Site icon Vistara News

ICC Awards 2022 : ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ಗೆ ಡಬಲ್​ ಧಮಾಕ!

Babar Azam

ದುಬೈ : ಪಾಕಿಸ್ತಾನ ಏಕ ದಿನ ತಂಡದ ನಾಯಕ ಬಾಬರ್​ ಅಜಮ್​ (Babar Azam) ಐಸಿಸಿ ಬಿಡುಗಡೆ ಮಾಡಿರುವ 2022ರ (ICC Awards 2022) ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡೆರಡು ಸ್ಥಾನ ಪಡೆದುಕೊಂಡಿದ್ದಾರೆ. ಅವರು ವರ್ಷದ ಶ್ರೇಷ್ಠ ಪುರುಷ ಕ್ರಿಕೆಟಿಗ ಪ್ರಶಸ್ತಿ ಹಾಗೂ ವರ್ಷದ ಶ್ರೇಷ್ಠ ಏಕ ದಿನ ಕ್ರಿಕೆಟಿಗ ಎಂಬ ಸ್ಥಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಬಾಬರ್​ ಅಜಮ್​ ಸತತವಾಗಿ ಎರಡು ವರ್ಷ ಅತ್ಯುತ್ತಮ ಏಕ ದಿನ ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಮೂಲಕವೂ ದಾಖಲೆ ಮಾಡಿದ್ದಾರೆ.

ಬಾಬರ್ ಅಜಮ್​ ಅವರು ಆಸ್ಟ್ರೇಲಿಯಾದ ಸ್ಪಿನ್ನರ್​ ಆಡಂ ಜಂಪಾ, ವೆಸ್ಟ್​ ಇಂಡೀಸ್​ನ ಆರಂಭಿಕ ಬ್ಯಾಟರ್​ ಶಾಯ್​ ಹೋಪ್, ಜಿಂಬಾಬ್ವೆ ಆಲ್​ರೌಂಡರ್​ ಸಿಕಂದರ್​ ರಾಜಾ ಅವರನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ. ಬಾಬರ್​ 2022ರಲ್ಲಿ ಒಟ್ಟು 9 ಏಕ ದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಶತಕಗಳು, ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇವೆಲ್ಲ ಸಾಧನೆ ಪರಿಗಣಿಸಿ ಅವರಿಗೆ ಐಸಿಸಿ ಅವಾರ್ಡ್​ ಲಭಿಸಿದೆ.

ಇದನ್ನೂ ಓದಿ : Kohli VS Babar | ಬಾಬರ್ ಅಜಮ್‌ಗಿಂತ ವಿರಾಟ್‌ ಹೇಗೆ ಶ್ರೇಷ್ಠ ಬ್ಯಾಟರ್‌? ಪಾಕ್‌ ಲೆಜೆಂಡ್‌ಗಳು ವಿವರಿಸಿದ್ದಾರೆ

ಬಾಬರ್​ ಅಜಮ್ 2021ರಿಂದ ಐಸಿಸಿ ಏಕ ದಿನ ಮಾದರಿಯ ರ್ಯಾಂಕ್​ ಪಟ್ಟಿಯಲ್ಲಿ ಮೊದಲ ಸ್ಥಾನವನ್ನೇ ಕಾಪಾಡಿಕೊಂಡಿದ್ದಾರೆ. ಅದೇ ರೀತಿ ನಾಯಕರಾಗಿಯೂ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಮೂರು ಏಕ ದಿ ಸರಣಿಗಳಲ್ಲಿ ಮೂರರಲ್ಲೂ ಜಯ ಸಾಧಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಒಂದೇ ಒಂದು ಪಂದ್ಯದಲ್ಲಿಸೋಲು ಕಂಡಿದೆ ಬಾಬರ್​ ನೇತೃತ್ವದ ಪಾಕಿಸ್ತಾನ ಬಳಗ.

Exit mobile version