Site icon Vistara News

Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್​ ಗಂಗೂಲಿ!

Virat kohli

#image_title

ನವದೆಹಲಿ: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ (Team India) 209 ಹೀನಾಯ ಸೋಲು ಕಂಡ ಬಳಿಕ ಹಲವು ವಿಷಯಗಳ ಕುರಿತು ಚರ್ಚೆ ಆರಂಭಗೊಂಡಿವೆ. ಅದೇ ಮಾದರಿಯಲ್ಲಿ ವಿರಾಟ್​ ಕೊಹ್ಲಿಯ ಟೆಸ್ಟ್ ನಾಯಕತ್ವದ ರಾಜೀನಾಮೆಯ ವಿಚಾರವೂ ಇದೇ ವೇಳೆ ಚರ್ಚೆಗೆ ಆಸ್ಪದ ನೀಡಿದೆ. ಈ ಕುರಿತು ಮಾತನಾಡಿದ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ರೆಡ್-ಬಾಲ್ ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕತ್ವ ತ್ಯಜಿಸಬೇಕು ಎಂದು ಬಿಸಿಸಿಐ ಎಂದಿಗೂ ಬಯಸಲಿಲ್ಲ. ಏಕೆಂದರೆ ಅದು ಅವರ ವೈಯಕ್ತಿಕ ನಿರ್ಧಾರ ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ನಲ್ಲಿ ಭಾರತದ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿಯನ್ನು ಟೆಸ್ಟ್ ತಂಡದ ನಾಯಕರನ್ನಾಗಿ ಮರುನೇಮಕಗೊಳಿಸುವ ಒತ್ತಾಯಗಳು ಕೇಳಿಬರುತ್ತಿವೆ. ತಮ್ಮ ನಾಯಕತ್ವದ ಅಡಿಯಲ್ಲಿ ಅತ್ಯಂತ ಯಶಸ್ವಿ ಟೆಸ್ಟ್​​ ನಾಯಕರಲ್ಲಿ ಒಬ್ಬರಾಗಿದ್ದ ಕೊಹ್ಲಿ, 2022ರಲ್ಲಿ ಅಚ್ಚರಿಯಂತೆ ರಾಜೀನಾಮೆ ಘೋಷಿಸಿದ್ದರು.

ಕೊಹ್ಲಿ ನಿರ್ಗಮನದ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಯ ಒತ್ತಾಯವೇ ಅದಕ್ಕೆ ಕಾರಣ ಎಂದು ಹೇಳಲಾಗಿತ್ತು. ಆದರೀಗ ಗಂಗೂಲಿ ಈ ನಿರ್ಧಾರಕ್ಕೂ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಕೊಹ್ಲಿಯ ರಾಜೀನಾಮೆಯ ಅಂದಾಜು ಇರಲಿಲ್ಲ. ಆ ಕ್ಷಣದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆಯಾಗಿದ್ದರಿಂದ ಅವರನ್ನು ಎಲ್ಲಾ ಸ್ವರೂಪದ ನಾಯಕನಾಗಿ ನೇಮಿಸಬೇಕಾಯಿತು ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ : MS Dhoni : ಐಪಿಎಸ್​ ಅಧಿಕಾರಿ ವಿರುದ್ಧದ ಕೋರ್ಟ್​ ಕೇಸಲ್ಲಿ ಧೋನಿಗೆ ಮೊದಲ ಜಯ

ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸುತ್ತಾರೆ ಎಂಬ ಕಲ್ಪನೆ ಬಿಸಿಸಿಐಗೆ ಇರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಇದು ನಮಗೂ ಅನಿರೀಕ್ಷಿತವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಅವರೇ ನಾಯಕತ್ವವನ್ನು ಏಕೆ ತೊರೆದರು ಎಂಬುದನ್ನು ಬಹಿರಂಗಪಡಿಸಬಲ್ಲರು. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತೊರೆದ ವರ್ಷಗಳಾಗಿರುವ ಕಾರಣ ಇದರ ಬಗ್ಗೆ ಈಗ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆಯ್ಕೆಗಾರರು ಭಾರತ ತಂಡಕ್ಕೆ ನಾಯಕನನ್ನು ನೇಮಿಸಬೇಕಾದ ಒತ್ತಡದಲ್ಲಿದ್ದ ಆ ಸಮಯದಲ್ಲಿ ರೋಹಿತ್ ಅತ್ಯುತ್ತಮ ಆಯ್ಕೆಯಾಗಿದ್ದರು,” ಎಂದು ಸೌರವ್ ಗಂಗೂಲಿ ಆಜ್​ತಕ್​ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಆಂತರಿಕ ಜಗಳವೇ ಕಾರಣ

2021ರ ಟಿ20 ವಿಶ್ವಕಪ್​​ಗೆ ಪೂರ್ವದಲ್ಲಿ ವಿರಾಟ್ ಕೊಹ್ಲಿ ಆ ಮಾದರಿಯ ನಾಯಕತ್ವ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಅವರ ನಿರ್ಧಾರದ ನಂತರ ಬ್ಯಾಟಿಂಗ್ ಮಾಂತ್ರಿಕನನ್ನು ಏಕದಿನ ನಾಯಕತ್ವದ ಕರ್ತವ್ಯಗಳಿಂದ ಮುಕ್ತಿಗೊಳಿಸಲಾಯಿತು. ಈ ವೇಳೆ ಬಿಸಿಸಿಐ ಮತ್ತು ಕೊಹ್ಲಿ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳಿದ್ದವು.

ಕೊಹ್ಲಿಯನ್ನು ಏಕದಿನ ತಂಡದಿಂದ ತೆಗೆದು ಹಾಕುವ ಬಗ್ಗೆ ಕೇವಲ ಫೋನ್ ಕರೆ ಮೂಲಕ ಮಾಹಿತಿ ನೀಡಲಾಯಿತು ಎಂಬ ಸುದ್ದಿ ಹೊರಬಂತು. ಇದು ದೆಹಲಿ ಮೂಲದ ಕ್ರಿಕೆಟಿಗನನ್ನು ಕೆರಳಿಸಿತು. ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಸರಣಿ ಸೋಲಿಗೆ ಒಳಗಾಯಿತು. ತಕ್ಷಣ ಅವರು ಟೆಸ್ಟ್​​ಗೂ ರಾಜೀನಾಮೆ ನೀಡಿದ್ದರು.

Exit mobile version