Site icon Vistara News

PAK VS NZ | ನ್ಯೂಜಿಲೆಂಡ್ vs ಪಾಕಿಸ್ತಾನ ಸೆಮಿ ಫೈನಲ್‌ ಪಂದ್ಯದ ಹವಾಮಾನ ವರದಿ, ಪಿಚ್ ರಿಪೋರ್ಟ್

aus vs eng

ಸಿಡ್ನಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ೨೦ ವಿಶ್ವ ಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಅದರಂತೆ ಬುಧವಾರ(ನವೆಂಬರ್‌ ೯) ಈ ವಿಶ್ವ ಸಮರದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಈ ಪಂದ್ಯದ ಪಿಚ್‌ ರಿಪೋರ್ಟ್‌ ಮತ್ತು ಹವಾಮಾನ ವರದಿ ಹೇಗಿರಲಿದೆ ಎಂದು ಈ ಕೆಳಗೆ ತಿಳಿಸಲಾಗಿದೆ.

ಪಿಚ್​ ರಿಪೋರ್ಟ್​: ಈ ಪಿಚ್​ ಬ್ಯಾಟಿಂಗ್‌ಗೆ ಹೆಚ್ಚಾಗಿ​ ನೆರವಾಗಲಿದೆ. ಟಿ20 ವಿಶ್ವ ಕಪ್​ನ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ ತಂಡ ಬೃಹತ್‌ ಮೊತ್ತ ಪೇರಿಸಿ ಮೇಲುಗೈ ಸಾಧಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ಈ ಪಂದ್ಯವೂ ದೊಡ್ಡ ಮೊತ್ತದ ಮೇಲಾಟವಾಗುವಲ್ಲಿ ಅನುಮಾನವಿಲ್ಲ. ಆದರೆ ಇಬ್ಬನಿ ಸಮಸ್ಯೆ ಕಾಡಿದರೆ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಆಗ ಹೆಚ್ಚಾಗಿ ಬೌನ್ಸಿ ಬೌಲರ್‌ಗಳು ಈ ಲಾಭ ಪಡೆಯಬಹುದು. ಮೊದಲು ಬ್ಯಾಟಿಂಗ್‌ ನಡೆಸಿದ ತಂಡಕ್ಕೆ ಈ ಪಿಚ್‌ನಲ್ಲಿ ಗೆಲುವಿಗೆ ಹೆಚ್ಚು ಅವಕಾಶ ಇರುವುದರಿಂದ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಡ್ಡಿಯಿಲ್ಲ.

ಮಳೆ ಭೀತಿ ಇಲ್ಲ

ಈ ಬಾರಿಯ ವಿಶ್ವ ಕಪ್‌ನ ಹೆಚ್ಚಿನ ಪಂದ್ಯಗಳು ಮಳೆಗೆ ಕೊಚ್ಚಿ ಹೋದದ್ದು ಸಿಡ್ನಿ ಅಂಗಳದಲ್ಲಿ ಆಯೋಜನೆಗೊಂಡ ಪಂದ್ಯಗಳು. ಆದರೆ ಈ ಸೆಮಿಫೈನಲ್‌ ಕದನಕ್ಕೆ ಮಳೆ ಸಾಧ್ಯತೆ ತೀರ ಕಡಿಮೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ ಪಂದ್ಯದ ವೇಳೆ ಮೋಡ ಕವಿದ ವಾತಾವರಣ ಮತ್ತು ಇಬ್ಬನಿಯ ಸಮಸ್ಯೆ ದ್ವಿತೀಯ ಇನಿಂಗ್ಸ್‌ ವೇಳೆ ಕೊಂಚ ಮಟ್ಟಿನಲ್ಲಿ ಕಾಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ | T20 World Cup | ಈ ತಂಡ ವಿಶ್ವ ಕಪ್‌ ಗೆಲ್ಲುವುದು ಖಚಿತ; ಎಬಿಡಿ ಆಯ್ಕೆಯ ತಂಡ ಯಾವುದು?

Exit mobile version