Site icon Vistara News

Racial Abuse : ಎಜ್‌ಬಾಸ್ಟನ್‌ನಲ್ಲಿ ಯಾರು, ಯಾರಿಗೆ ನಿಂದಿಸಿದರು

racial abuse

ಎಜ್‌ಬಾಸ್ಟನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಏಷ್ಯಾ ಮೂಲದ ಅಭಿಮಾನಿಗಳ ವಿರುದ್ಧ Racial Abuse ನಡೆದಿದೆ. ಈ ಬಗ್ಗೆ ಎಜ್‌ಬಾಸ್ಟನ್‌ ಕ್ಲಬ್‌ನಲ್ಲಿ ದೂರು ದಾಖಲಾಗಿದೆ.

ಪಂದ್ಯ ನಡೆಯುತ್ತಿರುವ ನಡುವೆ ಸ್ಥಳೀಯ ಕ್ರಿಕೆಟ್‌ ಅಭಿಮಾನಿಗಳ ಗುಂಪೊಂದು ಭಾರತೀಯರು ಕುಳಿತಿದ್ದ ಗ್ಯಾಲರಿ ಕಡೆಗೆ “ಪಾಕಿಸ್ತಾನಿಗಳು,ʼ ಎಂದು ನಿಂದನೆ ಮಾಡುವ ಜತೆಗೆ ಮೈಬಣ್ಣವನ್ನು ಲೇವಡಿ ಮಾಡುವಂಥ ಘೋಷಣೆಗಳನ್ನು ಕೂಗಿದ್ದಾರೆ. ಈ ಬಗ್ಗೆ ಅಭಿಮಾನಿಗಳು ದೂರು ನೀಡಿದ್ದು, ತನಿಖೆ ನಡೆಸುವುದಾಗಿ ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ಲಬ್‌ ಹೇಳಿದೆ

ಲಾರ್ಕ್‌ಶೈರ್‌ನ ಮಾಜಿ ಸ್ಪಿನ್ನರ್‌ ಅಜೀಮ್‌ ರಫೀಕ್‌ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇಂಥದ್ದೊಂದು ಘಟನೆ ನಡೆದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಫೀಕ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ಲಬ್‌ “ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ತಿಳಿದುಕೊಳ್ಳಲಾಗುವುದು,ʼʼ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿದ್ದು, “ಘಟನೆ ವಿಷಾದಕರ” ಎಂದು ಹೇಳಿದೆ.

ದನ್ನೂ ಓದಿ: Srilanka Tour : ಭಾರತದ ವನಿತೆಯರಿಗೆ ಏಕದಿನ ಸರಣಿ

Exit mobile version