ಬೆಂಗಳೂರು: ಶನಿವಾರ ನಡೆಯುವ ಸೆಮಿಫೈನಲ್ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು(New Zealand vs Pakistan) ನ್ಯೂಜಿಲ್ಯಾಂಡ್ ಕಣಕ್ಕಿಳಿಯಲಿವೆ. ಇಲ್ಲಿ ಯಾರೇ ಸೋತರೂ ಸೆಮಿ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ರಸ್ನಲ್ಲಿ ಉಳಿಯಬೇಕೆಂದರೆ ಇತ್ತಂಡಗಳಿಗೂ ಗೆಲುವು ಅನಿವಾರ್ಯ. ಹೀಗಾಗಿ ಈ ಪಂದ್ಯವನ್ನು ಜಿದ್ದಾಜಿದ್ದಿನಿಂದ ನಿರೀಕ್ಷೆ ಮಾಡಟಬಹುದು.
ನ್ಯೂಜಿಲ್ಯಾಂಡ್ ತಂಡ ಆರಂಭಿಕ ಹಂತದಲ್ಲಿ ಆಡಿದ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಾಬಲ್ಯ ಮರೆದಿತ್ತು. ಈ ಪ್ರದರ್ಶನವನ್ನು ನೋಡುವಾಗ ಕಿವೀಸ್ ಈ ಬಾರಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಬಳಿಕ ಹ್ಯಾಟ್ರಿಕ್ ಸೋಲಿಗೆ ತುತ್ತಾಗಿ ಇದೀಗ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬೇಳುವ ಸ್ಥಿತಿಯಲ್ಲಿದೆ. ಅತ್ತ ಪಾಕಿಸ್ತಾನವೂ ಕೂಡ ಮೊದಲ ಎರಡು ಪಂದ್ಯ ಗೆದ್ದು ಆ ಬಳಿಕ ಸತತ ಸೋಲಿಗೆ ಸಿಲುಕಿ ಕಳೆದ ಪಂದ್ಯದಲ್ಲಿ ಮತ್ತೆ ಗೆಲುವು ಕಂಡು ಸೆಮಿ ಆಸೆಯನ್ನು ಜೀವಂತವಿರಿಸಿತ್ತು. ಒಂದೊಮ್ಮೆ ಕಿವೀಸ್ ವಿರುದ್ಧ ಸೋತರೆ ಸೆಮಿ ರೇಸ್ ಬಹುತೇಕ ಅಂತ್ಯ ಕಾಣಲಿದೆ.
ಇದನ್ನೂ ಓದಿ ಗಿಲ್ ಔಟಾಗುತ್ತಿದ್ದಂತೆ ಬೇಸರಗೊಂಡ ಸಾರಾ ತೆಂಡೂಲ್ಕರ್; ವಿಡಿಯೊ ವೈರಲ್
ವಿಶ್ವಕಪ್ ಮುಖಾಮುಖಿ
ಪಾಕಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ನಲ್ಲಿ ಗೆಲುವು ಸಾಧಿಸದೇ 22 ವರ್ಷಗಳು ಕಳೆದಿವೆ. ಉಭಯ ತಂಡಗಳು ವಿಶ್ವಕಪ್ನಲ್ಲಿ ಒಟ್ಟು 9 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಪಾಕಿಸ್ತಾನವೇ ಅತ್ಯಧಿಕ 7 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ. ಕಿವೀಸ್ ಗೆದ್ದಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ನ್ಯೂಜಿಲ್ಯಾಂಡ್ಗೆ ಈ ಗೆಲುವು ಸಿಕ್ಕಿದ್ದು 2011ರಲ್ಲಿ ಮತ್ತು 1983ರಲ್ಲಿ. ಇದೀಗ 22 ವರ್ಷಗಳ ಬಳಿಕ ಪಾಕ್ ವಿರುದ್ಧ ಅದೂ ಕೂಡ ಭಾರತದಲ್ಲಿಯೇ ಕಿವೀಸ್ ಗೆಲುವು ಕಂಡೀತೇ? ಎನ್ನುವುದು ಪಂದ್ಯದ ಕುತೂಹಲ.
ಪಿಚ್ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್ಗಳಿಗೆ ಸ್ವರ್ಗವಾಗಿದೆ. ಆಟವು ಮುಂದುವರಿದಂತೆ, ಹೊನಲು ಬೆಳಕಿನ ಸಂದರ್ಭದಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ. ಬೆಂಗಳೂರಿನಲ್ಲಿ ರನ್ ಚೇಸಿಂಗ್ ಸುಲಭವಾಗಿರುವ ಕಾರಣ ದೊಡ್ಡ ಮೊತ್ತದ ರನ್ ಗಳಿಕೆ ಆಗಲಿದೆ.
ಹವಾಮಾನ ವರದಿ
ಈ ಪಂದ್ಯಕ್ಕೆ ಮಳೆಯ ಭೀತಿ ಕಾಡಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೆಲ ಕಡೆ ಭಾರಿ ಮಳೆಯಾಗಿತ್ತು. ಪಂದ್ಯದ ಮುನ್ನ ದಿನವಾದ ಶುಕ್ರವಾರವೂ ನಗರದ ಕೆಲವೆಡೆ ಜೋರು ಮಳೆಯಾಗಿದೆ. ಶನಿವಾರವೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಭೀತಿ ಇದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ಸಿಗಲಿದೆ. ಸೆಮಿ ಲೆಕ್ಕಾಚಾರದಲ್ಲಿ ಇದು ಉಭಯ ತಂಡಗಳಿಗೂ ಹಿನ್ನಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ ಕೊನೆಯ ಸ್ಥಾನಿ ಇಂಗ್ಲೆಂಡ್ಗೂ ಇದೆ ಸೆಮಿಫೈನಲ್ ಅವಕಾಶ; ಹೇಗಿದೆ ಈ ಲೆಕ್ಕಾಚಾರ?
ಸಂಭಾವ್ಯ ತಂಡ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಕೈಲ್ ಜಾಮೀಸನ್, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಉಸಾಮಾ ಮಿರ್, ಹ್ಯಾರಿಸ್ ರವೂಫ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಮೊಹಮ್ಮದ್ ನವಾಜ್.
ನೇರ ಪ್ರಸಾರದ ವಿವರ
- ಸಮಯ: ಮಧ್ಯಾಹ್ನ 2:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
- ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್