Site icon Vistara News

Babar Azam: ಪಾಕ್ ನಾಯಕನ ಬೆಂಬಲಕ್ಕೆ ನಿಂತ ಟೀಮ್​ ಇಂಡಿಯಾದ ಮಾಜಿ ಆಟಗಾರ

Babar Azam

ಮುಂಬಯಿ: ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ಸತತ ಸೋಲಿನಿಂದಾಗಿ ಟೀಕೆಗೆ ಒಳಗಾಗಿರುವ ತಂಡದ ನಾಯಕ ಬಾಬರ್ ಅಜಂ(Babar Azam) ಅವರಿಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಆಕಾಶ್​ ಚೋಪ್ರಾ(Aakash Chopra) ಬೆಂಬಲ ಸೂಚಿಸಿದ್ದಾರೆ. ಸೋಲಿಗೆ ಬಾಬರ್​ ಮಾತ್ರ ಕಾರಣವಲ್ಲ ಎಂದಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಪ್ರದರ್ಶನ ನೀಡುತ್ತಿದೆ. ಈ ಸೋಲಿಗೆ ಬಾಬರ್​ ಅಜಂ ಅವರ ಕಳಪೆ ನಾಯಕತ್ವವೇ ಕಾರಣ ಎಂದು ಪಾಕ್​ನ ಮಾಜಿ ಆಟಗಾರರು ಆರೋಪ ಮಾಡಿದ್ದಾರೆ. ಅಲ್ಲದೆ ಅವರನ್ನು ನಾಯತ್ವದಿಂದ ಕೆಳಗಿಳಿಸಬೇಕು ಎಂದು ಪಾಕ್​ ಕ್ರಿಕೆಟ್​ ಮಂಡಳಿಗೆ ಮನವಿಯನ್ನೂ ಮಾಡಿದ್ದಾರೆ. ಪಾಕ್​ ಸದ್ಯ ಆಡಿರುವ 5 ಪಂದ್ಯಗಳ ಪೈಕಿ ಕೇವಲ 2 ಗೆಲುವು ಸಾಧಿಸಿದೆ.

ಬಾಬರ್ ಒಬ್ಬರೇ ಕಾರಣವಲ್ಲ

ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಪಂದ್ಯದ ವೇಳೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಆಕಾಶ್ ಚೋಪ್ರ ಅವರು ಬಾಬರ್ ಬಗ್ಗೆ ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕ ಬಾಬರ್​ ಬೆನ್ನಿಗೆ ನಿಂತಿದ್ದಾರೆ. “ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಲು ಬಾಬರ್ ಅಜಂ ಒಬ್ಬರೇ ಕಾರಣವಲ್ಲ. ಪಾಕ್ ಸೋಲಿಗೆ ಬೇರೆಯುದ್ದೇ ಕಾರಣಗಳಿವೆ” ಎಂದಿದ್ದಾರೆ.

ಸೋಲಿಗೆ ತಂಡದ ಎಲ್ಲ ಆಟಗಾರರು ಕಾರಣ

“ಪಾಕ್​ ತಂಡ ಬಲಿಷ್ಠವಾಗಿದೆ. ಆದರೆ, ಇಲ್ಲಿನ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಇದುವೇ ಸೋಲಿಗೆ ಕಾರಣ. ಬದಲಾಗಿ ಬಾಬರ್​ ಅವರ ನಾಯಕತ್ವವಲ್ಲ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಗಮನಿಸಿ. ಪ್ಲೇಯಿಂಗ್​ ಇಲೆವೆನ್​ನ ಎಲ್ಲ ಆಟಗಾರರು ಅತ್ಯಂತ ಅನುಭವಿಗಳು ಮತ್ತು ಬಲಿಷ್ಠ ಆಟಗಾರರು ಆದರೆ, ಅವರಿಗೆ ಗೆಲುವು ಮಾತ್ರ ಮರಿಚಿಕೆಯಾಗಿದೆ. ಸೋಲಿಗೆ ನಾಯಕತ್ವವನ್ನು ಹೊಣೆ ಮಾಡುವುದು ಸರಿಯಲ್ಲ. ಒಂದೊಮ್ಮೆ ನಾಯಕ ಉತ್ತಮ ಪ್ರದರ್ಶನ ತೋರಿ, ಉಳಿದ ಆಟಗಾರರು ಕಳಪೆ ಪ್ರದರ್ಶನ ತೋರಿ ತಂಡ ಸೋಲು ಕಂಡರೆ ಈ ಸೋಲಿಗೂ ನಾಯಕತ್ವವನ್ನು ದೂರುವುದು ಎಷ್ಟು ಸರಿ” ಎಂದು ಹೇಳುವ ಮೂಲಕ ಬಾಬರ್​ ಪರ ಬ್ಯಾಟ್​ ಬೀಸಿದ್ದಾರೆ.

ಕಣ್ಣೀರು ಹಾಕಿದ್ದ ಬಾಬರ್​ ಅಜಂ!

ಅಫಘಾನಿಸ್ತಾನ ವಿರುದ್ಧದ ಸೋಲಿನ ಹತಾಶೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಪಾಕ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಯೂಸುಫ್(Mohammad Yousuf) ಅವರು ಬುಧವಾರ ಹೇಳಿಕೆ ನೀಡಿದ್ದರು.

ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್​ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್​ ಒಪ್ಪಿಸಿದ್ದಾರೆ?​

ಪಾಕಿಸ್ತಾನದ ಸಾಮಾ ಟಿವಿಯಲ್ಲಿ ಸಂದರ್ಶನದಲ್ಲಿ ಮಾತನಾಡಿದ್ದ ಯೂಸುಫ್, “ಆಫ್ಘನ್​ ವಿರುದ್ಧದ ಸೋಲಿನ ಬಳಿಕ ಬಾಬರ್​ ಅವರು ಪಾಲ್ಗೊಂಡ ಪತ್ರಿಕಾಗೋಷ್ಠಿಯನ್ನು ನಾನು ನೋಡಿದೆ. ಅವರು ಇಲ್ಲಿ ವಿಚಲಿತರಾಗಿ ಕಾಣುತ್ತಿದ್ದರು. ಇದಕ್ಕೆ ಕಾರಣ ಹ್ಯಾಟ್ರಿಕ್​ ಸೋಲು. ಅಲ್ಲದೆ ಬಾಬರ್ ಅವರು ಡ್ರೆಸ್ಸಿಂಗ್ ​ರೂಮ್​ನಲ್ಲಿ ಕಣ್ಣೀರು ಸುರಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಇದು ತಂಡದ ಸೋಲಿನಲ್ಲಿ ಕೇವಲ ಬಾಬರ್‌ ಅವರ ತಪ್ಪಲ್ಲ. ಇದು ಇಡೀ ತಂಡವನ್ನು ಒಳಗೊಂಡಿರುತ್ತದೆ. ಕಷ್ಟದ ಸಮಯದಲ್ಲಿ ನಾವು ಬಾಬರ್‌ನೊಂದಿಗೆ ಇದ್ದೇವೆ ಮತ್ತು ಇಡೀ ದೇಶವು ಅವರೊಂದಿಗಿದೆ” ಎಂದು ಯೂಸುಫ್ ಧೈರ್ಯ ತುಂಬಿದ್ದರು.

Exit mobile version