Site icon Vistara News

World Cup 2023 : ವಿಶ್ವ ಕಪ್ ಟಿಕೆಟ್​ಗಳು ಎಲ್ಲೆಲ್ಲಿ ಸಿಗುತ್ತವೆ? ಇಲ್ಲಿದೆ ಅದರ ಮಾಹಿತಿ

world Cup 2023

ನವ ದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್ (World Cup 2023) ಆರಂಭಕ್ಕೆ ಇನ್ನು ಕೆಲವು ದಿನಗಳು ಬಾಕಿ ಉಳಿದಿವೆ. ಬಿಸಿಸಿಐ ಟೂರ್ನಿ ಆಯೋಜನೆಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಪ್ರತಿಯೊಂದು ಸಂಗತಿಯನ್ನೂ ಅತ್ಯಂತ ಜತನದಿಂದ ನಿರ್ವಹಿಸುತ್ತಿದ್ದಾರೆ ಬಿಸಿಸಿಐ ಅಧಿಕಾರಿಗಳು. ಇವೆಲ್ಲದರ ನಡುವೆ ಕ್ರಿಕೆಟ್​ನ ಹಾರ್ಡ್​ಕೋರ್ ಅಭಿಮಾನಿಗಳು ಟಿಕೆಟ್​ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಅಲ್ಲದೆ, ಟಿಕೆಟ್​ಗಳು ಎಲ್ಲಿ ದೊರೆಯುತ್ತವೆ ಎಂಬ ಕುತೂಹಲವೂ ಮೂಡಿದೆ. ಏತನ್ಮಧ್ಯೆ, ವಿಶ್ವ ಕಪ್ ಟಿಕೆಟ್ ಮಾರಾಟದ ನಿರ್ವಹಣೆಯನ್ನು ಬುಕ್ ಮೈಶೋ ಮತ್ತು ಪೇಟಿಎಂ ಬಿಸಿಸಿಐ ನೀಡಲಿದೆ ಸುದ್ದಿ ಬಂದಿದೆ.

ಈ ಎರಡು ಆನ್​ಲೈನ್​ ಫ್ಲ್ಯಾಟ್​ಫಾರ್ಮ್​ಗಳಿಂದ ಟಿಕೆಟ್​ ಬುಕ್​ ಮಾಡಿದ ಹೊರತಾಗಿಯೂ ಕ್ರೀಡಾಂಗಣಗಳಿಗೆ ತೆರಳಿ ಬೌತಿಕ ಟಿಕೆಟ್​ಗಳನ್ನು ಪಡೆದುಕೊಳ್ಳಬೇಕು. ವಿಶ್ವಕಪ್ ಪಂದ್ಯದ ಅರ್ಧದಷ್ಟು ಟಿಕಟ್​ಗಳನ್ನು ಪೇಟಿಎಂ ಮತ್ತು ಬುಕ್ ಮೈ ಶೋ ಎಂಬ ಎರಡು ಟಿಕೆಟಿಂಗ್ ಕಂಪನಿಗಳು ನಿರ್ವಹಿಸಲಿವೆ. ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕೊತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಟಿಕೆಟ್​ಗಳು Paytm.com ನಲ್ಲಿ ಲಭ್ಯವಿರುತ್ತವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ Bookmyshow.com ನಲ್ಲಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಯ್​ ಶಾ ಸಭೆ

ನವದೆಹಲಿಯಲ್ಲಿ ಗುರುವಾರ, ರಾಜ್ಯ ಸಂಸ್ಥೆಗಳ ಜತೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೇಳಾಪಟ್ಟಿ ಬದಲಾವಣೆ ವಿಚಾರ ಚರ್ಚೆಗೊಳಲಾಗಿದೆ. ವೇಳಾಪಟ್ಟಿ ಅಂತಿಮಗೊಂಡ ಬಳಿಕ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ಹೇಲಿದ್ದಾರೆ.. ಜುಲೈ 31 ರೊಳಗೆ ಪ್ರತಿ ರಾಜ್ಯ ಸಂಸ್ಥೆ ತನ್ನ ಅಂತಿಮ ಟಿಕೆಟ್ ಬೆಲೆಗಳನ್ನು ಭಾರತೀಯ ಮಂಡಳಿಗೆ ತಿಳಿಸಬೇಕು ಎಂದು ಅವರು ಕೋರಿದ್ದಾರೆ.

ಪ್ರೇಕ್ಷಕರು ಆನ್​ಲೈನ್​ನಲ್ಲಿ ಟಿಕೆಟ್​ ಖರೀದಿ ಮಾಡಿರುವ ಹೊರತಾಗಿಯೂ ಕ್ರೀಡಾಂಗಣವನ್ನು ಪ್ರವೇಶಿಸಲು, ಮುದ್ರಿತ ಟಿಕೆಟ್​ಗಳು ಬೇಕಾಗುತ್ತವೆ ಎಂದು ಶಾ ಸಲಹೆ ನೀಡಿದ್ದರು.

ಇದನ್ನೂ ಓದಿ : Jasprit Bumrah : ಮುಂಬೈ ತಂಡದ ಬ್ಯಾಟರ್​ಗಳಿಗೆ ಬೌಲಿಂಗ್ ಆರಂಭಿಸಿದ ಜಸ್​ಪ್ರಿತ್ ಬುಮ್ರಾ

ಕ್ರೀಡಾಂಗಣದಲ್ಲಿ ಬಿಸಿಸಿಐ ಪ್ರತಿ ನಗರದಲ್ಲಿ ಹೆಚ್ಚುವರಿ ವಿತರಣಾ ಕೇಂದ್ರಗಳನ್ನು ಗೊತ್ತುಪಡಿಸಲಿದೆ. ಇದರಿಂದಾಗಿ ಅಕ್ಟೋಬರ್ 5ರಂದು ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಪ್ರೇಕ್ಷಕರು ತಮ್ಮ ವಿಶ್ವಕಪ್ 2023ಟಿಕೆಟ್​ಗಳನ್ನು ಕೊಳ್ಳಬಹುದು.

ಉಚಿತ ಟಿಕೆಟ್​ಗಳು

ಐಸಿಸಿ ಮತ್ತು ಬಿಸಿಸಿಐ ತಲಾ 300 ಉಚಿತ ಆತಿಥ್ಯ ಟಿಕೆಟ್​ಗಳನ್ನು ಪಡೆಯಲಿವೆ. ಇದಲ್ಲದೆ, ಲೀಗ್ ಪಂದ್ಯಗಳಿಗೆ 1295 ಟಿಕೆಟ್​​ಗಳು ಮತ್ತು ಭಾರತ ಮತ್ತು ಸೆಮಿಫೈನಲ್ ಪಂದ್ಯಗಳಿಗೆ 1355 ಟಿಕೆಟ್​​ಗಳನ್ನು ರಾಜ್ಯ ಸಮಿತಿಯು ಐಸಿಸಿಗೆ ಒದಗಿಸಬೇಕು.

2023ರ ಏಕದಿನ ವಿಶ್ವಕಪ್​ ವೇಳೆ ಭಾರತೀಯ ಮಂಡಳಿಗೆ 500 ಉಚಿತ ಸಾಮಾನ್ಯ ಪ್ರವೇಶ ಟಿಕೆಟ್​ಗಳನ್ನು ರಾಜ್ಯ ಅಸೋಸಿಯೇಷನ್ ನೀಡಬೇಕಾಗಿದೆ. ಐಸಿಸಿ (250 ಆತಿಥ್ಯ ಮತ್ತು 1800 ಸಾಮಾನ್ಯ ಟಿಕೆಟ್​ಗಳು) ಮತ್ತು ಬಿಸಿಸಿಐ (ತಲಾ 300 ಆತಿಥ್ಯ ಮತ್ತು ಸಾಮಾನ್ಯ ಸ್ಟ್ಯಾಂಡ್ ಸೀಟುಗಳು) ಹೆಚ್ಚಿನದನ್ನು ಖರೀದಿಸಲು ಆಯ್ಕೆ ಮಾಡಿದರೆ, ಹೆಚ್ಚುವರಿ ಆತಿಥ್ಯ ಟಿಕೆಟ್​ಗಳನ್ನು ನೀಡುವಂತೆ ಬಿಸಿಸಿಐ ರಾಜ್ಯಕ್ಕೆ ಶಿಫಾರಸು ಮಾಡಿದೆ.

Exit mobile version