ಮುಂಬಯಿ: ಮಹಿಳೆಯರ ಪ್ರೀಮಿಯರ್ ಲೀಗ್ (WPL 2023) ಐಪಿಎಲ್ನ ಮಹಿಳಾ ಆವೃತ್ತಿ. ಇದು ವಿಶ್ವದ ಅತ್ಯಂತ ದೊಡ್ಡ ವನಿತೆಯರ ಟಿ20 ಲೀಗ್ ಎನಿಸಿಕೊಂಡಿದ್ದು, ಮಾರ್ಚ್ 4ರಂದು ಉದ್ಘಾಟನೆಯಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಹಾಗೂ ಗುಜರಾತ್ ಜಯಂಟ್ಸ್ ತಂಡಗಳು ಕಾದಾಡಲಿವೆ. ಮಹಿಳಾ ಕ್ರಿಕೆಟ್ಗೆ ದೊಡ್ಡ ಮಟ್ಟದ ಪ್ರಾಮುಖ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿರುವ ಡಬ್ಲ್ಯುಪಿಎಲ್ನ ಮೊದಲ ಪಂದ್ಯವೇ ಜಿದ್ದಾಜಿದ್ದಿನಿಂದ ಕೂಡಿರಲಿದೆ.
ಹರ್ಮನ್ಪ್ರಿತ್ ಕೌರ್ ನೇತೃತ್ವದ ಮುಂಬಯಿ ಇಂಡಿಯನ್ಸ್ ತಂಡ ಅಮೇಲಿಯಾ ಕೆರ್ ಅವರಂಥ ಬಲಿಷ್ಠ ಆಟಗಾರ್ತಿಯರನ್ನ ಹೊಂದಿದೆ. ನ್ಯಾಟ್ ಸ್ಕೀವರ್ ಹಾಗೂ ಪೂಜಾ ವಸ್ತಾಕರ್ ಅವರಂಥ ಹೊಡೆಬಡಿಯ ದಾಂಡಿಗರನ್ನು ಹೊಂದಿದೆ. ಇದೇ ವೇಳೆ ಟಿ20 ವಿಶ್ವ ಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕಿ ಬೆತ್ ಮೂನಿ ಗುಜರಾತ್ ತಂಡದ ನಾಯಕಿಯಾಗಿದ್ದಾರೆ. ಆವರ ಬೆಂಬಲಕ್ಕೆ ಆಶ್ಲೇ ಗಾರ್ಡ್ನರ್, ಸೋಫಿ ಡಂಕಿ, ಸ್ನೇಹಾ ರಾಣಾ ಮತ್ತಿರರರು ಇದ್ದಾರೆ.
ತಂಡಗಳು ಇಂತಿವೆ
ಮುಂಬೈ ಇಂಡಿಯನ್ಸ್(Mumbai Indians) : ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸೀವರ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀಥರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಜೆ ಸೋನಮ್ ಯಾದವ್, ಜಿಂತಿಮಣಿ ಕಲಿತಾ, ನೀಲಂ ಬಿಷ್ಟ್.
ಗುಜರಾತ್ ಜೈಂಟ್ಸ್(Gujarat Giants) : ಬೆತ್ ಮೂನಿ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಸೋಫಿ ಡಂಕ್ಲಿ, ಅನ್ನಾ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ್ ರಾಣಾ, ಸಬ್ಬಿನೇನಿ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ಡಿ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ನಮ್ ಶಕಿಲ್.
ಪಂದ್ಯಾವಳಿಯ ಸ್ವರೂಪ
ಒಟ್ಟು 5 ತಂಡಗಳು ಸೆಣಸಲಿದ್ದು, ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಹಾಗೂ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ಮಾರ್ಚ್ 24ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಲೀಗ್ನ ಫೈನಲ್ ಪಂದ್ಯ ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಎಲ್ಲಿ ವೀಕ್ಷಣೆ ಸಾಧ್ಯ
ಮಹಿಳಾ ಪ್ರೀಮಿಯರ್ ಲೀಗ್ 2023ರ ಪಂದ್ಯಗಳು ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಜಿಯೋ ಸಿ ಅಪ್ಲಿಕೇಶನ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.