ಬೆಂಗಳೂರು: ವಿಶ್ವ ಕಪ್ ಪಂದ್ಯಗಳು ನಡೆಯುವ ಸ್ಟ್ಯಾಂಡ್ಗಳಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಶಿಸ್ತಿನ ವರ್ತನೆಗಳು ಆಗಾಗ ಬೆಳಕಿಗೆ ಬರುತ್ತಿವೆ. ಇದು ಹಾಲಿ ವಿಶ್ವ ಕಪ್ನಲ್ಲಿ ಚರ್ಚೆಯ ವಿಷಯವೂ ಆಗಿದೆ. ಏತನ್ಮಧ್ಯೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು ಪಾಕಿಸ್ತಾನ ನಾಯಕನನ್ನು ಗುರಿಯಾಗಿಸಿಕೊಂಡು ಆನ್ಲೈನ್ನಲ್ಲಿ ಟ್ರೋಲ್ ಮಾಡಲಾಗಿದೆ. ಅವರ ಕುರಿತ ವಿಕಿಪೀಡಿಯಾ ಮಾಹಿತಿಯನ್ನೇ ತಿದ್ದಿ ಅವರನ್ನು ಹೆಸರನ್ನು ಜಿಂಬಾಬರ್ ಎಂದು ಬರೆಯಲಾಗಿದೆ.
Wikipedia has turned off the option to edit Babar Azam's page.
— Johns (@JohnyBravo183) October 26, 2023
Zimbabar will stay for long now.#BehindYouBabarAzam 😆🤣😂 pic.twitter.com/rILsgCYqmy
ಟ್ರೋಲರ್ ಒಬ್ಬರು ಬಾಬರ್ ಅವರ ವಿಕಿಪೀಡಿಯಾ ಪುಟವನ್ನು ಎಡಿಟ್ ಮಾಡಿದ್ದು. ‘ಜಿಂಬಾಬರ್’ ಅನ್ನು ಕ್ರಿಕೆಟಿಗನ ನಿಕ್ನೇಮ್ಗಳ ಪಟ್ಟಿಗೆ ಸೇರಿಸಿದ್ದಾರೆ. ಜಿಂಬಾಬ್ವೆ ಮತ್ತು ಇತರ ಸಣ್ಣ ರಾಷ್ಟ್ರಗಳ ವಿರುದ್ಧ ಮಾತ್ರ 29 ವರ್ಷದ ಆಟಗಾರ ಸ್ಕೋರ್ ಮಾಡುತ್ತಾರೆ ಎಂಬುವ ಆರೋಪವಿದೆ. ಅದಕ್ಕಾಗಿ ಅವರನ್ನು ಜಿಂಬಾಬರ್ ಎಂದು ಕರೆಯಲಾಗುತ್ತದೆ. ಇದನ್ನೇ ನಿಕ್ ನೇಮಗಳ ಪಟ್ಟಿಗೆ ಸೇರಿಸಲಾಗಿದೆ.
ಬಾಬರ್ಗೆ ಜಿಂಬಾಬರ್ ಎಂಬ ಹೆಸರೂ ಇದೆ. ಅವರು ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ. ಸಮಕಾಲೀನ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರೆಂದು ವ್ಯಾಪಕ ಜನಪ್ರಿಯತೆ ಹೊಂದಿದ್ದಾರೆ. ಎಂದು ಟ್ರೋಲರ್ಗಳು ವಿಕಿಪೀಡಿಯಾ ಮಾಹಿತಿ ತಿದ್ದಿದ್ದಾರೆ.
ಸರಿಪಡಿಸಿದ ನೆಟ್ಟಿಗರು
ಬದಲಾವಣೆಗಳನ್ನು ನಂತರ ಅಳಿಸಲಾಯಿತು ಮತ್ತು ಪುಟವನ್ನು ಅದರ ಮೂಲ ರೂಪಕ್ಕೆ ಪುನಃಸ್ಥಾಪಿಸಲಾಯಿತು ಎಂದು ಹೇಳಲಾಗಿದೆ. ವಿಕಿಪೀಡಿಯಾದಲ್ಲಿ ಯಾರು ಬದಲಾವಣೆಗಳನ್ನು ಮಾಡಿದ್ದಾರೆಂದು ತಿಳಿದಿಲ್ಲವಾದರೂ, ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಪಾಕಿಸ್ತಾನ ನಾಯಕನ ವಿಕಿಪೀಡಿಯಾ ಪುಟವನ್ನು ಎಡಿಟ್ ಮಾಡಿದ್ದಾರೆ ಎಂದು ಪಾಕಿಸ್ತಾನ ಅಭಿಮಾನಿಗಳು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಅಹ್ಮದಾಬಾದ್ನಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರನ್ನು ಭಾರತೀಯ ಅಭಿಮಾನಿಗಳು ಜೈ ಶ್ರೀ ರಾಮ್ ಎಂದು ಕೂಗುವ ಮೂಲಕ ಟ್ರೋಲ್ ಮಾಡಿದ್ದರು.
ಬಾಬರ್ ಅಜಮ್ ನಾಯಕತ್ವಕ್ಕೆ ಅಪಾಯ
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಬಾಬರ್ ಅಜಮ್ ಕೆಲವು ಉತ್ತಮ ಇನಿಂಗ್ಸ್ಗಳನ್ನು ಆಡಿದ್ದರೂ , ಅವರ ನಾಯಕತ್ವವು ಭಾರಿ ಒತ್ತಡಕ್ಕೆ ಒಳಗಾಗಿದೆ. ಅನೇಕ ಮಾಜಿ ಕ್ರಿಕೆಟಿಗರು ನಾಯಕನ ವಿಧಾನವನ್ನು ಟೀಕಿಸಿದ್ದಾರೆ. ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಕ್ರಮಣಕಾರಿ ಫೀಲ್ಡ್ ಸೆಟ್ನೊಂದಿಗೆ ಎದುರಾಳಿಗಳ ಮೇಳೆ ಹೇಗೆ ಒತ್ತಡ ಹೇರಬೇಕೆಂದು ಬಾಬರ್ ಕಲಿಯಬೇಕಾಗಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ICC World Cup 2023 : ಪಾಕ್ ತಂಡವನ್ನೇ ಕೆಳಕ್ಕೆ ಇಳಿಸಿದ ಲಂಕಾ; ಹೀಗಿದೆ ನೋಡಿ ವಿಶ್ವ ಕಪ್ ಅಂಕಪಟ್ಟಿ
ಒತ್ತಡ ಹೇರುವುದು ನಾಯಕನ ಕೆಲಸ, ವೇಗಿ ಬೌಲಿಂಗ್ ಮಾಡುವಾಗ ಸ್ಲಿಪ್ನಲ್ಲಿ ಫೀಲ್ಡರ್ಗಳನ್ನು ನಿಲ್ಲಿಸಿಲ್ಲ. 12 ಎಸೆತಗಳಲ್ಲಿ ನಾಲ್ಕು ರನ್ ಅಗತ್ಯವಿದೆ ಮತ್ತು ನೀವು ಬ್ಯಾಕ್ವರ್ಡ್ ಪಾಯಿಂಟ್ ಬಳಸಿಕೊಂಡಿದ್ದೀರಿ. ಒತ್ತಡ ಹೇರಿ. ಆಸ್ಟ್ರೇಲಿಯನ್ನರು ಪಂದ್ಯ ಗೆಲ್ಲುತ್ತಾರೆ. ಅವರು ಒಂದರಿಂದ ಎರಡು ವಿಕೆಟ್ಗಳನ್ನು ಕಬಳಿಸುತ್ತಾರೆ. ಆದರೆ, ಪಾಕಿಸ್ತಾನ ತಂಡದ ಯೋಜನೆಗಳೇ ಸರಿಯಿಲ್ಲೆ ಎಂದು ಅವರು ಹೇಳಿದ್ದಾರೆ
ಮೆನ್ ಇನ್ ಗ್ರೀನ್ ತಂಡ ಅಕ್ಟೋಬರ್ 27ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್.