ಕರಾಚಿ: ಕ್ರಿಕೆಟ್ನಲ್ಲಿ ಈಗ ಸಿಕ್ಸರ್ ಬಾರಿಸುವುದು ಸುಲಭದ ಮಾತಾಗಿದೆ. ಹಲವು ಬ್ಯಾಟರ್ಗಳು ಇದೇ ಮಾದರಿಯ ಸಾಧನೆ ಮಾಡುತ್ತಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ಪಾಕಿಸ್ತಾನ ಕ್ರಿಕೆಟ್ ಲೀಗ್ನಲ್ಲೂ ಅದೇ ಮಾದರಿಯ ಸಾಧನೆ ಮಾಡಿದ್ದಾರೆ. ಅಚ್ಚರಿಯೆಂದರೆ ಅವರು ಈ ಸಾಧನೆ ಮಾಡಿರುವುದು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕ್ರೀಡಾ ಸಚಿವ ವಹಾಬ್ ರಿಯಾಜ್ ಬೌಲಿಂಗ್ಗೆ!.
ಬಾಬರ್ ಅಜಮ್ ನೇತೃತ್ವದ ಪೆಶಾವರ್ ಝಲ್ಮಿ ಹಾಗೂ ಸರ್ಫರಾಜ್ ಅಹಮದ್ ಕ್ವೆಟ್ಟಾ ಗ್ಲಾಡಿಯೇಟರ್ ತಂಡಗಳ ನಡುವಿನ ಪಂದ್ಯದಲ್ಲಿ ಆರು ಸಿಕ್ಸರ್ಗಳ ಸಾಧನೆ ದಾಖಲಾಗಿದೆ. ಪಾಕ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಇಫ್ತಿಕಾರ್ ಅಹಮದ್ (PSL match) ಈ ಸಾಧನೆ ಮಾಡಿದವರು. ಅವರು ಬಾಬರ್ ಅಜಮ್ ನೇತೃತ್ವದ ಪೆಶಾವರ್ ಝಲ್ಮಿ ತಂಡದ ಪರವಾಗಿ ಆಡುತ್ತಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಪೆಶಾವರ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 184 ರನ್ ಬಾರಿಸಿತ್ತು. ಇಫ್ತಿಕಾರ್ ಅಹಮದ್ 54 ಎಸೆತಗಳಲ್ಲಿ 94 ರನ್ ಬಾರಿಸಿದರು. ಅದರಲ್ಲೂ ಇನಿಂಗ್ಸ್ನ ಕೊನೇ ಓವರ್ನಲ್ಲಿ 36 ರನ್ ಬಾರಿಸಿದ್ದಾರೆ.
ಇದನ್ನೂ ಓದಿ : Virat kohli | ಲಂಕಾ ವಿರುದ್ಧ ಪಂದ್ಯದಲ್ಲಿ 97 ಮೀಟರ್ ಸಿಕ್ಸರ್ ಬಾರಿಸಿ ಗಮನ ಸೆಳೆದ ವಿರಾಟ್ ಕೊಹ್ಲಿ
ಇಫ್ತಿಕಾರ್ ಅಹಮದ್ ಅವರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಮಾದರಿಯ ಸಾಧನೆಯನ್ನು ನಾಲ್ಕು ಆಟಗಾರರು ಮಾಡಿದ್ದಾರೆ. ಹರ್ಷೆಲ್ ಗಿಬ್ಸ್, ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್, ಅಮೆರಿಕದ ಜಸ್ಕರ್ ಮಲ್ಹೋತ್ರಾ ಈ ದಾಖಲೆ ಮಾಡಿದವರು.