Site icon Vistara News

PAK VS NZ | ಮೈದಾನದಲ್ಲೇ ಪಾಕ್​ ವೇಗಿ ಹ್ಯಾರಿಸ್ ರವೂಫ್​ ಜೆರ್ಸಿಯನ್ನು ಬಿಸಾಡಿದ ಅಂಪೈರ್​; ಕಾರಣ ಏನು?

Aleem Dar

ಕರಾಚಿ: ನ್ಯೂಜಿಲ್ಯಾಂಡ್​(PAK VS NZ) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್​ ಅಲೀಂ ದಾರ್ ಕೋಪಗೊಂಡು ಪಾಕಿಸ್ತಾನ ಆಟಗಾರನ ಜೆರ್ಸಿಯನ್ನು ಬಿಸಾಡಿದ್ದಾರೆ. ಇದಕ್ಕೆ ಕಾರಣ ಅವರ ಕಾಲಿಗೆ ಚೆಂಡು ಬಡಿದದ್ದು. ಮೊಹಮ್ಮದ್ ವಾಸಿಂ ಎಸೆದ ಎಸೆತವೊಂದು ಅಲೀಂ ದಾರ್ ಕಾಲಿಗೆ ಬಡಿದಿದೆ. ನೋವು ತಾಳಲಾರದೆ ಅಲೀಂ ದಾರ್ ಕೋಪಗೊಂಡು ಜೆರ್ಸಿಯನ್ನು ಬಿಸಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಜಿಲ್ಯಾಂಡ್​ ಇನಿಂಗ್ಸ್​ನ 36ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪಾಕ್ ಬೌಲರ್​ ಹ್ಯಾರಿಸ್ ರವೂಫ್ ಬೌಲಿಂಗ್ ನಡೆಸುತ್ತಿದ್ದರು. ಅವರ ನಾಲ್ಕನೇ ಎಸೆತವನ್ನು ಗ್ಲೆನ್ ಫಿಲಿಪ್ಸ್ ಮಿಡ್ ವಿಕೆಟ್‌ ಕಡೆ ಬಾರಿಸಿ 2 ರನ್​ ಗಳಿಸಲು ಯತ್ನಿಸಿದರು. ಇದೇ ವೇಳೆ ಮೊಹಮ್ಮದ್ ವಾಸಿಂ ಚುರುಕಿನ ವೇಗದಲ್ಲಿ ಫೀಲ್ಡಿಂಗ್​ ನಡೆಸಿ ಚೆಂಡನ್ನು ನಾನ್ ಸ್ಟ್ರೈಕ್​ಗೆ ಎಸೆದರು. ಈ ವೇಳೆ ಚೆಂಡು ಅಂಪೈರ್ ಅಲೀಂ ದಾರ್ ಕಾಲಿಗೆ ನೇರವಾಗಿ ಬಡಿದಿದೆ.

ಚೆಂಡು ಬಡಿದ ತಕ್ಷಣ ಅಲೀಂ ದಾರ್ ನೋವಿನಿಂದ ನರಳುತ್ತಾ ತನ್ನ ಕೈಯಲ್ಲಿದ್ದ ಹಾರಿಸ್ ರವೂಫ್​ ಅವರ ಜೆರ್ಸಿಯನ್ನು ನೆಲದ ಮೇಲೆ ಬಿಸಾಡಿದ್ದಾರೆ. ಬಳಿಕ ಅಲೀಂ ದಾರ್ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ನಸೀಮ್ ಶಾ ಅವರು ಅಲೀಂ ಕಾಲನ್ನು ಉಜ್ಜಿದ್ದಾರೆ. ಇದೇ ವೇಳೆ ಅಲೀಂ ದಾರ್ ಪಾಕ್​ ಆಟಗಾರರಿಗೆ ಸರಿಯಾಗಿ ನೋಡಿಕೊಂಡು ಚೆಂಡನ್ನು ಎಸೆಯುವಂತೆ ಸೂಚನೆ ನೀಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಪಾಕ್​ ತಂಡ ಕಿವೀಸ್​ ವಿರುದ್ಧ 79 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ | PAK VS ENG | ಪಾಕಿಸ್ತಾನಕ್ಕೆ ತವರಿನಲ್ಲೇ ಕ್ಲೀನ್​ ಸ್ವೀಪ್​ ಮುಖಭಂಗ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​ಗೆ 8 ವಿಕೆಟ್​ ಗೆಲುವು

Exit mobile version