ಮೆಲ್ಬೋರ್ನ್: ಟಿ20 ವಿಶ್ವ ಕಪ್ನ ನೂತನ ಸಾಮ್ರಾಟ ಯಾರು ಎಂಬ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್(PAK VS ENG) ತಂಡಗಳು ಈ ವಿಶ್ವ ಸಮರದಲ್ಲಿ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
ಇಂಗ್ಲೆಂಡ್ ಮತ್ತು ಪಾಕ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಕಾಡಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದು ಕೇವಲ ಭಾನುವಾರ ಮಾತ್ರವಲ್ಲದೆ. ಮೀಸಲು ದಿನವಾದ ಸೋಮವಾರವೂ ಮೆಲ್ಬೋರ್ನ್ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಂದೊಮ್ಮೆ ಮಳೆಯಿಂದ ಎರಡೂ ದಿನವೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಆಗ ಐಸಿಸಿ ನಿಯಮದ ಪ್ರಕಾರ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ಜಂಟಿಯಾಗಿ ಐಸಿಸಿ ಕೂಟದಲ್ಲಿ ಪ್ರಶಸ್ತಿ ಈ ಮೊದಲು ನೀಡಲಾಗಿತ್ತು. ಅವುಗಳ ಮಾಹಿತಿ ಇಂತಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನಡೆದಿತ್ತು
ಶ್ರೀಲಂಕಾದಲ್ಲಿ ನಡೆದ 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಆತಿಥೇಯ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯ ಮಳೆಯಿಂದಾಗಿ ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಆದರೆ ಮೀಸಲು ದಿನದಲ್ಲಿ ಹೊಸದಾಗಿ ಪಂದ್ಯ ಆರಂಭಗೊಂಡರೂ ಅದು ಕೂಡ ಪೂರ್ಣಗೊಳ್ಳಲಿಲ್ಲ. ಇದರಿಂದ ಕೊನೆಗೆ ಇತ್ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ | T20 World Cup | ಟೂರ್ನಿಯ ಶ್ರೇಷ್ಠ ಆಟಗಾರರ ಆಯ್ಕೆಗೆ ವೋಟ್ ಮಾಡಲು ಅಭಿಮಾನಿಗಳಿಗೂ ಅವಕಾಶ