Site icon Vistara News

ICC World Cup 2023 : ಪಾಕ್​ ತಂಡದ ವೈಫಲ್ಯವನ್ನು ಲೇವಡಿ ಮಾಡಿದ ಮಾಜಿ ಕ್ರಿಕೆಟಿಗ

pakistan crickete team

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಉತ್ಸಾಹ ಬತ್ತುವಂತೆ ಮಾಡಿದ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರ ಅನುಮತಿಯೊಂದಿಗೆ ಬಾಬರ್ ಅಜಮ್ ಅವರ ವಾಟ್ಸಾಪ್ ಚಾಟ್​​ನ ಸೋರಿಕೆಯಾಗಿತ್ತು. ಇದೇ ವೇಳೆ ಇಂಜಮಾಮ್-ಉಲ್-ಹಕ್ ರಾಷ್ಟ್ರೀಯ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡದಿರು. ಈ ರೀತಿ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಸರಣಿ ವಿಜಯಗಳೊಂದಿಗೆ ಅಫ್ಘಾನಿಸ್ತಾನವು ಕ್ರಿಕೆಟ್ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಆದರೆ ಪಾಕಿಸ್ತಾನವು “ಭೌಗೋಳಿಕ ರಾಜಕೀಯ” ದ ಕೆಸರಿನಲ್ಲಿ ಸಿಲುಕಿದೆ ಎಂದು ಕನೇರಿಯಾ ಒತ್ತಿ ಹೇಳಿದ್ದಾರೆ.

“ಅಫ್ಘಾನಿಸ್ತಾನ ತಂಡವು ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸುತ್ತಿದ್ದರೆ, ಟೀಮ್ ಪಾಕಿಸ್ತಾನ್ ಕ್ರಿಕೆಟ್ ಮೇಲೆ ಕಡಿಮೆ ಗಮನ ಹರಿಸುತ್ತಿದೆ. ದಅಉದ ಭೌಗೋಳಿಕ ರಾಜಕೀಯದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಕಳಪೆ ಪ್ರದರ್ಶನದ ಸಂದರ್ಭದಲ್ಲಿ ನಾಯಕನಿಗೆ ನಿರಂತರವಾಗಿ ಬೆದರಿಕೆ ಹಾಕುವ ಮೂಲಕ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತನ್ನ ಕ್ರಿಕೆಟಿಗರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ. ತಂಡದ ಆಯ್ಕೆ ಪ್ರಶ್ನಾರ್ಹವಾಗಿರುವಾಗ ಇದು ನಡೆಯುತ್ತಿರುವುದು ತಪ್ಪು ಎಂದು ಕನೇರಿಯಾ ಹೇಳಿದ್ದಾರೆ.

ಬಾಬರ್ ಅಜಮ್ ಅವರ ಖಾಸಗಿ ಚಾಟ್​ಗಳು ಸೋರಿಕೆಯಾಗಿವೆ. ಆಟಗಾರರ ನಿರ್ವಹಣಾ ಕಂಪನಿಯಲ್ಲಿ ಭಾಗಿಯಾಗಿರುವ ಆರೋಪದ ನಂತರ ಇಂಜಮಾಮ್-ಉಲ್-ಹಕ್ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಪಾಕಿಸ್ತಾನ ತಂಡವು ಕೆಟ್ಟ ಹಂತವನ್ನು ಎದುರಿಸುತ್ತಿದೆ. ಪಿಸಿಬಿ ಮತ್ತು ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಇದು ಸಮಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Australia cricket team : ಆಸೀಸ್​ ತಂಡಕ್ಕೆ ಎಂದಿಗೂ ಕೋಚ್​ ಆಗಲ್ಲ ಎಂದ ಮಾಜಿ ಚಾಂಪಿಯನ್​

ಪಾಕಿಸ್ತಾನವು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಸತತ ಗೆಲುವುಗಳೊಂದಿಗೆ ತನ್ನ ವಿಶ್ವಕಪ್ 2023 ಅಭಿಯಾನವನ್ನು ಪ್ರಾರಂಭಿಸಿದೆ. ಆದರೆ ನಂತರ ಅವರು ವಿಶ್ವ ಕಪ್​ 2023 ರಲ್ಲಿ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದೆ/ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಸೋಲು 2023 ರ ವಿಶ್ವಕಪ್ನ ಸೆಮಿಫೈನಲ್ಗೆ ಪ್ರವೇಶಿಸುವ ಭರವಸೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ.

ಖಾಸಗಿ ಸಂಭಾಷಣೆ ಸೋರಿಕೆ

ಬೆಂಗಳೂರು: ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಸಾಬೀತಾಗುತ್ತಿದೆ. ಅಂತೆಯೇ ವಿಶ್ವ ಕಪ್​ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡವು ಆಂತರಿಕ ಕಲಹದಲ್ಲಿ ಮುಳುಗಿದೆ ಎಂಬುದು ಹೊಸ ಸುದ್ದಿ. ಈ ಸುದ್ದಿಯನ್ನು ಅನೇಕರು ನಿರಾಕರಿಸಿದರೂ ಕೆಲವೊಂದು ವರದಿಗಳು ಇದು ಸತ್ಯ ಎಂಬುದಕ್ಕೆ ಸಾಕ್ಷಿ ನೀಡುತ್ತಿವೆ. ಅಂತೆಯೇ ಪಾಕಿಸ್ತಾನ ತಂಡದ ನಾಯಕ ತಂಡದ ಸಮಸ್ಯೆ ಕುರಿತು ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಅವರಿಗೆ ಕಳುಹಿಸಿರುವ ವಾಟ್ಸ್​ಆ್ಯಪ್​ ಸಂದೇಶವನ್ನು ಸೋರಿಕೆ ಮಾಡಿದ್ದು, ತಂಡದ ನೈತಿಕತೆಯನ್ನು ಪ್ರಶ್ನಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ವಹಣಾ ಸಮಿತಿ ಮುಖ್ಯಸ್ಥ ಝಾಕಾ ಅಶ್ರಫ್ ಭಾನುವಾರ ತಡರಾತ್ರಿ ಬಾಬರ್ ಅಜಮ್ ಅವರ ವೈಯಕ್ತಿಕ ವಾಟ್ಸಾಪ್ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಸೋರಿಕೆ ಮಾಡಿದ್ದಾರೆ. ಪಿಸಿಬಿ ಮುಖ್ಯಸ್ಥರ ಕ್ರಮಗಳು ನೈತಿಕ ಕಳವಳಗಳನ್ನು ಹುಟ್ಟುಹಾಕಿವೆ. ಏಕೆಂದರೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ಖಾಸಗಿ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾರೆಯೇ ಎಂಬುದು ತಿಳಿದಿಲ್ಲ. ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುವುದು ಗೌಪ್ಯತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

Exit mobile version