ನವ ದೆಹಲಿ: ಫಾರ್ಮ್ ಕಳೆದುಕೊಂಡು ಸಂಕಷ್ಟದಲ್ಲಿರುವ ವಿರಾಟ್ ಕೊಹ್ಲಿಯ (Virat Kohli) ಬೆಂಬಲಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ನಿಂತಿದ್ದು, “ಈ ಕ್ಷಣವೂ ಕಳೆದು ಹೋಗುತ್ತದೆ. ಧೃತಿಗೆಡಬೇಡʼ ಎಂದು ಟ್ವೀಟ್ ಮೂಲಕ ಸಮಾಧಾನ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ೨೫ ಎಸೆತಗಳಲ್ಲಿ ೧೬ ರನ್ ಬಾರಿಸಿ ಔಟಾಗುವ ಮೂಲಕ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಹ್ಲಿಗೆ ಪಾಕ್ ನಾಯಕ ಸಮಾಧಾನ ಮಾಡಿದ್ದು, ಇಂಥ ಸಂದರ್ಭಗಳು ಮುಗಿದು ಹೋಗುತ್ತದೆ. ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದ್ದಾರೆ.
ಕೊಹ್ಲಿಗೆ ಸಮಾಧಾನ ಮಾಡಿ ಟ್ವೀಟ್ ಮಾಡಿರುವ ಕೊಹ್ಲಿ ತಮ್ಮಿಬ್ಬರ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಪಾಕ್ ನಾಯಕನ ಹೇಳಿಕೆಗೆ ಟ್ವೀಟ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. “ಕ್ರಿಕೆಟ್ ಅನ್ನು ಗುರುತಿಸಿದ ಕ್ರಿಕೆಟ್”, “ಹಳೆ ಕಿಂಗ್ ಅನ್ನು ಗುರುತಿಸಿದ ಹೊಸ ಕಿಂಗ್” ಎಂದೆಲ್ಲ ಬರೆದುಕೊಂಡಿದ್ದಾರೆ.
ಕೊಹ್ಲಿಗೆ ಸಮಾಧಾನ ಹೇಳಿದ ಬಾಬರ್‌ಗೆ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಈ ಮಾತು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ರೋಹಿತ್ ಬೆಂಬಲ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ನಿರಂತರವಾಗಿ ಕೊಹ್ಲಿ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಟೆಸ್ಟ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಸಾಧನೆಯನ್ನು ಹೊಗಳಿದ್ದ ಅವರು, ಗುರುವಾರದ ಪಂದ್ಯದ ಮುಕ್ತಾಯಗೊಂಡ ಬಳಿಕವೂ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಕೂಡ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದಾರೆ. “ಎಲ್ಲ ಕ್ರಿಕೆಟಿಗರು ಮನುಷ್ಯರೇ ಆಗಿದ್ದಾರೆ. ಅವರೂ ಕೆಲವೊಂದು ಬಾರಿ ಕನಿಷ್ಠ ಮೊತ್ತವನ್ನು ಬಾರಿಸುವ ಸಾಧ್ಯತೆಗಳಿವೆ,ʼʼ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Windis Tour | ಕೆರಿಬಿಯನ್ ನಾಡಿಗೂ ಹೋಗಲ್ಲ ವಿರಾಟ್ ಕೊಹ್ಲಿ, ಬುಮ್ರಾಗೂ ರೆಸ್ಟ್