Site icon Vistara News

Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಕೋಚ್​ ಮೇಲೆ ಕಣ್ಣಿಟ್ಟ ಪಾಕ್​

Pakistan cricket team

ಕರಾಚಿ: ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮತ್ತು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ(Jason Gillespie) ಅವರು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್(Pakistan Cricket Team) ತಂಡದ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರು ತಂಡದ ವೈಟ್-ಬಾಲ್ ವ್ಯವಹಾರಗಳನ್ನು ಮಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಟೆಸ್ಟ್​ ತಂಡಕ್ಕೆ ಪಿಸಿಬಿ ಹೊಸ ಕೋಚ್​ ಹುಡುಕಾಟದಲ್ಲಿದೆ ಎಂದು ವರದಿಯಾಗಿದೆ.

ಗ್ಯಾರಿ ಕರ್ಸ್ಟನ್​ ಅವರು 2008ರಿಂದ 2011ರವರೆಗೆ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದರು. ಇವರ ಮಾರ್ಗದರ್ಶನದಲ್ಲೇ ಭಾರತ 2011ರ ಏಕದಿನ ವಿಶ್ವಕಪ್​ ಗೆದ್ದಿತ್ತು. 56 ವರ್ಷದ ಕರ್ಸ್ಟನ್​ ಪ್ರಸಕ್ತ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ಬ್ಯಾಟಿಂಗ್​ ಕೋಚ್​ ಮತ್ತು ಮೆಂಟರ್​ ಆಗಿದ್ದಾರೆ. ಐಪಿಎಲ್​ನಲ್ಲಿಯೂ ಇವರ ನೇತೃತ್ವದಲ್ಲಿ ಗುಜರಾತ್​ ಚೊಚ್ಚಲ ಪ್ರಯತ್ನದಲ್ಲೇ ಕಪ್​ ಗೆದ್ದು ಸಂಭ್ರಮಿಸಿತ್ತು. ಕಳೆದ ಬಾರಿ ತಂಡ ಫೈನಲ್​ ಕೂಡ ಪ್ರವೇಶಿಸಿತ್ತು. ಇದೀಗ ಪಾಕ್​ ತಂಡ ಕೂಡ ಇದೇ ವರ್ಷ ನಡೆಯುವ ಟಿ20 ವಿಶ್ವಕಪ್​ ಮೇಲೆ ಕಣ್ಣಿಟ್ಟಿದ್ದು ಇದಕ್ಕಾಗಿಯೇ ತಂಡಕ್ಕೆ ಸೂಕ್ತ ಕೋಚ್​ಗಳನ್ನು ನೇಮಿಸಲು ಮುಂದಾಗಿದೆ. ಈಗಾಗಲೇ ಪಾಕಿಸ್ತಾನ ಆಟಗಾರರು ಅಲ್ಲಿನ ಸೇನಾ ಪಡೆಯಲ್ಲಿ ಕಠಿಣ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಇತರ ತಂಡದಂತೆ ಫಿಟ್​ ಆಗಲು ಪ್ರಯತ್ನಿಸುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ತಂಡ(Pakistan Cricket Team) ಕೂಡ ಫಿಟ್​ನೆಸ್​ ಕಾಯ್ದಕೊಳ್ಳುವ ಸಲುವಾಗಿ ಕಾಕುಲ್‌ನಲ್ಲಿರುವ ಆರ್ಮಿ ಸ್ಕೂಲ್ ಆಫ್ ಫಿಸಿಕಲ್ ಟ್ರೈನಿಂಗ್ (ಎಎಸ್‌ಪಿಟಿ) ನಲ್ಲಿ ಎರಡು ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಇದರ ಹಲವು ವಿಡಿಯೊಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಕೂಡ ಆಗಿದೆ.

ಇದನ್ನೂ ಓದಿ IPL 2024: ಕ್ಯಾಚ್​ ಮೂಲಕ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಕಿಂಗ್​ ಕೊಹ್ಲಿ

ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಮರು ನೇಮಕಗೊಂಡ ನಾಯಕ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸೇನೆಯೊಂದಿಗೆ ತರಬೇತಿ ನಡೆಸಿತು. ಆರ್ಮಿ ತರಬೇತಿಯ ಅನುಭವ ಹಂಚಿಕೊಂಡ ಆಟಗಾರರು ಇದೇ ರೀತಿಯ ಅಭ್ಯಾಸ ನಡೆಸಿದರೆ ನಮ್ಮ ತಂಡ ಕೂಡ ಫುಲ್​ ಫಿಟ್​ ಆಗಲಿದೆ ಎಂದರು. ಕಳೆದ ವರ್ಷ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ವೇಗಿ ನಸೀಮ್ ಶಾ ಅವರು ಹಿಂದೆಂದು ಕೂಡ ಈ ರೀತಿಯ ಫಿಟ್​ನೆಸ್​ ತರಬೇತಿ ನಡೆಸಿಲ್ಲ ಎಂದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರ ನೇತೃತ್ವದಲ್ಲಿ ಈ ಪ್ರಯೋಗ ನಡೆಸಲಾಗುತ್ತಿದೆ.

ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಫಖರ್ ಜಮಾನ್, ಸಾಹಿಬ್ಜಾದಾ ಫರ್ಹಾನ್, ಹಸೀಬುಲ್ಲಾ, ಸೌದ್ ಶಕೀಲ್, ಉಸ್ಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್, ಸಲ್ಮಾನ್ ಅಲಿ ಅಘಾ, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಇರ್ಫಾನ್ ಖಾನ್ ನಿಯಾಜಿ, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್, ಉಸ್ಮದ್ ವಾಸಿಮ್, ನವಾಜ್, ಮೆಹ್ರಾನ್ ಮುಮ್ತಾಜ್, ಅಬ್ರಾರ್ ಅಹ್ಮದ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಹಸನ್ ಅಲಿ, ಮೊಹಮ್ಮದ್ ಅಲಿ, ಜಮಾನ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಮೀರ್ ಜಮಾಲ್, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ಅಮೀರ್ ಮಿಲಿಟರಿ ಡ್ರಿಲ್‌ಗಳಲ್ಲಿ ಭಾಗವಹಿಸಿದ ಆಟಗಾರರು.

Exit mobile version