Site icon Vistara News

ಬಾಕ್ಸಿಂಗ್​ ಡೇ ಪಂದ್ಯಕ್ಕೂ ಮುನ್ನ ಆಸೀಸ್​ ಆಟಗಾರರಿಗೆ ಕ್ರಿಸ್ಮಸ್​ ಗಿಫ್ಟ್​ ನೀಡಿದ ಪಾಕ್​ ತಂಡ

pakistan team christmas gifts

ಮೆಲ್ಬರ್ನ್: ಪಾಕಿಸ್ತಾನ ತಂಡದ ಆಟಗಾರರು ಇಂದು ಆರಂಭಗೊಂಡ ಬಾಕ್ಸಿಂಗ್​ ಡೇ ಟೆಸ್ಟ್​(Boxing Day Test) ಪಂದ್ಯಕ್ಕೂ ಮುನ್ನ ಆತಿಥೇಯ ಆಸ್ಟ್ರೇಲಿಯಾ(Australia vs Pakistan, 2nd Test) ತಂಡದ ಆಟಗಾರರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಕ್ರಿಸ್​ಮಸ್​ ಉಡುಗೊರೆ ನೀಡಿ ಶುಭಾಶಯ ತಿಳಿಸಿದ್ದಾರೆ. ಪಾಕ್​ ಆಟಗಾರರು ಉಡುಗೊರೆ ನೀಡಿದ ಸುಂದರ ಕ್ಷಣವನ್ನು ಪಾಕ್​ ಕ್ರಿಕೆಟ್​ ಮಂಡಳಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ನೂತನ ನಾಯಕ ಶಾನ್ ಮಸೂದ್ ಅವರು ಈ ಹೃದಯಸ್ಪರ್ಶಿ ನಡವಳಿಕೆಯ ನೇತೃತ್ವವಹಿಸಿದ್ದರು. ಈ ವೇಳೆ ಮಾಜಿ ನಾಯಕ ಬಾಬರ್ ಅಜಂ ಹಾಗೂ ತಂಡದ ಕೋಚಿಂಗ್ ಸಿಬ್ಬಂದಿಯೂ ಜತೆಗಿದ್ದರು. ಕೆಲ ಕಾಲ ಆಸೀಸ್​ ಆಟಗಾರ ಮಕ್ಕಳೊಂದಿಗೆ ಕಾಲ ಕಳೆದರು.

ಉತ್ತಮ ಆರಂಭ ಪಡೆದ ಆಸೀಸ್​

ಮೆಲ್ಬರ್ನ್​ನಲ್ಲಿ ಇಂದು(ಮಂಗಳವಾರ) ಆರಂಭಗೊಂಡ ಇತ್ತಂಡಗಳ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಮೊದಲ ದಿನದಾಟದ ಮುಕ್ತಾಯಕ್ಕೆ ಮೂರು ವಿಕೆಟ್​ ನಷ್ಟಕ್ಕೆ 187 ರನ್​ ಗಳಿಸಿದೆ. ಮಾರ್ನಸ್​ ಲಬುಶೇನ್​(44) ಮತ್ತು ಟ್ರಾವಿಸ್​ ಹೆಡ್​(9) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಪಾಕ್​ ಪರ ಹಸನ್​ ಅಲಿ, ಅಮೀರ್​ ಜಮಾಲ್ ಮತ್ತು ಆಘಾ ಸಲ್ಮಾನ್ ತಲಾ ಒಂದೊಂದು ವಿಕೆಟ್​ ಪಡದಿದ್ದಾರೆ.

ಆಸೀಸ್​ ಪರ ಇನಿಂಗ್ಸ್​ ಆರಂಭಿಸಿದ ಡೇವಿಡ್​ ವಾರ್ನರ್​ ಅವರು 38 ರನ್​ ಗಳಿಸಿದರೆ, ಅವರ ಜತೆಗಾರ ಉಸ್ಮಾನ್​ ಖವಾಜ(42) ಬಾರಿಸಿದರು. ಅನುಭವಿ ಆಟಗಾರ ಸ್ಟೀವನ್​ ಸ್ಮಿತ್ 26ರನ್​ಗೆ ವಿಕೆಟ್​ ಒಪ್ಪಿಸಿದರು. ಮೊದಲ ಟೆಸ್ಟ್​ ಪಂದ್ಯವನ್ನು ಭಾರಿ ಅಂತರದಿಂದ ಸೋತಿರುವ ಪಾಕ್​ ತಂಡಕ್ಕೆ ಸರಣಿ ಜೀವಂತವಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಇದನ್ನೂ ಓದಿ IND vs SA : ಮೊದಲ ಪಂದ್ಯಕ್ಕೆ ರವೀಂದ್ರ ಜಡೇಜಾ ಇಲ್ಲ; ಕಾರಣ ಹೇಳಿದ ರೋಹಿತ್​

ಬಾಕ್ಸಿಂಗ್​ ಡೇ ಟೆಸ್ಟ್ ಎಂದರೇನು?

ಬಾಕ್ಸಿಂಗ್ ಡೇ ಟೆಸ್ಟ್(Boxing Day Test) ಎಂಬುದು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 26 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಲಾಗುವ ಪ್ರಸಿದ್ಧ ಟೆಸ್ಟ್ ಪಂದ್ಯವಾಗಿದ್ದು, ಡಿಸೆಂಬರ್ 30 ರಂದು ಅಥವಾ ಅದಕ್ಕೂ ಮೊದಲು ಕೊನೆಗೊಳ್ಳುತ್ತದೆ. ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಶೆಫೀಲ್ಡ್ ಶೀಲ್ಡ್ ಪ್ರಥಮ-ದರ್ಜೆ ಪಂದ್ಯವನ್ನು ಸೂಚಿಸುವ ಈ ಸಂಪ್ರದಾಯವು 1865ರ ಹಿಂದೆಯೇ ಪ್ರಾರಂಭವಾದ ಕಾರಣ ಇದು ಆಸ್ಟ್ರೇಲಿಯನ್ನರಿಗೆ ಬಹಳ ಮಹತ್ವದ್ದಾಗಿದೆ.

Exit mobile version