Site icon Vistara News

Hockey India ದಿಗ್ಗಜ ವರಿಂದರ್‌ ಸಿಂಗ್‌ ನಿಧನ

hockey india

ನವ ದೆಹಲಿ: ಒಲಿಂಪಿಯನ್‌ ಹಾಗೂ ವಿಶ್ವ ಕಪ್‌ ವಿಜೇತ ಭಾರತ ಹಾಕಿ ತಂಡದ ಸದಸ್ಯರಾಗಿದ್ದ ವರಿಂದರ್‌ ಸಿಂಗ್‌ (೭೫) ಮಂಗಳವಾರ ಮುಂಜಾನೆ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಭಾರತೀಯ ಹಾಕಿ ಕ್ಷೇತ್ರವೇ ಸಂತಾಪ ವ್ಯಕ್ತಪಡಿಸಿದೆ.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ್ದ ವರಿಂದರ್ ಸಿಂಗ್‌ ಅವರು ೧೯೭೦ರ ದಶಕದಲ್ಲಿ ಭಾರತ ಹಾಕಿ ತಂಡದ ಹಲವು ಸಾಧನೆಗಳಲ್ಲಿ ಭಾಗಿಯಾಗಿದ್ದರು. ೧೯೭೫ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವ ಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿರುವುದೇ ಅದರ ಅತಿ ದೊಡ್ಡ ಸಾಧನೆಯಾಗಿದೆ. ಇದು ಹಾಕಿ ವಿಶ್ವ ಕಪ್‌ನಲ್ಲಿ ಭಾರತ ತಂಡ ಗೆದ್ದಿರುವ ಏಕೈಕ ಬಂಗಾರದ ಪದಕವೂ ಹೌದು. ಇದರ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ಸೋಲಿಸಿತ್ತು.

೧೯೭೨ರ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಹಾಗೂ ೧೯೭೩ರಲ್ಲಿ ಆಮಸ್ಟರ್‌ಡ್ಯಾಮ್‌ ವಿಶ್ವ ಕಪ್‌ನಲ್ಲಿ ಕಂಚು ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು ವರಿಂದರ್‌ ಸಿಂಗ್‌.

೧೯೭೪ ಹಾಗೂ ೧೯೭೮ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿಯ ಪದಕ ಬಾಚಿಕೊಂಡ ಭಾರತ ತಂಡದಲ್ಲೂ ವರಂದಿರ್‌ ಸ್ಥಾನ ಪಡೆದಿದ್ದರು. ಅವರು ಈ ಎಲ್ಲ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್‌ಚಂದ್ ಜೀವನ ಶ್ರೇಷ್ಠ ಸಾಧನೆ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Asia Cup 2022 | ಜಪಾನ್‌ ವಿರುದ್ಧ ಭಾರತ ಹಾಕಿ ತಂಡಕ್ಕೆ ಸೋಲು

Exit mobile version