Site icon Vistara News

Rishabh Pant | ಪಂತ್​ ಕಾರು ಅವಘಡ ನಡೆದ ಸ್ಥಳದಲ್ಲಿ ರಾತ್ರೋರಾತ್ರಿ ರಸ್ತೆ ಗುಂಡಿ ಮುಚ್ಚಿದ ಅಧಿಕಾರಿಗಳು

Rishabh pant

ಡೆಹ್ರಾಡೂನ್​: ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಅವರ ಕಾರು ಅವಘಡಕ್ಕೆ ರಸ್ತೆ ಗುಂಡಿಯೇ ಕಾರಣ ಎಂಬ ಆರೋಪ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಾತ್ರೋರಾತ್ರಿ ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಪಂತ್​ ಅವರು ಕಾರು ರೂರ್ಕಿ ಗಡಿ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಸುಟ್ಟು ಭಸ್ಮವಾಗಿತ್ತು. ರಿಷಭ್​ ಪವಾಡಸದೃಶವಾಗಿ ಪಾರಾಗಿದ್ದರು.

ಕಾರು ಚಾಲನೆ ಮಾಡುತ್ತಿದ್ದ ರಿಷಣ್​ ಪಂತ್​ ಅವರು ನಿದ್ದೆಗೆ ಜಾರಿದ್ದೇ ಅವಘಡಕ್ಕೆ ಕಾರಣ ಎಂದು ಮೊದಲು ಹೇಳಲಾಗಿತ್ತು. ಮುಂಜಾನೆ ಮಂಜಿನಿಂದ ರಸ್ತೆ ಕಾಣಿಸದೇ ಕಾರು ರಸ್ತೆ ಬದಿಗೆ ಗುದ್ದಿದೆ ಎಂಬುದಾಗಿಯೂ ವರದಿಗಳಾಗಿದ್ದವು. ಇದೇ ವೇಳೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರಣ ಡಿವೈಡರ್​ಗೆ ಬಡಿಯಿತು ಎಂಬುದಾಗಿಯೂ ಹೇಳಲಾಯಿತು. ಘಟನಾ ಸ್ಥಳದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸ್ಥಳೀಯರೊಬ್ಬರು ರಸ್ತೆ ಗುಂಡಿಯಿಂದೇ ಅವಘಡ ಉಂಟಾಗಿದೆ. ಈ ಹಿಂದೆಯೂ ಹಲವಾರು ವಾಹನಗಳು ಇಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ದೂರಿದ್ದರು.

ತಮ್ಮನ್ನು ಭೇಟಿ ಮಾಡಲು ಬಂದ ಜಾರ್ಖಂಡ್ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಾಮಿ ಅವರ ಬಳಿಕ ರಿಷಭ್​ ಅವರು ಗುಂಡಿ ತಪ್ಪಿಸಲು ಹೋಗಿ ಡಿವೈಡರ್​ಗೆ ಗುದ್ದಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರು ಕೂಡ ಈ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರೂ ಎನ್ನಲಾಗಿದೆ.

ಆರೋಪಗಳಿಂದ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಗುಂಡಿಯನ್ನು ರಾತ್ರೋರಾತ್ರಿ ಮುಚ್ಚಿದ್ದಾರೆ. ಈ ಎಕ್ಸ್​ಪ್ರೆಸ್​ ಹೈವೆಯನ್ನು ಹಲವು ವರ್ಷಗಳಿಂದ ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಕಳಪೆ ಸ್ಥಿತಿಯಲ್ಲಿರುವ ಈ ರಸ್ತೆಯನ್ನು ಸರಿಪಡಿಸಲು ಹಲವು ವರ್ಷಗಳಿಂದ ಬೇಡಿಕೆಯಿತ್ತು. ಇದೀಗ ಪಂತ್​ ಕಾರು ಅಪಘಾತ ನಡೆದ ಬಳಿಕ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚಿಸಿದ್ದಾರೆ.

ಇದನ್ನೂ ಓದಿ | Rishabh Pant | ಅಪಘಾತದಿಂದ ಗಾಯಗೊಂಡಾಗಲೂ ತಾಯಿಯನ್ನೇ ಕನವರಿಸುತ್ತಿದ್ದ ರಿಷಭ್​ ಪಂತ್​!

Exit mobile version