ಕರಾಚಿ: ಆನ್ಲೈನ್ ಮೂಲಕ ಥಿಯರಿ ಕಲಿಸಬಹುದು. ಆದರೆ ಪ್ರಾಕ್ಟಿಕಲ್? ಸಾಧ್ಯ ಎನ್ನುತ್ತಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಈ ನಿಟ್ಟಿನಲ್ಲಿ ಅಲ್ಲಿನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಹೊಸ ಯೋಜನೆಯೊಂದನ್ನು ರೂಪಿಸಿಕೊಂಡಿದ್ದಾರೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡಕ್ಕೆ (Pakistan Cricket Team) ಆನ್ಲೈನ್ನಲ್ಲಿ ತರಬೇತಿ ನೀಡುವ ಕೋಚ್ ಒಬ್ಬರು ಅಯ್ಕೆಯಾಗಲಿದ್ದಾರೆ.
ಆಸ್ಟ್ರೇಲಿಯಾ ಮೂಲದ ಯಶಸ್ವಿ ಕೋಚ್ ಮೈಕ್ ಆರ್ಥರ್ ಅವರನ್ನು ತಮ್ಮ ತಂಡಕ್ಕೆ ಕೋಚ್ ಆಗಿ ನೇಮಕ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ನಜೀಮ್ ಸೇಥೀ ಅವರು ಮುಂದಾಗಿದ್ದಾರೆ. ಆದರೆ ಇಂಗ್ಲೆಂಡ್ನ ಕೌಂಟಿ ತಂಡ ಡರ್ಬಿಶೈರ್ನ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಅದಕ್ಕೆ ಒಪ್ಪಿಲ್ಲ. ಹೀಗಾಗಿ ಆನ್ಲೈನ್ ಮೂಲಕ ಕೋಚ್ ಆಗಿ ತರಬೇತಿ ನೀಡುವಂತೆ ಕೋರಲಾಗಿದೆ ಎಂದು ವರದಿಯಾಗಿದೆ.
ಮೈಕ್ ಅರ್ಥರ್ ಅವರು ಕೋಚಿಂಗ್ ಕೆಲಸದಲ್ಲಿ ನಿಸ್ಸೀಮರು. ಅವರು ದಕ್ಷಿಣ ಆಫ್ರಿಕಾ. ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿಸಿದ ಖ್ಯಾತಿ ಹೊಂದಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಕರೆತರಲು ನಜೀಂ ಸೇಥಿ ಯೋಜನೆ ಹಾಕಿಕೊಂಡಿದ್ದಾರೆ. ಅದರ ಭಾಗವಾಗಿ ಆನ್ಲೈನ್ ಕೋಚಿಂಗ್ಗೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ : Wahab Riaz: ಪಂಜಾಬ್ನ ಕ್ರೀಡಾ ಸಚಿವರಾಗಿ ಆಯ್ಕೆಯಾದ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ!
ಸದ್ಯ ಅವರ ಆನ್ಲೈನ್ ಕೋಚಿಂಗ್ ಕೊಟ್ಟರೂ ಭವಿಷ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಭಾರತದಲ್ಲಿ ನಡೆಯುವ ಏಕ ದಿನ ಕ್ರಿಕೆಟ್ ವಿಶ್ವ ಕಪ್ ವೇಳೆ ಅವರು ತಂಡಕ್ಕೆ ನೇರವಾಗಿ ಕೋಚಿಂಗ್ ಕೊಡಲಿದ್ದಾರೆ.