ಬೆಂಗಳೂರು: ಆಸ್ಟ್ರೇಲಿಯಾದ ಮಹಿಳಾ ಫುಟ್ಬಾಲ್ ತಂಡ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್ ಹೊರಡಿದೆ. ಆದರೆ, ಬರುವಾಗ ತಮ್ಮ ಪ್ರಮುಖ ಲಗೇಜುಗಳು ಹಾಗೂ ಸಾಮಾಗ್ರಿಗಳನ್ನು ಮರೆತು ಬಂದಿದ್ದಾರೆ! ಅವರ ಬ್ಯಾಗ್ ಸ್ಪೇನ್ನಲ್ಲಿ ಉಳಿದಿದೆ ಎನ್ನಲಾಗಿದೆ. ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಕೆಲವು ವಸ್ತುಗಳೇ ಇಲ್ಲದೆ ಪ್ಯಾರಿಸ್್ಗೆ ಆಗಮಿಸಿದೆ ಎಂದು ತಂಡದ ಮುಖ್ಯಸ್ಥೆ ಅನ್ನಾ ಮೀರೆಸ್ ಭಾನುವಾರ ತಿಳಿಸಿದ್ದಾರೆ.
ಮಾರ್ಸಿಲೆಯಲ್ಲಿ ಜರ್ಮನಿ ವಿರುದ್ಧದ ಮೊದಲ ಗ್ರೂಪ್ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇದೆ. ಅದಕ್ಕಾಗಿ ತಯಾರಿ ನಡೆಸುತ್ತಿದೆ. ತಂಡದ ಮ್ಯಾನೇಜ್ಮೆಂಟ್ ತಮ್ಮ ಉಳಿದ ಸಾಮಾಗ್ರಿಗಳು ಹಾಗೂ ಕಾಣೆಯಾದ ಕೆಲವು ಉಪಕರಣಗಳನ್ನು ಸ್ಥಳೀಯವಾಗಿ ಜೋಡಿಸಿಕೊಳ್ಳಲು ಹೆಣಗಾಡುತ್ತಿದೆ.
ಲಗೇಜ್ ಪ್ರಸ್ತುತ ಸ್ಪೇನ್ ನಲ್ಲಿದೆ. ಸಮಸ್ಯೆ ಪರಿಹರಿಸಲು ಆಸ್ಟ್ರೇಲಿಯಾ ಫುಟ್ಬಾಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮೀರೆಸ್ ಹೇಳಿದರು. ತರಬೇತಿ ಕಿಟ್ ತಮ್ಮ ಬಳಿ ಇರುವುದರಿಂದ ತರಬೇತಿ ಮತ್ತು ತಯಾರಿ ನಡೆಸಲು ಸಾಧ್ಯವಾಗುತ್ತದೆ. ಆದರೆ ಕೆಲವು ವೈಯಕ್ತಿಕ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳು ಇನ್ನೂ ಬಂದಿಲ್ಲ ಎಂದು ತಂಡದ ಮುಖ್ಯಸ್ಥರು ಹೇಳಿದರು.
ವಸ್ತುಗಳು ಪ್ರಸ್ತುತ ಸ್ಪೇನ್ನಲ್ಲಿವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಫುಟ್ಬಾಲ್ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಮೀರೆಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಂಡದ ಅಧಿಕಾರಿಗಳು ಈಗಾಗಲೇ ಫ್ರಾನ್ಸ್ನ ಮಾರ್ಸಿಲೆಯಲ್ಲಿ ಟೇಪ್ ಸ್ಟ್ರ್ಯಾಪಿಂಗ್, ಕತ್ತರಿ ಮತ್ತು ಪುನಶ್ಚೇತನ ಕಿಟ್ಗಳಂಥ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ನಾವು ಪ್ಯಾರಿಸ್ ತಲುಪುವ ಮೊದಲು ಉಪಕರಣಗಳು ಶನಿವಾರ ವಿಮಾನಗಳ ಮೂಲಕ ಬರಬೇಕಾಗಿತ್ತು. ಆದರೆ ಏನೋ ತಪ್ಪಾಗಿದೆ ಎಂದು ತಂಡದ ಮೂಲಗಳು ಹೇಳಿವೆ.
ಆಸ್ಟ್ರೇಲಿಯಾ ತಂಡಕ್ಕೆ ಇಂಥದ್ದು ಮೊದಲ ಅನುಭವ ಅಲ್ಲ.ಇದಕ್ಕೂ ಮುನ್ನ ಜುಲೈನಲ್ಲಿ ಟೀಮ್ ಆಸ್ಟ್ರೇಲಿಯಾದ ಎಲ್ಲಾ ಸಮವಸ್ತ್ರಗಳನ್ನು ಹೊತ್ತ ಕಂಟೈನರ್ ಹಡಗು ಜಿಬ್ರಾಲ್ಟರ್ ಬಳಿ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿತ್ತು. ಹೀಗಾಗಿ ಅವರ ವಸ್ತುಗಳು ಸೂಕ್ತ ಸಂದರ್ಭದಲ್ಲಿ ದೊರಕಿರಲಿಲ್ಲ.
ಅಪಾಯಕಾರಿ ರಾಸಾಯನಿಕ ಪತ್ತೆ; ಪ್ಯಾರಿಸ್ ಒಲಿಂಪಿಕ್ಸ್ ಬ್ರಾಂಡ್ನ ಬಾಟಲ್ಗಳಿಗೆ ನಿಷೇಧ
ಪ್ಯಾರಿಸ್: ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವ ನಡುವೆ ಫ್ರೆಂಚ್ ಅಧಿಕಾರಿಗಳು ಪ್ಯಾರಿಸ್ 2024-ಬ್ರಾಂಡೆಡ್ ಲೋಹದ ನೀರಿನ ಬಾಟಲಿಗಳನ್ನು ನಿಷೇಧ ಮಾಡಿದ್ದಾರೆ. ಇದರಿಂದ ಆಯೋಜಕರಿಗೆ ಮತ್ತು ಅಲ್ಲಿಗೆ ಪ್ರವಾಸ ಬರುವರಿಗೆ ಬಾರಿ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಒಲಿಂಪಿಕ್ಸ್ ಬ್ರಾಂಡ್ ಹೊಂದಿರುವ ಬಾಟಲ್ಗಳನ್ನು ಟೂರ್ನಿಯ ಅವಧಿಯಲ್ಲಿ ಬಳಸುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಡಿಸ್ಟ್ರಪ್ಟರ್ ಬಿಸ್ಫೆನಾಲ್ ಎ ರಾಸಾನಿಕ ಹೆಚ್ಚಿರುವ ಕಾರಣ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ಇದನ್ನೂ ಓದಿ: Joe Root : ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್ ವಾ ದಾಖಲೆ ಸರಿಗಟ್ಟಿದ ಜೋ ರೂಟ್
ಫ್ರೆಂಚ್ ಕಂಪನಿ ವಿಲಾಕ್ ತಯಾರಿಸಿದ ಬಾಟಲಿಗಳು “ನಿಯಮಗಳಿಗೆ ಅನುಸಾರವಾಗಿಲ್ಲ” ರಾಸಾಯನಿಕದ ಮಟ್ಟವನ್ನು ಹೊಂದಿವೆ ಎಂದು ಸರ್ಕಾರಿ ವೆಬ್ಸೈಟ್ ರಾಪೆಲ್ ಕಾನ್ಸೊದಲ್ಲಿ ಬರೆಯಲಾಗಿದೆ. ಆಗಸ್ಟ್ 2023 ರ ಅಂತ್ಯದಿಂದ ಜೂನ್ ಆರಂಭದವರೆಗೆ ಫ್ಯಾನ್ಸ್ನಲ್ಲಿ ಮಾರಾಟವಾದ ಬಾಟಲಿಗಳು ಇನ್ನು ಮುಂದೆ ವಿಲಾಕ್ ಆನ್ಲೈನ್ ಅಂಗಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಯಮ ಅನುಸರಣೆಯ ಕಾರಣಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಲೈಸೆನ್ಸ್ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪ್ಯಾರಿಸ್ 2024 ಸಂಘಟಕರು ರಾಯಿಟರ್ಸ್ಗೆ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ಮತ್ತು ಬಂಜೆತನ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಬಿಸ್ಫೆನಾಲ್ ಎ ಅನ್ನು 2015 ರಿಂದ ಫ್ರಾನ್ಸ್ನಲ್ಲಿ ನಿಷೇಧಿಸಲಾಗಿದೆ.