Site icon Vistara News

PAK vs AUS: ಬೆಂಗಳೂರಿನ ವಿಶ್ವಕಪ್​ ಪಂದ್ಯಗಳಿಗೆ ಭಾರಿ ಬಿಗಿ ಬಂದೋಬಸ್ತ್

m.chinnaswamy stadium bengaluru security

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M.Chinnaswamy Stadium) ಆರಂಭಗೊಳ್ಳಲಿರುವ ವಿಶ್ವಕಪ್​ ಚರಣದ ಪಂದ್ಯಗಳಿಗೆ ಭಾರಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಶುಕ್ರವಾರ ನಡೆಯುವ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ(PAK vs AUS) ವಿರುದ್ಧದ ಪಂದ್ಯ ಇಲ್ಲಿ ನಡೆಯುವ ಮೊದಲ ಪಂದ್ಯವಾಗಲಿದೆ. ಆದರೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ(israel vs palestine) ನಡುವೆ ನಡೆಯುತ್ತಿರುವ ಭಾರಿ ಘರ್ಷಣೆಗೆ ಬೆಂಬಲ ಸೂಚಿಸಿ ನಗರದ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ ಘೋಷಿಸಿದ್ದಾರೆ.

ಮೂಲಗಳ ಪ್ರಕಾರ ಪಂದ್ಯ ನಡೆಯುವ ವೇಳೆ ಕೆಲ ಸಂಘಟನೆಯ ವ್ಯಕ್ತಿಗಳು ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯಕ್ಕೆ ಬೆಂಬಲ ಸೂಚಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಗುವಂತೆ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಸುಳಿವು ಸಿಕ್ಕಿದೆ. ಇದೇ ಕಾರಣ ಸ್ಟೇಡಿಯಂಗೆ ಪ್ರವೇಶ ಪಡೆಯುವ ವ್ಯಕ್ತಿಗಳಿಗೆ ಯಾವುದೇ ಬಿತ್ತಿ ಪತ್ರಗಳನ್ನು ತೆಗೆದುಕೊಂಡು ಬರದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಮ್ಯಾಚ್ ವಿಕ್ಷಣೆಗೆ ಬರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲು ನಿರ್ಧರಿಸಿದ್ದಾರೆ.

ಪಾಕ್​ ಆಟಗಾರ ರಿಜ್ವಾನ್​ ಕೂಡ ಕೆಲ ದಿನಗಳ ಹಿಂದೆ ನಡೆದ ಲಂಕಾ ವಿರುದ್ಧದ ಪಂದ್ಯದ ಬಳಿಕ ತಮ್ಮ ಶತಕವನ್ನು ಗಾಜಾದ ಜನತೆಗೆ ಅರ್ಪಿಸಿದ್ದರು. ಹೀಗಾಗಿ ಈ ಪಂದದ ವೇಳೆ ಕೆಲ ಮುಸ್ಲಿಂ ಸಂಘಟನೆಗಳು ಗಾಜಾಕ್ಕೆ ಬೆಂಬಲ ಸೂಚಿಸಿ ಪೋಸ್ಟರ್​ ಹಿಡಿಯುವ ಸಾಧ್ಯತೆ ಇದೆ ಎಂದು ಮಾಹಿತಿ ಸಿಕ್ಕ ಕಾರಣ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಅಲ್ಲದೆ ಅಕ್ಟೋಬರ್​ 16ರ ಸಂಜೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ನೂರಾರು ಜನರು ಜಮಾಯಿಸಿ ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಜಾಥ ಮಾಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಪಂದ್ಯದ ನಡುವೆಯೂ ಈ ರೀತಿಯ ಘಟನೆ ನಡೆಯುವ ಸಾಧ್ಯತೆಯನ್ನು ಅರಿತ ನಗರದ ಪೊಲೀಸರು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಇದನ್ನೂ ಓದಿ ICC World Cup 2023 : ದ. ಆಫ್ರಿಕಾ ತಂಡವನ್ನು ಬಗ್ಗು ಬಡಿದು ಹೊಸ ದಾಖಲೆ ಬರೆದ ನೆದರ್ಲ್ಯಾಂಡ್ಸ್​​

ಪಾಕ್​ ಆಟಗಾರರಿಗೆ ವೈರಲ್​ ಜ್ವರ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ 4 ಮಂದಿ ಸ್ಟಾರ್​ ಆಟಗಾರರು ವೈರಲ್​ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೆ ಈ ಆಟಗಾರರನ್ನು ಮುನ್ನೆಚರಿಕಾ ಕ್ರಮವಾಗಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ಪಾಕಿಸ್ತಾನ ಆಟಗಾರರು ಸದ್ಯ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದರು ಆದರೆ ಆಟಗಾರರಿಗೆ ವೈರಲ್​ ಜ್ವರದ ಸಮಸ್ಯೆ ಕಂಡು ಬಂದ ಕಾರಣ ತಂಡಕ್ಕೆ ಚಿಂತೆಯೊಂದು ಕಾಡಿದೆ. ಶಾಹೀನ್‌ ಶಾ ಅಫ್ರಿದಿ, ಶಫೀಕ್‌ ಅಬ್ದುಲ್ಲ, ಜಮಾನ್‌ ಖಾನ್‌ ಮತ್ತು ಉಸಾಮ ಮಿರ್‌ ಜ್ವರದಿಂದ ಬಳಲುತ್ತಿರುವ ಆಟಗಾರರು ಎಂದು ತಿಳಿದುಬಂದಿದೆ.

ಸದ್ಯ ಯಾವುದೇ ಆಟಗಾರರಿಗೂ ಡೆಂಗ್ಯೂ ಲಕ್ಷಣ ಕಂಡುಬಂದಿಲ್ಲ ಎಂಬುದು ಸಾಬೀತಾಗಿದೆ. ಎಲ್ಲರ ವೈದ್ಯಕೀಯ ಪರೀಕ್ಷೆಯ ವರದಿಯಲ್ಲೂ ನೆಗೆಟಿವ್‌ ಫ‌ಲಿತಾಂಶ ಬಂದಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು ಆಸೀಸ್​ ವಿರುದ್ಧ ಆಡುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ತಂಡದ ಮಾಧ್ಯಮ ವ್ಯವಸ್ಥಾಪಕರು ತಿಳಿಸಿದ್ದಾರೆ.

Exit mobile version