ದುಬೈ : ಮಹಿಳೆಯ ಟಿ20 ವಿಶ್ವ ಕಪ್ (T20 World Cup) ಫೆಬ್ರವರಿ 26ರಂದು ಮುಕ್ತಾಯಗೊಂಡಿದೆ. ದಕ್ಷಿಣ ಆಫ್ರಿಕಾ ತಂಡವನ್ನು 19 ರನ್ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ ಚಾಂಪಿಯನ್ಪಟ್ಟ ಅಲಂಕರಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಇದು ಆರನೇ ವಿಶ್ವ ಕಪ್ ಹಾಗೂ ಸತತ ಮೂರನೇ ಟ್ರೋಫಿ. ಪ್ರಮುಖ ಟೂರ್ನಿ ಮುಕ್ತಾಯಗೊಂಡ ಬಳಿಕ ಶ್ರೇಷ್ಠ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸುತ್ತದೆ. ಅಂತೆಯೇ ಫೆಬ್ರವರಿ 28ರಂದು ಐಸಿಸಿ ಟೂರ್ನಿಯ ಶ್ರೇಷ್ಠ ತಂಡವನ್ನು (Team Of The Tournament) ಪ್ರಕಟಿಸಿದೆ. ಅದರಲ್ಲಿ ಭಾರತದ ರಿಚಾ ಘೋಷ್ ಮಾತ್ರ ಅವಕಾಶ ಪಡೆದುಕೊಂಡಿದ್ದಾರೆ.
ಇಡೀ ಪಂದ್ಯಾವಳಿಯಲ್ಲಿ ಒಟ್ಟು 136 ರನ್ ಗಳಿಸಿದ ಭಾರತದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರೀಚಾ ಘೋಷ್ (Richa Ghosh) ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಉಳಿದಂತೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ 4 ಆಟಗಾರ್ತಿಯರು ಇದ್ದಾರೆ. ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡದಿಂದ 3 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ 5 ರನ್ ಸೋಲು; ವಿಶ್ವ ಕಪ್ನ ಸೆಮಿ ಫೈನಲ್ಸ್ ಹಂತದಲ್ಲಿ ಮುಗ್ಗರಿಸಿದ ವನಿತೆಯರ ತಂಡ
ಸೆಮಿಫೈನಲ್ ಇಂಗ್ಲೆಂಡ್ ತಂಡದಿಂದ ಇಬ್ಬರು ಆಟಗಾರ್ತಿಯರು ಹಾಗೂ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳಿಂದ ತಲಾ ಒಬ್ಬೊಬ್ಬರು ಆಟಗಾರರು ಇದ್ದಾರೆ.
ಐಸಿಸಿ ಟಿ20 ವಿಶ್ವ ಕಪ್ ತಂಡ
ತಜ್ಮಿನ್ ಬ್ರಿಟ್ಸ್, ಅಲಿಸಾ ಹೀಲಿ, ಲಾರಾ ವೋರ್ವರ್ಟ್, ನ್ಯಾಟ್ ಸ್ಕಿವರ್ ಬ್ರಂಟ್, ಆಶ್ಲೇ ಗಾರ್ಡ್ನರ್, ರಿಚಾ ಘೋಷ್, ಸೋಫಿ ಎಕ್ಲೆಸ್ಟೋನ್, ಕರೀಶ್ಮಾ ರಾಮ್‌ಹಾರ್ಕ್, ಶಬ್ನಿಮ್ ಇಸ್ಮಾಯಿಲ್, ಡಾರ್ಸಿ ಬ್ರೌನ್, ಮೇಗನ್ ಶೂಟ್.