ಲಾಹೋರ್ : ಭಾರತ ವಿರುದ್ಧ ಮೊದಲ ಪಂದ್ಯ ಸೇರಿದಂತೆ ಮುಂಬರುವ ಟಿ೨೦ ವಿಶ್ವ ಕಪ್‌ಗೆ (T20 World Cup) ಪಾಕಿಸ್ತಾನ ತಂಡವನ್ನು ಗುರುವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಿಸಿದೆ. ಏಷ್ಯಾ ಕಪ್‌ನಲ್ಲಿ ಆಡಿರುವ ತಂಡವನ್ನೇ ಉಳಿಸಿಕೊಳ್ಳಲಾಗಿದ್ದರೂ, ಇಬ್ಬರು ಮಾರಕ ವೇಗದ ಬೌಲರ್‌ಗಳು ತಂಡ ಸೇರಿಕೊಂಡಿದ್ದಾರೆ. ಒಬ್ಬರು ಶಾಹಿನ್ ಶಾ ಅಫ್ರಿದಿ ಹಾಗೂ ಇನ್ನೊಬ್ಬರು ಜೂನಿಯರ್ ವಾಸಿಮ್.
ಶಾಹಿನ್ ಅಫ್ರಿದಿ ಹಾಗೂ ಜೂನಿಯರ್ ವಾಸಿಮ್ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡಿದ್ದ ಏಷ್ಯಾ ಕಪ್‌ನಲ್ಲಿ ಆಡಲಿರಲಿಲ್ಲ. ಶಾಹಿನ್ ಕಾಲು ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಕ್ಕೆ ಉಳಿದಿದ್ದರೆ, ಜೂನಿಯರ್ ವಾಸಿಮ್ ಅಭ್ಯಾಸ ನಡೆಸುವ ವೇಳೆ ಬೆನ್ನು ಸ್ನಾಯು ಸೆಳೆತಕ್ಕೆ ಒಳಗಾಗಿ ತಂಡದಿಂದ ಹೊರಕ್ಕೆ ನಡೆದಿದ್ದರು. ಹೀಗಾಗಿ ನಾಸಿಮ್ ಶಾ ಹಾಗೂ ಶಹನವಾಜ್ ದಹಾನಿ ಪ್ರಮುಖ ಬೌಲರ್‌ಗಳ ಪಾತ್ರ ವಹಿಸಿದ್ದರು. ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಪ್ರಭಾವ ಬೀರಿದ್ದ ಹೊರತಾಗಿಯೂ ಎರಡನೇ ಪಂದ್ಯದಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಗುಂಪು ಹಂತದ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಸೂಪರ್-೪ ಹಂತದಲ್ಲಿ ಪಾಕಿಸ್ತಾನ ತಂಡ ರನ್ ಗೆಲುವು ಸಾಧಿಸಿತ್ತು.
ತಂಡ : ಬಾಬರ್ ಅಜಮ್ (ನಾಯಕ), ಶದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಾಸಿಮ್ ಶಾ, ಶಹೀನ್ ಶಾ ಅಫ್ರಿದಿ, ಶಾ ಮಸೂದ್, ಉಸ್ಮಾನ್ ಖಾದಿರ್.