Site icon Vistara News

Team India | ಟೀಮ್‌ ಇಂಡಿಯಾದ ಪ್ರದರ್ಶನಕ್ಕಿಂತ ಓರಿಯೊ ಪಕೋಡಾ ಚೆನ್ನಾಗಿತ್ತು! ಹೀಗೆಂದಿದ್ದು ಯಾರು?

ind vs eng

ಮುಂಬಯಿ : ಇಂಗ್ಲೆಂಡ್‌ ವಿರುದ್ಧದ ಟಿ೨೦ ವಿಶ್ವ ಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡದ (Team India) ಆಟಗಾರರು ನಾನಾ ರೀತಿಯಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಹಣಾಹಣಿಯಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮಂದಿ ಬಗೆಬಗೆಯಲ್ಲಿ ಮಾತಾನಾಡುತ್ತಿರುವ ಜತೆಗೆ ಇ ಕಾಮರ್ಸ್‌ ಸಂಸ್ಥೆಗಳು, ಫುಡ್‌ ಡೆಲಿವರಿ App ಗಳು ಕೂಡ ಟ್ರೋಲ್‌ ಮಾಡಿವೆ. ಅಂಥ ಕೆಲವು ಟ್ರೋಲ್‌ಗಳ ವಿವರ ಇಲ್ಲಿದೆ.

ವಸ್ತ್ರಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿರುವ ಇ ಕಾಮರ್ಸ್‌ ಸಂಸ್ಥೆ ಮಿಂತ್ರಾ, ಕೆ. ಎಲ್‌ ರಾಹುಲ್‌ ಅವರನ್ನು ಟ್ರೋಲ್‌ಗೆ ಒಳಪಡಿಸಿದೆ. ಈ ಸಂಸ್ಥೆ “OUT OF THIS WORLD’ ಟಿ ಶರ್ಟ್‌ನ ಫೋಟೊ ಹಾಕಿ ಇದು ಕೆ. ಎಲ್‌ ರಾಹುಲ್ ಅವರ ಫೇವರಿಟ್‌ ಶರ್ಟ್‌ ಎಂದು ಬರೆದುಕೊಂಡಿದೆ.

ಭಾರತ ತಂಡವನ್ನು ಟ್ರೋಲ್‌ ಮಾಡುವಲ್ಲಿ ಗಿನ್ನಿಸ್‌ ವಿಶ್ವ ದಾಖಲೆ ಸಂಸ್ಥೆಯೂ ಹಿಂದೆ ಬಿದ್ದಿಲ್ಲ. ನಮ್ಮ ಪ್ರಕಾರ ಇದು ಅತ್ಯಂತ ಸುಲಭವಾದ ರನ್ ಚೇಸ್‌ ಎಂಬುದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

ಭಾರತದ ಮತ್ತೊಂದು ಜನಪ್ರಿಯ ಇ ಕಾಮರ್ಸ್‌ ಸಂಸ್ಥೆಯಾಗಿರುವ ಫ್ಲಿಫ್‌ ಕಾರ್ಟ್‌ ಕೂಡ ಭಾರತ ತಂಡದ ಸೋಲಿನ ಬಳಿಕ ಹತಾಶೆಯ ಟ್ವೀಟ್‌ ಮಾಡಿದೆ. ಅದರಲ್ಲಿ ‘ಈ ಬಾರಿ ಟ್ವೀಟ್‌ ಇಲ್ಲ. ಕೇವಲ’ ಎಂದು ಒಕ್ಕಣೆ ನೀಡಿ ಹಿಂದಿಯಲ್ಲಿ ದುಃಖ, ಕೋಪ, ಹತಾಶೆ, ಬೇಸರ, ವ್ಯಾಕುಲ, ಸಂತಾಪ, ವಿಷಾದ ಎಂದೆಲ್ಲ ಬರೆದುಕೊಂಡಿದೆ.

‘ಈ ಸೋಲಿಗಿಂತ ಒರಿಯೊ ಬಿಸ್ಕೆಟ್‌ನಿಂದ ಮಾಡಿದ ಪಕೋಡಾವೇ ತುಂಬಾ ರುಚಿಯಾಗಿದೆ’. ಹೀಗೆಂದು ಬರೆದವರು ಮತ್ಯಾರು ಅಲ್ಲ. ಆನ್‌ಲೈನ್‌ ಫುಡ್‌ ಡೆಲಿವರಿ App ಜೊಮ್ಯಾಟೊ. ಸಿಹಿಯಾಗಿರುವ ಒರಿಯೊ ಬಿಸ್ಕೆಟ್‌ ಅನ್ನು ಬೋಂಡಾ ಹಿಟ್ಟಿಗೆ ಅದ್ದಿ ಕರಿಯುವುದು ಕೆಲವು ದಿನಗಳಿಂದ ಟ್ರೆಂಡ್‌ ಆಗಿತ್ತು. ಇದೊಂದು ವಿಚಿತ್ರ ರುಚಿಯಾಗಿದ್ದು ಕೆಲವರಷ್ಟೇ ಇಷ್ಟಪಟ್ಟಿದ್ದಾರೆ. ಅಲ್ಲದೆ ಈ ರೆಸಿಪಿ ಬಗ್ಗೆ ಚಿತ್ರ ವಿಚಿತ್ರ ಅಭಿಪ್ರಾಯಗಳಿವೆ. ಹೀಗಾಗಿ ಜೊಮ್ಯಾಟೊ ಕಂಪನಿಯು ಅದೇ ರೆಸಿಪಿಯನ್ನು ಬಳಸಿ ಟೀಮ್‌ ಇಂಡಿಯಾವನ್ನು ಟ್ರೋಲ್‌ ಮಾಡಿದೆ.

ಇದನ್ನೂ ಓದಿ | Team India | ಟೀಮ್‌ ಇಂಡಿಯಾದ ಬಣ್ಣ ಬಯಲಾಯ್ತು ಎಂದು ಟೀಕಿಸಿದ ಪಾಕ್‌ನ ಮಾಜಿ ವೇಗಿ ಶೋಯೆಬ್‌ ಅಖ್ತರ್‌

Exit mobile version