ನಿ ನಡೆಸುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version