Site icon Vistara News

ಭಾರತದಲ್ಲೇ ಪಾಕ್​ ಆಟಗಾರರು ಸುರಕ್ಷಿತ; ಪಾಕ್​ ಮಾಧ್ಯಮಗಳಿಗೆ ಕೇಂದ್ರ ಸಚಿವ ಖಡಕ್​ ತಿರುಗೇಟು

Mudpipe cafe

ಬೆಂಗಳೂರು: ಬುಧವಾರ ಕೋರಮಂಗಲದಲ್ಲಿ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ(koramangala fire accident) ಮಡ್‌ಪೈಪ್‌ ಕಫೆ(Mudpipe cafe) ಸಂಪೂರ್ಣವಾಗಿ ಸುಟ್ಟಿಹೋದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಕಳ್ಳನಿಗೊಂದು ಕುಳ್ಳ ನೆವ ಎನ್ನುವ ಗಾದೆ ಮಾತಿನಿಂತೆ ಇದೇ ಘಟನೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಪತ್ರಕರ್ತರು(pakistani journalist) ಭಾರತದಲ್ಲಿ ಪಾಕಿಸ್ತಾನಕ್ಕೆ ಭದ್ರತಾ ಆತಂಕ ಮೂಡಿದೆ ಎಂದು ಸುಳ್ಳು ಸಿದ್ದಿ ಹಬ್ಬಿಸಿದ್ದರು. ಇದಕ್ಕೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌(rajeev chandrasekhar) ಅವರು ಖಡಕ್​ ಉತ್ತರ ನೀಡಿ ಪಾಕಿಗಳ ಬಾಯಿ ಮುಚ್ಚಿಸಿದ್ದಾರೆ.

ಕೋರಮಂಗಲದ ನೆಕ್ಸಾ ಶೋ ರೂಂ ಕಟ್ಟಡದ ಮೇಲಿರುವ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡಿತ್ತು. ಸಿಬ್ಬಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಅಡುಗೆ ಕೋಣೆಯಲ್ಲಿ ಸಿಲಿಂಡ್‌ ಸ್ಫೋಟವಾಗಿ ಬಳಿಕ ಕೆಫೆಯಲ್ಲಿದ್ದ ಕುಷನ್ ಫರ್ನಿಚರ್‌ಗೂ ಬೆಂಕಿ ಆವರಿಸಿತ್ತು. ಪರಿಣಾಮ ಬೆಂಕಿಯ ಕೆನ್ನಾಲಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಮಹಡಿ ಮೇಲಿಂದ ಜಿಗಿದಿದ್ದ ಈ ವಿಡಿಯೊವನ್ನು ಪಾಕಿಸ್ತಾನದ ಪತ್ರಕರ್ತರು ಇದನ್ನು ಬಾಂಬ್‌ ಬ್ಲಾಸ್ಟ್‌ ಎನ್ನುವ ರೀತಿಯಲ್ಲಿ ಬಿಂಬಿಸಿದ್ದರು.

ಪಾಕಿಸ್ತಾನದ ಡಾನ್‌ ಪತ್ರಿಕೆ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿ, ಪಾಕ್‌ ತಂಡ ಕ್ರಿಕೆಟ್ ಆಡುವ ಚಿನ್ನಸ್ವಾಮಿ ಸ್ಟೇಡಿಯಂನಿಂದ 1.15 ಗಂಟೆ ಪ್ರಯಾಣದ ದೂರದಲ್ಲಿರುವ ಕೋರಮಂಗಲದಲ್ಲಿ ಈ ಘಟನೆ ನಡೆದಿದಿದ್ದು ನಮ್ಮ ತಂಡದ ಆಟಗಾರರಿಗೆ ಭಾರತದಲ್ಲಿ ಭದ್ರತೆ ಇಲ್ಲ ಎಂದು ವರದಿ ಮಾಡಿತ್ತು. ಈ ಪತ್ರಿಕೆ ಕ್ರೀಡಾ ವರದಿಗಾರನಾಗಿರುವ ಇಮ್ರಾನ್‌ ಸಿದ್ಧಿಕಿ ಮಡ್‌ಪೈಪ್‌ ಕಫೆಯ ಬ್ಲಾಸ್ಟ್‌ನ ವಿಡಿಯೋವನ್ನು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು, ‘ಬೆಂಗಳೂರಿನಲ್ಲಿ ನಡೆದ ಸ್ಫೋಟವು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಇತರ ತಂಡಗಳಿಗೆ ಭದ್ರತಾ ಆತಂಕ ಮೂಡಿಸಿದೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ IND vs PAK: ಭಾರತ ವಿರುದ್ಧ ಪಿತೂರಿ ನಡೆಸಿದ್ದ ಪಾಕ್​ ಕ್ರಿಕೆಟ್​ ಮಂಡಳಿಗೆ ಭಾರಿ ಮುಖಭಂಗ

ಭಾರತದಲ್ಲೇ ಪಾಕ್​ ಆಟಗಾರರು ಸುರಕ್ಷಿತ

ಪಾಕಿಸ್ತಾನ ಮಾಧ್ಯಮಗಳ ಈ ಸುಳ್ಳು ಆರೋಪಕ್ಕೆ ಖಡಕ್​ ಆಗಿಯೇ ಉತ್ತರ ನೀಡಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, “ಕೆಲವು ಪಾಕಿಸ್ತಾನಿಗಳು ವಿಶ್ವ ದರ್ಜೆಯ ಕೋಡಂಗಿಗಳಾಗಿ ಹೇಗೆ ಮುಜುಗರಕ್ಕೆ ಒಳಗಾಗುತ್ತಾರೆ ಎನ್ನುವುದಕ್ಕೆ ಇದೇ ಉತ್ತಮ ನಿದರ್ಶನ. ಕೆಲವರನ್ನು ನೋಡುವಾಗ ಬಹಳ ಹತಾಶರಾದಂತೆ ಕಾಣುತ್ತಿದೆ. ಭಾರತದಿಂದ ಯಾವುದಾದರೂ ಕೆಟ್ಟ ಸುದ್ದಿ ಬರಲಿ ಎಂದೇ ಅವರು ಕಾಯುತ್ತಾ ಇರುತ್ತಾರೆ. ಅವರಿಗೆ ರೆಸ್ಟೋರೆಂಟ್‌ನಲ್ಲಿ ಆಗಿರುವ ಒಂದು ಸಿಲಿಂಡರ್‌ ಸ್ಫೋಟವೂ ಕೂಡ ಸಂಭ್ರಮವಾಗಿದೆ. ಇದರಲ್ಲಿಯೇ ಅವರ ಕೆಟ್ಟ ಮನಸ್ಥಿತಿ ತಿಳಿಯುತ್ತದೆ. ಸತ್ಯ ಹೇಳಬೇಕೆಂದರೆ ಪಾಕಿಸ್ತಾನ ತಂಡದ ಆಟಗಾರರು ಪಾಕ್​ಗಿಂತ ಭಾರತದಲ್ಲೇ ಹೆಚ್ಚು ಸುರಕ್ಷಿತವಾಗಿದ್ದಾರೆ” ಎಂದು ಹೇಳಿದ್ದಾರೆ.

Exit mobile version