Site icon Vistara News

WTC Final 2023 : ನಿಲ್ಲಬಾರದ ಜಾಗದಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಕೈ ಮುಗಿದು ಬೇಡಿಕೊಂಡ ಅಂಪೈರ್​!

Richard Illingworth

#image_title

ಲಂಡನ್​: ಲಂಡನ್ನ ಓವಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ 2021-23ರ ಫೈನಲ್ ಪಂದ್ಯದಲ್ಲಿ (WTC Final 2023) ಭಾರತ (Team India) ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. ಜೂನ್ 7ರಂದು ಪಂದ್ಯ ಆರಂಭಗೊಂಡಿದ್ದು. 3ನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್ ಆಂಭಿಸಿತ್ತು. ಅದಕ್ಕಿಂತ ಮೊದಲು ಭಾರತ ತಂಡ ಆಲ್​ಔಟ್ (All out) ಆಗಿತ್ತು. ಬಳಿಕ ಆಸ್ಟ್ರೇಲಿಯಾದ ಆರಂಭಿಕರನ್ನು ಔಟ್ ಮಾಡುವ ಮೂಲಕ ಭಾರತೀಯ ಬೌಲರ್​ಗಳು ಉತ್ತಮ ಆರಂಭ ಪಡೆದಿದ್ದರು. ಅದಕ್ಕಿಂತ ಮೊದಲು ದಿನದಾಟದ ಮೂರನೇ ಅವಧಿಯಲ್ಲಿ ವಿನೋದದ ಘಟನೆಯೊಂದು ನಡೆಯಿತು.

ಪಿಚ್​ನ ನೇರಕ್ಕೆ ಸ್ಟೇಡಿಯಮ್​ನಲ್ಲಿ ಸೈಟ್​ ಸ್ಕ್ರೀನ್ ಹಾಕಿರುತ್ತಾರೆ. ಬ್ಯಾಟರ್​​ಗಳಿಗೆ ಚೆಂಡು ಸ್ಪಷ್ಟವಾಗಲಿ ಕಾಣಲಿ ಎಂಬ ಉದ್ದೇಶಕ್ಕೆ ಹಾಗೆ ಮಾಡಿರುತ್ತಾರೆ. ಒಂದು ವೇಳೆ ಆ ಸ್ಕ್ರೀನ್​ ಯಾರಾದರೂ ಬಂದರೆ ಬ್ಯಾಟರ್​ಗಳಿಗೆ ಗೊಂದಲವಾಗುತ್ತದೆ. ಮೂರನೇ ದಿನದಾಟದ ವೇಳೆ ಅಭಿಮಾನಿಗಳು ಪದೇಪದೆ ಸೈಟ್​ ಸ್ಕ್ರೀನ್​ ಮುಂದೆ ಬರುತ್ತಿದ್ದರು. ಇದರಿಂದ ಆಟಗಾರರಿಗೆ ತೊಂದರೆ ಆಗುತ್ತಿತ್ತು. ತಕ್ಷಣ ಅಂಪೈರ್​ ಕೈಮುಗಿದು ಅಭಿಮಾನಿಗಳಿಗೆ ಜಾಗ ಖಾಲಿ ಮಾಡುವಂತೆ ಅವರು ಹೇಳಿದರು. ಈ ಪ್ರಸಂಗ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು ಹಾಗೂ ನೆಟ್ಟಿಗರ ಗಮನ ಸೆಳೆಯಿತು.

44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ

ಲಂಡನ್​: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2023) ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಪ್ರಮುಖ 2 ವಿಕೆಟ್ ಪಡೆಯುವ ಮೂಲಕ 44 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.

ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್‌ ಪ್ರಮುಖ ಬ್ಯಾಟರ್​ಗಳಾದ ಸ್ಟೀವನ್ ಸ್ಮಿತ್(Steven Smith) ಹಾಗೂ ಟ್ರಾವಿಸ್ ಹೆಡ್(Travis Head) ಅವರ ವಿಕೆಟ್ ಪಡೆಯುವಯುವ ಮೂಲಕ ಭಾರತದ ಮಾಜಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿಯವರ ದಾಖಲೆಯನ್ನು ಮರಿದಿದ್ದಾರೆ. ಎಡಗೈ ಬೌಲರ್​ ಆಗಿ ಭಾರತ ಪರ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕು ಮೊದಲು ಈ ದಾಖಲೆ 266 ವಿಕೆಟ್​ ಕಿತ್ತ ಬಿಷನ್ ಸಿಂಗ್ ಬೇಡಿ(Bishan Singh Bedi) ಅವರ ಹೆಸರಿನಲ್ಲಿತ್ತು. ಇದೀಗ ಜಡೇಜಾ 267 ವಿಕೆಟ್​ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ವಿಶ್ವ ಟೆಸ್ಟ್​ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರನಾಗಿದ್ದಾರೆ.

Exit mobile version