Site icon Vistara News

ODI World Cup | ಏಕದಿನ ವಿಶ್ವಕಪ್​ನಲ್ಲಿ​ ಈ ಬಾರಿ ಏಷ್ಯಾದ ಯಾವುದೇ ತಂಡಗಳು ಮೇಲುಗೈ ಸಾಧಿಸುವುದಿಲ್ಲ; ಸಂಗಕ್ಕರ ಅಚ್ಚರಿಕೆಯ ಹೇಳಿಕೆ!

kumar sangakkara

ಕೊಲಂಬೊ: ಭಾರತದ ಆತಿಥ್ಯದಲ್ಲಿ ಇದೇ ವರ್ಷ ಪುರುಷರ ಏಕ ದಿನ ವಿಶ್ವ ಕಪ್​ ಟೂರ್ನಿ ನಡೆಯಲಿದೆ. ಆದರೆ ಈ ಟೂರ್ನಿಯಲ್ಲಿ ಏಷ್ಯಾದ ಯಾವುದೇ ತಂಡಗಳು ಚಾಂಪಿಯನ್​ ಪಟ್ಟ ಅಲಂಕರಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜತೆಗೆ ಮಾತನಾಡಿದ ವೇಳೆ ಕುಮಾರ ಸಂಗಕ್ಕರ ಈ ಅಚ್ಚರಿಕೆಯ ವಿಚಾರವನ್ನು ತಿಳಿಸಿದ್ದಾರೆ. ಭಾರತದಲ್ಲಿ ವಿಶ್ವ ಕಪ್ ಟೂರ್ನಿ ನಡೆದರೂ ಉಪಖಂಡದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ, ಬಾಂಗ್ಲೇದೇ ತಂಡಗಳು ವಿಶ್ವ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲ ಎಂದಿದ್ದಾರೆ.

“2011ರ ಬಳಿಕ ಕ್ರಿಕೆಟ್ ಸಾಕಷ್ಟು ಬದಲಾಗಿದೆ. ಅಂದು ಏಷ್ಯಾದ ವಾತಾವರಣ ಉಪಖಂಡದ ಆಟಗಾರರಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತಿತ್ತು. ಆದರೆ ವರ್ಷಗಳು ಕಳೆದಂತೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ತಂಡಗಳ ಆಟಗಾರರು ಏಷ್ಯಾದ ಆಟಗಾರರಿಗಿಂತಲೂ ಉತ್ತಮವಾಗಿ ಸ್ಪಿನ್ ದಾಳಿಯನ್ನು ಎದುರಿಸಲು ಕಲಿತಿದ್ದಾರೆ. ಆದ್ದರಿಂದ ಈ ತಂಡಗಳು ವಿಶ್ವ ಕಪ್​ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ” ಎಂದು ಸಂಗಕ್ಕರ ಭವಿಷ್ಯ ನುಡಿದಿದ್ದಾರೆ.

ಟಿ20 ಲೀಗ್​ನಿಂದ ಲಾಭ ಪಡೆದ ವಿದೇಶಿ ಆಟಗಾರರು

ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಲ್ಲಿ ನಡೆಯುವ ಟಿ20 ಕ್ರಿಕೆಟ್​ ಲೀಗ್​ನಿಂದ ವಿದೇಶಿ ಆಟಗಾರರು ಭರಪೂರ ಲಾಭ ಪಡೆದಿದ್ದಾರೆ. ಸರಿ ಸುಮಾರು 2ರಿಂದ ಮೂರು ತಿಂಗಳುಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ವಿದೇಶಿ ಆಟಗಾರರು ಪ್ರತಿ ವರ್ಷ ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಏಷ್ಯಾ ಭಾಗದ ಸ್ಪಿನ್​ ಪಿಚ್​ನಲ್ಲಿ ಉತ್ತಮ ಹಿಡಿತ ಸಾಧಿಸಲು ಸಾಧ್ಯವಾಗಿದೆ. ಇದೇ ಕಾರಣದಿಂದ ವಿಶ್ವ ಕಪ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ಸಂಗಕ್ಕರ ತಿಳಿಸಿದ್ದಾರೆ.

ಇದನ್ನೂ ಓದಿ | IND VS SL | ವೈಡ್​ ನೀಡದ್ದಕ್ಕೆ ಅಂಪೈರ್​​ ಮೇಲೆ ಸಿಟ್ಟಾದ ದೀಪಕ್​ ಹೂಡಾ; ವಿಡಿಯೊ ವೈರಲ್​

Exit mobile version