Site icon Vistara News

Gautam Gambhir: ಬಾಬರ್​ ಬ್ಯಾಟಿಂಗ್​ ಸುಧಾರಣೆಗೆ ಸಲಹೆ ನೀಡಿದ ಗಂಭೀರ್

babar azam

ಮುಂಬಯಿ: ವಿಶ್ವಕಪ್​ ಆರಂಭಕ್ಕೂ ಮುನ್ನ ಬಾಬರ್​ ಅಜಂ(Babar Azam) ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದ ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್(Gautam Gambhir)​ ಅವರು ಈಗ ಬಾಬರ್​ ಪ್ರದರ್ಶನದ ಬಗ್ಗೆ ಅಪಸ್ವರವೆತ್ತಿದ್ದಾರೆ.

“ಬಾಬರ್ ಅವರ ವ್ಯಕ್ತಿತ್ವ, ಅವರ ಆಟ ಮತ್ತು ಮುಖ್ಯವಾಗಿ ಅವರ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ಪಾಕಿಸ್ತಾನವು ಆಕ್ರಮಣಕಾರಿ ಬ್ಯಾಟರ್‌ಗಳ ಇತಿಹಾಸವನ್ನು ಹೊಂದಿದೆ. ಶಾಹಿದ್ ಅಫ್ರಿದಿ, ಇಮ್ರಾನ್ ನಜೀರ್, ಸಯೀದ್ ಅನ್ವರ್, ಅಮೀರ್ ಸೊಹೈಲ್ ಇವರೆಲ್ಲ ಸ್ಫೋಟಕ ಆಟಕ್ಕೆ ಹೆಸರುವಾಸಿ ಇವರ ಮನಸ್ಥಿತಿಯಲ್ಲೇ ಬಾಬರ್​ ಕೂಡ ಆಟವಾಡಬೇಕು. ಆಗ ಅವರ ನೈಜ ಆಟ ಹೊರಬರುತ್ತದೆ. ಶಾಂತ ರೀತಿಯ ಆಟ ಇವರಿಗೆ ಹೊಂದಿಕೊಳ್ಳುದಿಲ್ಲ” ಎಂದು ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಶ್ವಕಪ್​ಗೂ ಮುನ್ನ ಗಂಭೀರ್​ ಅವರು ಬಾಬರ್​ ಅಜಂ ಈ ಬಾರಿ ವಿಶ್ವಕಪ್​ನಲ್ಲಿ ನಾಲ್ಕು ಶತಕ ಮತ್ತು ಟೂರ್ನಿಯ ಗರಿಷ್ಠ ಸ್ಕೋರರ್​ ಆಗಲಿದ್ದಾರೆ ಎಂದಿದ್ದರು. ಆದರೆ ಬಾಬರ್​ ಸತತ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗುತ್ತಿದ್ದಾರೆ. ಬಾಬರ್​ ವೈಫಲ್ಯದಿಂದ ಗಂಭೀರ್​ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರೆ. ಇದೇ ಕಾರಣಕ್ಕೆ ಅವರು ಬಾಬರ್​ ಆಕ್ರಮಣಕಾರಿ ಆಟವಾಡಬೇಕೆಂದು ಸಲಹೆ ನೀಡಿದಂತಿದೆ.

​ಏಷ್ಯಾ ಕಪ್​ನಲ್ಲಿ ವಿರಾಟ್​ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್​ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್​ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್​ ತಾನು ಮಾತ್ರ ಪಾಕ್​ ಆಟಗಾರರನ್ನು ಒಲೈಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನರಿ ಬುದ್ಧಿ ತೋರಬೇಡಿ ಎಂದಿದ್ದರು.

ಇದನ್ನೂ ಓದಿ Gautam Gambhir: ‘ಕುಸ್ತಿ’ ಮರೆತು ಕೊಹ್ಲಿ-ನವೀನ್‌ ‘ದೋಸ್ತಿ’; ರಾಜಿ ಬಗ್ಗೆ ಗಂಭೀರ್‌ ಹೇಳಿದ್ದೇನು?

2007ರ ಟಿ20 ವಿಶ್ವಕಪ್​ ಫೈನಲ್​ ಮತ್ತು 2011 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್​ ಭಾರತ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ವಿಶ್ವಕಪ್​ ವಿಚಾರದಲ್ಲಿಯೂ ಗಂಭೀರ್​ ಈ ಬಾರಿ ಭಾರತ ಕಪ್​ ಗೆಲ್ಲುವುದಿಲ್ಲ ಎಂದಿದ್ದರು. “ಈ ಬಾರಿ​ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್​ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್​ರೌಂಡರ್​, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಕೂಡ ಕಪ್​ ಗೆಲ್ಲುವುದು ಕಷ್ಟ ಆದರೆ ಫೈನಲ್​ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್​ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್​ ಕಟ್ಟಬಲ್ಲ ಆಟಗಾರರು ವಿಶ್ವಕಪ್​ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್​ ಗೆಲ್ಲುವುದು ಅಸಾಧ್ಯ” ಎಂದು ಹೇಳಿದ್ದರು.

Exit mobile version