ಮುಲ್ತಾನ್: 16ನೇ ಆವೃತ್ತಿಯ ಏಷ್ಯಾಕಪ್(Asia Cup 2023) ಆತಿಥ್ಯವಹಿಸಿಕೊಂಡಿರುವ ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ನೇಪಾಳ(PAK vs NEP) ವಿರುದ್ಧ ತವರಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ(Multan Cricket Stadium) ಆಡುತ್ತಿದೆ. ವಿಪರಾಸ್ಯವೆಂದರೆ ಪಾಕಿಸ್ತಾನ ತಂಡಕ್ಕೆ ತವರಿನಲ್ಲಿಯೇ ಸರಿಯಾದ ಬೆಂಬಲ ಸಿಗದಿರುವುದು. ಈ ಪಂದ್ಯವನ್ನು ನೋಡಲು ಸ್ಟೇಡಿಯಂನಲ್ಲಿ ಬೆರಳೆಣಿಕೆಷ್ಟು ಮಂದಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿಯೂ ನೇಪಾಳ ತಂಡಕ್ಕೆ ಬೆಂಬಲ ಸೂಚಿಸುವ ಅಭಿಮಾನಿಗಳೇ ಹೆಚ್ಚಾಗಿದ್ದಾರೆ. ಪಾಕ್ನ ಈ ಸ್ಥಿತಿಯನ್ನು ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ನೀರಸ ಪ್ರತಿಕ್ರಿಯೆ
ಉದ್ಘಾಟನ ಪಂದ್ಯ ಇದಾಗಿದ್ದರೂ ಇಲ್ಲಿ ಪಾಕಿಸ್ತಾನ ತಂಡವನ್ನು ಬೆಂಬಲಿಸಲು ಕೆಲವೇ ಅಭಿಮಾನಿಗಳು ಮಾತ್ರ ಹಾಜರಾಗಿದ್ದಾರೆ. ಆದರೆ ನೇಪಾಳ ತಂಡದಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಖಾಲಿ ಖಾಲಿ ಸ್ಟೇಡಿಯಂನ ಫೋಟೊಗಳು ವೈರಲ್ ಆಗಿದ್ದು ಮೊದಲ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಾಸ್ಗೂ ಮುನ್ನ ನಡೆದ ಉದ್ಘಾಟನ ಸಮಾರಂಭದಲ್ಲಿ ಗಾಯಕರಾದ ಐಮಾ ಬೇಗ್ ಮತ್ತು ತ್ರಿಶಾಲಾ ಗುರುಂಗ್ ಖಾಲಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಬೇಕಾಯಿತು. 15 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಯಾದ ಕಾರಣ ಬಹು ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಆದರೆ ಬೆರಳಿಕೆಯಷ್ಟು ಪ್ರೇಕ್ಷಕರು ಕಾಣಿಸಿಕೊಂಡಿದ್ದು ಪಾಕ್ ಕ್ರಿಕೆಟ್ ಮಂಡಳಿಗೆ ಮುಜುಗರ ತಂದಿದೆ.
ಪಾಕಿಸ್ತಾನ ಈ ಸ್ಥಿತಿ ಕಂಡ ಅನೇಕ ನೆಟ್ಟಿಗರು ಕ್ರಿಕೆಟ್ನಲ್ಲಿ ಹೆಚ್ಚಾಗಿ ಖ್ಯಾತಿ ಪಡೆಯಲಿದ್ದರೂ ನೇಪಾಳ ಪಂದ್ಯವನ್ನು ನೋಡಲು ಅಲ್ಲಿನ ದೇಶದ ಜನ ಮುಗಿ ಬೀಳುತ್ತಾರೆ. ಆದರೆ ವಿಶ್ವದ ನಂ.1 ಮತ್ತು ತವರಿನ ತಂಡವಾದರೂ ಇಲ್ಲಿ ಪ್ರೇಕ್ಷಕರು ಕಾಣೆಯಾಗಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ Asia Cup 2023: ಲಂಕಾ ತಲುಪಿದ ಟೀಮ್ ಇಂಡಿಯಾ; ಪಾಕ್ ಪಂದ್ಯಕ್ಕೆ ರಣತಂತ್ರ
ಉಭಯ ತಂಡಗಳ ಆಡುವ ಬಳಗ
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ.
ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಇದು ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.