Site icon Vistara News

PAK VS ENG | ಬಾಣಸಿಗರನ್ನು ಕರೆತಂದರೂ ಇಂಗ್ಲೆಂಡ್ ತಂಡದ 14 ಆಟಗಾರರ ಆರೋಗ್ಯದಲ್ಲಿ ಏರುಪೇರು!

eng vs pak

ಕರಾಚಿ: ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ(PAK VS ENG) ಪ್ರವಾಸದಲ್ಲಿರುವ ಇಂಗ್ಲೆಂಡ್​ ತಂಡದ 14 ಆಟಗಾರರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಇದರಿಂದ ಗುರುವಾರ ನಡೆಯುವ ಮೊದಲ ಟೆಸ್ಟ್​ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

17 ವರ್ಷಗಳ ಬಳಿಕ ಟೆಸ್ಟ್ ಸರಣಿ ಆಡುವ ಸಲುವಾಗಿ ಪಾಕ್ ನೆಲಕ್ಕೆ ಕಾಲಿಟ್ಟ ಇಂಗ್ಲೆಂಡ್ ತಂಡ ಇದೀಗ ಆರೋಗ್ಯ ಸಮಸ್ಯೆಗೆ ಸಿಲುಕಿದೆ. ವರದಿಗಳ ಪ್ರಕಾರ ನಾಯಕ ಬೆನ್ ಸ್ಟೋಕ್ಸ್, ಮೊಯಿನ್ ಅಲಿ ಸೇರಿ ಒಟ್ಟು 14 ಆಟಗಾರರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಈ ಆಟಗಾರರು ಆಡುವ ಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ. ಉಳಿದಂತೆ ಕೇವಲ 5 ಆಟಗಾರರು ಮಾತ್ರ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಟೆಸ್ಟ್​ಗಾಗಿ ಇಂಗ್ಲೆಂಡ್ ಕ್ರಿಕೆಟ್​ ಮಂಡಳಿ ಮಂಗಳವಾರ ಆಡುವ ತಂಡವನ್ನು ಪ್ರಕಟಿಸಿತ್ತು. ಆದರೆ ಪ್ರಕಟಿಸಿದ 11 ಆಟಗಾರರ ತಂಡದಲ್ಲಿ ಬರೋಬ್ಬರಿ 7 ಆಟಗಾರರು ಈಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಬೆನ್ ಡಕೆಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಫಾಕ್ಸ್, ರಾಬಿನ್ಸನ್, ಜ್ಯಾಕ್ ಲೀಚ್ ಮತ್ತು ಜೇಮ್ಸ್ ಆಂಡರ್ಸನ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದುಬಂದಿದೆ.

ಕಳೆದ ಟಿ20 ಸರಣಿಯ ವೇಳೆ ಇಂಗ್ಲೆಂಡ್​ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಉತ್ತಮ ಆಹಾರ ನೀಡಿಲ್ಲ ಎಂಬ ಕಾರಣಕ್ಕೆ ಈ ಬಾರಿ ಟೆಸ್ಟ್ ಸರಣಿಗಾಗಿ ಪಾಕ್ ಪ್ರವಾಸ ಮಾಡಿರುವ ಇಂಗ್ಲೆಂಡ್‌ ತಂಡ ತಮ್ಮ ತಂಡದೊಂದಿಗೆ ಬಾಣಸಿಗರನ್ನು ಕರೆತಂದಿತ್ತು. ಆದರೆ ಇದರ ಹೊರತಾಗಿಯೂ ತಂಡದ ಆಟಗಾರರ ಆರೋಗ್ಯವು ಹದಗೆಟ್ಟಿರವುದು ಮಂಡಳಿಯನ್ನು ಚಿಂತೆಗೀಡುಮಾಡಿದೆ.

ಇದನ್ನೂ ಓದಿ | IND VS NZ | ಮಳೆಯಿಂದ ಅಂತಿಮ ಪಂದ್ಯ ರದ್ದು; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್​

Exit mobile version