Site icon Vistara News

PAK VS ENG | ಪಾಕಿಸ್ತಾನಕ್ಕೆ ತವರಿನಲ್ಲೇ ಕ್ಲೀನ್​ ಸ್ವೀಪ್​ ಮುಖಭಂಗ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​ಗೆ 8 ವಿಕೆಟ್​ ಗೆಲುವು

England won by 8 wkts

ಕರಾಚಿ: ಪಾಕಿಸ್ತಾನ ವಿರುದ್ಧ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲೂ ಇಂಗ್ಲೆಂಡ್(PAK VS ENG)​ ತಂಡ ಮೇಲುಗೈ ಸಾಧಿಸಿದೆ. ಪಾಕಿಸ್ತಾನ ಈ ಸೋಲಿನೊಂದಿಗೆ ತವರಿನಲ್ಲಿ ಕ್ಲೀನ್‌ ಸ್ವೀಪ್‌ ಮುಖಭಂಗಕ್ಕೆ ಒಳಗಾಗಿದೆ.

ಕರಾಚಿ ನ್ಯಾಷನಲ್‌ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 17) ಆರಂಭವಾದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬಾಟಿಂಗ್​ ಮಾಡಿದ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 304 ರನ್ ಗಳಿಸಿ ಆಲೌಟ್‌ ಆಗಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ 354 ರನ್‌ ಗಳಿಸಿ 50 ರನ್‌ ಅಂತರದ ಮುನ್ನಡೆ ಸಾಧಿಸಿತ್ತು.

ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಬಾಬರ್‌ ಪಡೆ 216 ರನ್‌ ಗಳಿಗೆ ಸರ್ವಪತನ ಕಂಡಿತು.166 ರನ್‌ಗಳ ಗೆಲುವಿನ ಗುರಿ ಪಡೆದ ಬೆನ್​ ಸ್ಟೋಕ್ಸ್​ ಬಳಗ ಕೇವಲ 2 ವಿಕೆಟ್‌ ಕಳೆದುಕೊಂಡು 170 ರನ್‌ ಗಳಿಸಿ 8 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿದೆ. ಸೋಲಿನೊಂದಿಗೆ ಪಾಕ್‌ ತವರಿನಲ್ಲೇ ಮುಖಭಂಗ ಅನುಭವಿಸಿತು. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಪಂದ್ಯವನ್ನು 74 ರನ್‌ಗಳಿಂದ ಗೆದ್ದಿದ್ದ ಆಂಗ್ಲರು, ಮುಲ್ತಾನ್‌ನಲ್ಲಿ ಆಡಿದ ಎರಡನೇ ಪಂದ್ಯವನ್ನು 26 ರನ್‌ ಅಂತರದಿಂದ ಜಯಿಸಿತ್ತು. ಇದೀಗ ಸರಣಿಯ ಅಂತಿಮ ಪಂದ್ಯದಲ್ಲಿಯೂ ಗೆಲುವು ದಾಖಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್​ ಮಾಡಿತು.

ಇದನ್ನೂ ಓದಿ | Pakistan Cricket Board | ಭಾರತ ತಂಡವನ್ನು ಟೀಕಿಸುತ್ತಿದ್ದ ಪಿಸಿಬಿ ಅಧ್ಯಕ್ಷ ರಮೀಜ್​ ಸ್ಥಾನಕ್ಕೇ ಕುತ್ತು!

Exit mobile version