ಕರಾಚಿ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್(PAK VS NZ) ಆತಿಥೇಯ ಪಾಕಿಸ್ತಾನ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 2 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಪಾಕಿಸ್ತಾನ ಈ ಸೋಲಿನೊಂದಿಗೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಯಿತು.
ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 280 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 48.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ಕಿವೀಸ್ ತಂಡದ ಪರ ನಾಯಕ ಕೇನ್ ವಿಲಿಯಮ್ಸನ್(53), ಡೆವೋನ್ ಕಾನ್ವೆ(52) ಗ್ಲೇನ್ ಫಿಲಿಪ್ಸ್ ಅಜೇಯ 63 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಾಕ್ ಪರ ಫಖಾರ್ ಜಮಾನ್ 122 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಶತಕ ದಾಖಲಿಸಿದರೆ, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 6 ಬೌಂಡರಿ ನೆರವಿನಿಂದ 77 ರನ್ ಸಿಡಿಸಿದರು. ಆದರೆ ಪಂದ್ಯದಲ್ಲಿ ಹಿಡಿತ ಸಾಧಿಸಿಸಲು ಸಾಧ್ಯವಾಗದ ಕಾರಣ ಉಭಯ ಆಟಗಾರರ ಈ ಹೋರಾಟ ವ್ಯರ್ಥವಾಯಿತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 280( ಫಕಾರ್ ಜಮಾನ್ 101, ಮೊಹಮ್ಮದ್ ರಿಜ್ವಾನ್ 77, ಟಿಮ್ ಸೌಥಿ 56ಕ್ಕೆ 3)
ನ್ಯೂಜಿಲ್ಯಾಂಡ್: 48.1 ಓವರ್‌ಗಳಲ್ಲಿ 8 ವಿಕೆಟ್ನಷ್ಟಕ್ಕೆ 281 (ಡೇವೊನ್ ಕಾನ್ವೆ 52, ಕೇನ್ ವಿಲಿಯಮ್ಸನ್ 53, ಗ್ಲೆನ್ ಫಿಲಿಪ್ಸ್ ಅಜೇಯ 63, ಮೊಹಮ್ಮದ್ ವಾಸಿಂ ಜೂನಿಯರ್ 35ಕ್ಕೆ2). ಪಂದ್ಯಶ್ರೇಷ್ಠ: ಗ್ಲೆನ್ ಫಿಲಿಪ್ಸ್. ಸರಣಿ ಶ್ರೇಷ್ಠ: ಡೆವೋನ್ ಕಾನ್ವೆ
ಇದನ್ನೂ ಓದಿ | PAK VS NZ | ಮೈದಾನದಲ್ಲೇ ಪಾಕ್ ವೇಗಿ ಹ್ಯಾರಿಸ್ ರವೂಫ್ ಜೆರ್ಸಿಯನ್ನು ಬಿಸಾಡಿದ ಅಂಪೈರ್; ಕಾರಣ ಏನು?