Site icon Vistara News

TCS World 10k : ಒಲಿಂಪಿಕ್ ಚಾಂಪಿಯನ್ ವ್ಯಾಲೆರಿ ಆಡಮ್ಸ್ ಟಿಸಿಎಸ್ ವರ್ಲ್ಡ್ 10ಕೆ ಅಂಬಾಸಿಡರ್

Valerie Adams

ಬೆಂಗಳೂರು: ನಾಲ್ಕು ಬಾರಿ ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಡೇಮ್ ವ್ಯಾಲೆರಿ ಆಡಮ್ಸ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ (TCS World 10k) ಬೆಂಗಳೂರಿನ 16ನೇ ಆವೃತ್ತಿಯ ಅಂತಾರಾಷ್ಟ್ರೀಯ ಈವೆಂಟ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ನ್ಯೂಜಿಲೆಂಡ್​ನ 39 ವರ್ಷದ ಕ್ರೀಡಾಪಟು ಸಾರ್ವಕಾಲಿಕ ಅತ್ಯಂತ ಯಶಸ್ವಿ ಮಹಿಳಾ ಶಾಟ್ ಪುಟರ್ ಆಗಿದ್ದಾರೆ. 2008 ಮತ್ತು 2012ರಲ್ಲಿ ಒಲಿಂಪಿಕ್ಸ್​ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಅವರು ಎರಡು ಚಿನ್ನದ ಪದಕಗಳು, 2016ರಲ್ಲಿ ಬೆಳ್ಳಿ ಮತ್ತು 2020ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಗಮನಾರ್ಹವಾಗಿ, ಆಡಮ್ಸ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸತತ ನಾಲ್ಕು ಚಿನ್ನದ ಪದಕಗಳ ಪ್ರಭಾವಶಾಲಿ ದಾಖಲೆ ಹೊಂದಿದ್ದಾರೆ. ಜೊತೆಗೆ ನಾಲ್ಕು ಬಾರಿ ವಿಶ್ವ ಒಳಾಂಗಣ ಚಾಂಪಿಯನ್ ಮತ್ತು ಮೂರು ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದ ವಿಜೇತರಾಗಿದ್ದಾರೆ.

ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 16ನೇ ಆವೃತ್ತಿಯೊಂದಿಗಿನ ಪಾಲುದಾರಿಕೆ ಕುರಿತು ಮಾತನಾಡಿದ ಆಡಮ್ಸ್, “ಉತ್ತಮ ಉದ್ದೇಶಕ್ಕಾಗಿ ನಮ್ಮನ್ನು ಒಂದುಗೂಡಿಸುವ ಕ್ರೀಡೆಯ ಶಕ್ತಿ ನಿಜವಾಗಿಯೂ ಗಮನಾರ್ಹ. ಏಕತೆ ಮತ್ತು ಸಮುದಾಯಿಕ ಮನೋಭಾವ ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10 ಕೆ ಬೆಂಗಳೂರಿನಲ್ಲಿ ಭಾಗವಹಿಸಲು ನಾನು ಹೆಮ್ಮೆ ಪಡುತ್ತೇನೆ. ಭಾರತದಲ್ಲಿ ಓಟದ ಕುರಿತು ಹೆಚ್ಚುತ್ತಿರುವ ಉತ್ಸಾಹವು ಪ್ರೇರಕ ಮತ್ತು ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ನ ಈ ಪ್ರಭಾವಿ ಅಥ್ಲೀಟ್​ ಯೂತ್, ಜೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ವಿಶ್ವ ಚಾಂಪಿಯನ್​​ಶಿಪ್​ಗಳನ್ನು ಗೆದ್ದ ಮೂರನೇ ಮಹಿಳೆಯಾಗಿದ್ದಾರೆ. ಡಬ್ಲ್ಯುಎ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸತತ ನಾಲ್ಕು ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳೆ. 2014ರಲ್ಲಿ ಆಡಮ್ಸ್ ಐಎಎಎಫ್ ವರ್ಷದ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದರು.

ಮಹಿಳೆಯರ ಕ್ರಿಕೆಟ್​ನ ಪ್ರತಿನಿಧಿ

ಸ್ಪರ್ಧಾತ್ಮಕ ಅಥ್ಲೆಟಿಕ್ಸ್​ನಿಂದ ನಿವೃತ್ತರಾದ ನಂತರ, ಆಡಮ್ಸ್ ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರೇರಣೆ ನೀಡುವ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಕ್ರೀಡಾಕ್ಷೇತ್ರಕ್ಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಪ್ರಸ್ತುತ ಅವರು ವಿಶ್ವ ಅಥ್ಲೀಟ್​ಗಳ ಆಯೋಗದ ಗೌರವ ಅಧ್ಯಕ್ಷರ ಸ್ಥಾನ ಹೊಂದಿದ್ದಾರೆ. ಅಲ್ಲಿ ಅವರು ಜಾಗತಿಕವಾಗಿ ಕ್ರೀಡಾಪಟುಗಳ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಹೋರಾಡುತ್ತಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್ ಕ್ಷೇತ್ರದಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಗಮನಾರ್ಹ ವೃತ್ತಿಜೀವನ ಮೀರಿ ಕ್ರೀಡಾಪಟುಗಳ ಅಭಿವೃದ್ಧಿ ಮತ್ತು ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: Pakistan Cricket Team : ಪಾಕಿಸ್ತಾನ ಕ್ರಿಕೆಟ್​ ಆಟಗಾರರಿಗೆ ರೈಫಲ್​ ತರಬೇತಿ; ಇದೆಲ್ಲ ಬೇಕಿತ್ತಾ ಎಂದ ಅಭಿಮಾನಿಗಳು

ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರಿನ 16 ನೇ ಆವೃತ್ತಿಗೆ ಅಂತರರಾಷ್ಟ್ರೀಯ ಈವೆಂಟ್ ಅಂಬಾಸಿಡರ್ ಆಗಿ ವ್ಯಾಲೆರಿ ಆಡಮ್ಸ್ ಅವರನ್ನು ಸ್ವಾಗತಿಸಲು ಹೆಮ್ಮೆ ಪಡುತ್ತೇವೆ. ವಿಶ್ವದ ಅತ್ಯಂತ ನಿಪುಣ ಕ್ರೀಡಾಪಟುಗಳಲ್ಲಿ ಒಬ್ಬರಾಗಿ, ವ್ಯಾಲೆರಿ ಅದರ ಶ್ರೇಷ್ಠತೆ ಸಾಕಾರಗೊಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಗಮನಾರ್ಹ ಸಾಧನೆಗಳು ಮತ್ತು ಕ್ರೀಡೆಯ ಪ್ರಗತಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಪ್ಯಾರಾ-ಅಥ್ಲೀಟ್​ಗಳಿಗೆ ಅವರ ಬದ್ಧತೆ ವಿಶ್ವಾದ್ಯಂತದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್ ಮನೋಭಾವ ಆಚರಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಪ್ರೊಕ್ಯಾಮ್ ಇಂಟರ್​​ನ್ಯಾಷನಲ್​ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಹೇಳಿದ್ದಾರೆ.

Exit mobile version