Site icon Vistara News

PAK vs SA: ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ದಾಖಲೆ ಹೇಗಿದೆ?

Pakistan vs South Africa

ಚೆನ್ನೈ: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ(PAK vs SA) ತಂಡ ಇಂದು(ಶುಕ್ರವಾರ) ಚೆನ್ನೈಯಲ್ಲಿ ನಡೆಯುವ ವಿಶ್ವಕಪ್​ನ 26ನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಡಲಿದೆ. ಒಂದೊಮ್ಮೆ ಪಾಕಿಸ್ತಾನ ಸೋಲು ಕಂಡರೆ ಸೆಮಿಫೈನಲ್​ ರೇಸ್​ನಿಂದ ಬಹುತೇಕ ಹೊರಬೀಳಲಿದೆ. ಹೀಗಾಗಿ ಪಾಕ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ವಿಶ್ವಕಪ್​ ಮುಖಾಮುಖಿ

ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ ವಿಶ್ವಕಪ್​ ಇತಿಹಾಸದಲ್ಲಿ 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಇತ್ತಂಡಗಳು ಮೊದಲ ಬಾರಿ ಮುಖಾಮುಖಿಯಾದದ್ದು 1992ರಲ್ಲಿ. ಈ ಪಂದ್ಯವನ್ನು ಹರಿಣಗಳ ಪಡೆ 20 ರನ್​ಗಳಿಂದ ಗೆದ್ದು ಬೀಗಿತ್ತು. ಇದಾದ ಬಳಿಕ 1996 ವಿಶ್ವಕಪ್​ನಲ್ಲೂ ದಕ್ಷಿಣ ಆಫ್ರಿಕಾ 5 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. 1999ರ ವಿಶ್ವಕಪ್​ನಲ್ಲಿಯೂ ದಕ್ಷಿಣ ಆಫ್ರಿಕಾವೇ ಗೆದ್ದು ಪಾಕ್​ ವಿರುದ್ಧ ಹ್ಯಾಟ್ರಿಕ್​ ಗೆಲುವು ಸಾಧನೆ ಮಾಡಿತ್ತು. ಆ ಬಳಿಕದ 2015 ಮತ್ತು 2019ರ ವಿಶ್ವಕಪ್​ನಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು. ಸದ್ಯ ಪಾಕ್​ ಈ ಪಂದ್ಯದಲ್ಲಿ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಏಕದಿನ ಮುಖಾಮುಖಿ

ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 82 ಪಂದ್ಯಗಳನ್ನು ಆಡಿವೆ. ಇದರಲ್ಲಿ ಪಾಕಿಸ್ತಾನ ಭರ್ತಿ 30 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 51 ಪಂದ್ಯಗಳನ್ನು ಗೆದ್ದಿದೆ. ಒಂದು ಒಂದ್ಯ ರದ್ದುಗೊಂಡಿದೆ. ಪಾಕಿಸ್ತಾನ ತಂಡ ಹರಿಣಗಳ ಎದುರು ಕೊನೆಯದಾಗಿ ಏಕದಿನ ಪಂದ್ಯ ಜಯಿಸಿದ್ದು 2021ರಲ್ಲಿ. ಸೆಂಚುರಿಯನ್​ನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್​ ತಂಡ 28 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ Hardik Pandya : ಹಾರ್ದಿಕ್​ ಪಾಂಡ್ಯ ಬದಲಿಗೆ ಗುಜರಾತ್​​ನ ಆಲ್​ರೌಂಡರ್​ಗೆ ಚಾನ್ಸ್​?

ಪಿಚ್​ ರಿಪೋರ್ಟ್

ಚೆನ್ನೈಯ ಚಿದಂಬರಂ(MA Chidambaram Stadium) ಸ್ಟೇಡಿಯಂನ ಪಿಚ್​ ಸಂಪೂರ್ಣ ಸ್ಪಿನ್​ ಸ್ನೇಹಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಬ್ರೇಜ್‌ ಶಮ್ಸಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಹೀಗಾದರೆ ಇವರಿಗಾಗಿ ಜೆರಾಲ್ಡ್ ಕೋಟ್ಜಿ ಜಾಗ ಬಿಡಬೇಕು. ಪಾಕ್​ ತಂಡದಲ್ಲಿ ವಿಕೆಟ್​ ಕೀಳಬಲ್ಲ ಸ್ಪಿನ್ ಬೌಲರ್​ಗಳಿಲ್ಲ. ಕೇವಲ ವೇಗಿಗಳೇ ಇವರ ಪ್ರಮುಖ ಅಸ್ತ್ರ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಸ್ಪಿನ್ನ ಬೌಲರ್​ಗಳಾಗಿದ್ದರೂ ಹೇಳಿಕೊಳ್ಳುವಂತ ಪ್ರದರ್ಶನ ತೋರುತಿಲ್ಲ.

ಹವಾಮಾನ ವರದಿ

ಚೆನ್ನೈಯಲ್ಲಿ ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿಗಳಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆಯ ವೇಳೆ ಸ್ವಲ್ಪ ಮೋಡ ಕವಿದ ವಾತಾವರಣವಿದ್ದರೂ ತಾಪ ಅಧಿಕವಾಗಿಯೇ ಇರಲಿದೆ. ಮಳೆಯ ಯಾವುದೇ ಸಾಧ್ಯತೆ ಇಲ್ಲ ಆದರೆ, ಇಬ್ಬನಿ ಸಮಸ್ಯೆ ಖಚಿತ ಎಂದು ತಿಳಿಸಿದೆ.

ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಸ್ಸಿ ವಾನ್ ಡರ್​ ಡುಸೆನ್, ಐಡೆನ್ ಮಾರ್ಕ್ರಮ್(ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ಜೆರಾಲ್ಡ್ ಕೋಟ್ಜಿ/ತಬ್ರೇಜ್‌ ಶಮ್ಸಿ.

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.

Exit mobile version